ಮತ್ತೊಂದು ವಿವಾದದಲ್ಲಿ ಪಿಎಂ ನರೇಂದ್ರ ಮೋದಿ ಸಿನಿಮಾ..?!!!

23 Mar 2019 1:26 PM | Entertainment
258 Report

ನರೇಂದ್ರ ಮೋದಿ ಕುರಿತಾಗಿ ಮಾಡಿದ ಸಿನಿಮಾದ ಪೋಸ್ಟರ್ ಇದೀಗ ರಿಲೀಸ್ ಆಗಿದ್ದು, ಭಾರೀ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಪಿಎಂ.ನರೇಂದ್ರ ಮೋದಿ ಸಿನಿಮಾ  ಟ್ರೇಲರ್ ನೋಡಿದ ಕೆಲ ಸ್ಟಾರ್ ನಟರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಏಫ್ರಿಲ್ 5 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಒಂದರ ಹಿಂದೆ ಒಂದು ವಿವಾದಕ್ಕೊಳಗಾಗುತ್ತಿದೆ.

 ಸದ್ಯ ಬಿಡುಗಡೆಯಾಗಿರುವ ಪೋಸ್ಟರ್’ನಲ್ಲಿ ಚಿತ್ರ ಸಾಹಿತಿ ಜಾವೇದ್  ಅಕ್ಷರ್  ಹಾಗೂ ಸಮೀರ್ ಅವರ ಹೆಸರು ಕಾಣಿಸಿಕೊಂಡಿದೆ. ಆದರೆ ತಾವು ಈ ಸಿನಿಮಾಕ್ಕೆ  ಸಾಹಿತ್ಯ ಬರೆದಿಲ್ಲ ಎಂದು ಇವರಿಬ್ಬರು ಹೇಳಿಕೊಂಡಿದ್ದಾರೆ. ಅದೇಗೆ ಪೋಸ್ಟರ್ ನಲ್ಲಿ ಇಬ್ಬರ ಹೆಸರು ಬಂತು ಎಂಬುದೇ ಅನುಮಾನ…!ಪಿ ಎಂ ನರೇಂದ್ರ ಮೋದಿ ಸಿನಿಮಾಗೆ ತಾವು ಯಾವುದೇ ಹಾಡನ್ನು ಬರೆದಿಲ್ಲ ಎಂದು ಜಾವೇದ್  ಟ್ವೀಟ್ ಮಾಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಮೀರ್, ಪೋಸ್ಟರ್ ನೋಡಿ ಅಚ್ಚರಿಯಾಯ್ತು.

ನನಗೆ ಈ ರೀತಿಯ ಅನುಭವ ಆಗುತ್ತಿರುವುದು ಇದೇ ಮೊದಲು. ಈ ಬಗ್ಗೆ ವಿಚಾರಿಸೋಣವೆಂದರೆ ಚಿತ್ರತಂಡದ ಯಾವೊಬ್ಬರು ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಾರೆ. ಇದು ಹೇಗಾಯ್ನತು ಎಂಬುದನ್ಟನು ಮೊದಲು ನಾನು ಕ್ಲಾರಿಫಿಕೇಷನ್ ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ. ವಿವೇಕ್ ಓಬೆರಾಯ್ ಅವರು ಲೀಡ್ ರೋಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.

Edited By

Kavya shree

Reported By

Kavya shree

Comments