ಪತ್ನಿ ಅನುಷ್ಕಾಗೆ ಕಾಫಿ ಕೊಟ್ಟು, ವಿರಾಟ್ ಕೇಳಿದ ಪ್ರಶ್ನೆ ಏನ್ ಗೊತ್ತಾ..?!!

23 Mar 2019 2:01 PM | Entertainment
624 Report

ಕ್ರಿಕೆಟಿಗ  ವಿರಾಟ್ ಕೊಹ್ಲಿ ಹಾಗೂ  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿರುವ ಕಪಲ್. ಅಂದಹಾಗೇ ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗೆ ಇಬ್ಬರೂ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡು….. ಆ ದಿನದ ಜಾಹಿರಾತಿನ ಶೂಟ್ ನಡೆದ ಕ್ಷಣವನ್ನು ನೆನೆಸಿಕೊಂಡು ಖುಷಿ ಹಂಚಿಕೊಂಡಿದ್ದಾರೆ.

ಈ ಜಾಹೀರಾತು ಮಾಡುವಾಗ ನನಗಂತೂ ತುಂಬಾ ಖುಷಿಯಾಯ್ತು. ಟ್ವಿಟ್ಟರ್’ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಶುದ್ಧ ಹಾಸ್ಯ ಪ್ರೀತಿ ಎಂದು ಬರೆದುಕೊಂಡಿದ್ದಾರೆ.ಈ ಜಾಹೀರಾತಿನಲ್ಲಿ ವಿರಾಟ್ ಕೆಲಸಲ್ಲಿ ಬ್ಯುಸಿ ಇರುವ ಪತ್ನಿ ಅನುಷ್ಕಾಗೆ ಒಂದು ಕಪ್ ಕಾಫಿ ನೀಡುತ್ತಾರೆ. ಅನುಷ್ಕಾ ಕಾಫಿ ಕುಡಿಯಲು ಮುಂದಾದಾಗ ಆಕೆಯನ್ನು ತಡೆದ ವಿರಾಟ್ ,ನಮ್ಮ ಪ್ರೀತಿಯಲ್ಲಿ ಏನು ವಿಶೇಷವಿದೆ ಎಂದು ಎಲ್ಲರು ಕೇಳುತ್ತಾರೆ ಎಂದರು. ಆಗ ಅನುಷ್ಕಾ ಏನೂ ವಿಶೇಷ ಇಲ್ಲ, ಶುದ್ಧ ಪ್ರೀತಿ ಎಂದು ನಗುತ್ತಾರೆ.ಈ ಹಿಂದೆ ಅಂದರೆ ವಿರಾಟ್ ಹಾಗೂ ಅನುಷ್ಕಾ ಮದುವೆ ಆಗುವ ಮೊದಲು ಜಾಹೀರಾತುನಲ್ಲಿ ಕಾಣಿಸಿಕೊಂಡಿದ್ದರು.

ಜಾಹೀರಾತು ಮೂಲಕವೇ ಪ್ರೀತಿ ಅನಾವರಣಗೊಳಿಸಿದ್ದರು. ಈಗ ಅದೇ ಶೈಲಿಯಲ್ಲಿ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿರುವ ಈ ಜೋಡಿ ಒಂದು ವರ್ಷದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಮೊದಲು ಇಬ್ಬರ ಪ್ರೀತಿ ಆರಂಭವಾಗಿದ್ದೇ ಜಾಹಿರಾತು ಮೂಲಕ. ಇದೀಗ ಅಂತಹ ಜಾಹೀರಾತೇ ಉತ್ತಮ ಸಂಸಾರಕ್ಕೆ ಸಾಕ್ಷಿಯಾಗುತ್ತಿದೆ. ಅದ್ದೂರಿಯಾಗಿ ಹಸೆಮಣೆ ಏರಿದ ಈ ಜೋಡಿ ಮದುವೆ ಬಾಲಿವುಡ್'ನಲ್ಲಿ ಭಾರೀ ಸೌಂಡೇ ಮಾಡಿದ್ರು.

Edited By

Kavya shree

Reported By

Kavya shree

Comments