ನಟಿ ವಿಜಯಲಕ್ಷ್ಮಿ ವಿರುದ್ಧ ಎಫ್ ಐ ಆರ್…!!!

23 Mar 2019 12:43 PM | Entertainment
288 Report

ಸ್ಯಾಂಡಲ್’ವುಡ್ ನಟಿ ವಿಜಯಲಕ್ಷ್ಮಿ  ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ತನಗೆ ಆರ್ಥಿಕ ಸಹಾಯ ಮಾಡಿ ಎಂದು ವಿಡಿಯೋ ಮೂಲಕ  ಅಂಗಲಾಚಿದ್ದರು. ಇದೀಗ ನಟ ರವಿ ಪ್ರಕಾಶ್, ನಟಿ ವಿಜಯಲಕ್ಷ್ಮಿ ಮತ್ತು ಆಕೆಯ ಸಹೋದರಿಯ ಮೇಲೆ ದೂರು ಕೊಟ್ಟಿದ್ದಾರೆ. ನಾನು ಆಕೆಯ ಆಸ್ಪತ್ರೆಗೆ ಖರ್ಚಿಗೆಂದು ಹಣ ಸಹಾಯ ಮಾಡಿದ್ದೇನೆ. ಆದರೆ ಅವರು ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ, ಸಮಾಜದಲ್ಲಿ ನನ್ನ ಮಾನ, ಗೌರವವನ್ನು ಹಾಳು ಮಾಡಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ರವಿ ದೂರು ಕೊಟ್ಟಿದ್ದಾರೆ.

Related image

ನಟಿ ವಿಜಯಲಕ್ಷ್ಮಿ, ರವಿ ಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ರು. ನನಗೆ ಮಾನಸಿಕವಾಗಿ ಲೈಂಗಿಕ  ಕಿರುಕುಳ ನೀಡುತ್ತಿದ್ದಾರೆಂದು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಅವರ ವಿರುದ್ಧ ಕಂಪ್ಲೇಂಟ್ ಕೂಡ ಕೊಟ್ಟಿದ್ದರು.ಈ ಕುರಿತಾಗಿ ನಟ ರವಿ ಪ್ರಕಾಶ್, ಮಾಧ್ಯಮಗಳಲ್ಲಿ ಸ್ಪಷ್ಟೀಕರಣ  ಕೊಟ್ಟಿದ್ದರು. ನನ್ನ ಬಳಿಯೇ ಹಣ ತೆಗೆದುಕೊಂಡು ನನ್ನ ವಿರುದ್ಧ ಆರೋಪ ಮಾಡಿ ನಟಿ ವಿಜಯಲಕ್ಷ್ಮಿ ನನ್ನ ಘನೆತೆಗೆ, ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆಂದು ದೂರು ನೀಡಿದ್ದಾರೆ. ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.  ನನಗೆ ಯಾರಾದರೂ ಆರ್ಥಿಕ ಸಹಾಯ ಮಾಡಿ ಎಂದು  ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ನಾನು ಮಾಡಿದ ವಿಡಿಯೋವನ್ನು ನೋಡಿ ನಟ ರವಿಪ್ರಕಾಶ್ ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಒಂದು ಲಕ್ಷ ನಗದು ಸೇರಿದಂತೆ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು. ಇದಾದ ನಂತರ ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರೋದು, ಪದೇ ಪದೇ ಫೋನ್, ಮೆಸೇಜ್ ಮಾಡೋದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ದೂರಿನಲ್ಲಿ ಆರೋಪಿಸಿದ್ದರು.

Edited By

Kavya shree

Reported By

Kavya shree

Comments