ರಾಕಿಂಗ್ ಸ್ಟಾರ್’ಗೆ ಮತ್ತೊಂದು ತಲೆನೋವು : ಅಮ್ಮನಿಂದ ಕೋರ್ಟ್'ಗೆ ಅರ್ಜಿ..?!!!

23 Mar 2019 11:49 AM | Entertainment
693 Report

ರಾಕಿಂಗ್ ಸ್ಟಾರ್ ಸದ್ಯ ಸುಮಲತಾ ಪರ ಕ್ಯಾಂಪೇನ್ ನಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಜೊತೆಗೆ ರಾಜಕೀಯವಾಗಿ ಬಹಳ  ಟ್ರೋಲ್ ಆದ ಯಶ್’ಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಒಂದಷ್ಟು ದಿನ ಮನೆ ಖಾಲಿ ಮಾಡೋ ವಿಚಾರವಾಗಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದ ಯಶ್ ಇದೀಗ ಮತ್ತೆ ಮನೆ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಾಡಿಗೆ ಮನೆಯಲ್ಲಿದ್ದು ಕೊಡು ಸರಿಯಾಗಿ ಮನೆ ಬಾಡಿಗೆ ಕಟ್ಟುತ್ತಿಲ್ಲವೆಂದು ಮನೆ ಮಾಲೀಕ ಯಶ್ ವಿರುದ್ಧ ದೂರು ಕೊಟ್ಟಿದ್ದರು. ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದಕ್ಕೆ ಯಶ್ ಕೂಡ ಸ್ಪಷ್ಟೀಕರಣ ಕೊಟ್ಟಿದ್ದರು.

Image result for yash

ಕುಟುಂಬ ನ್ಯಾಯಾಲಯದ ಆದೇಶದಂತೇ ಇದೇ ಮಾರ್ಚ್ 31 ರೊಳಗೆ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುಬವ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಿತ್ತು. ಆದರೆ ಇದೀಗ ಯಶ್ ಅವರ ತಾಯಿ ಪುಷ್ಪಾ ಇನ್ನು ಆರು ತಿಂಗಳು ಕಾಲ ಇದೇ ಮನೆಯಲ್ಲಿ ನೆಲೆಸಲು ಅವಕಾಶ ಕೊಡಿ ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.ತಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದ್ದು, ಅಲ್ಲಿ ಈಗಾಗಲೇ ಮನೆ ನಿರ್ಮಾಣ ಕಾರ್ಯ ಆರಂಭವಾಗ್ತಿದೆ. ಇನ್ನು 6 ತಿಂಗಳೊಳಗೆ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತಮಗೆ ಈಗ ವಾಸಿಸುತ್ತಿರುವ ಬಾಡಿಗೆ ಮನೆಯಲ್ಲಿ ಆರು ತಿಂಗಳು ವಾಸ್ತವ್ಯ ಮುಂದುವರೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಪುಷ್ಪಾ ಕೋರಿದ್ದಾರೆ. ಮನೆ ಮಾಲಿಕರು ಎಂ. ಮುನಿಪ್ರಸಾದ್ ಮತ್ತು ಬಾಡಿಗೆದಾರರಾದ ನಟ ಯಶ್ ಕುಟುಂಬದ ನಡುವೆ ವ್ಯಾಜ್ಯ ತಲೆದೋರಿದ  ಹಿನ್ನಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 25 ಲಕ್ಷ ರೂಪಾಯಿಗಳನ್ನು ಠೇವಣಿಯಾಗಿರಿಸಿಕೊಂಡಿದ್ದಲ್ಲದೆ 2019 ರ ಮಾರ್ಚ್ 31 ರೊಳಗೆ ಮನೆ ಖಾಲಿ ಮಾಡುವಂತೆ ಯಶ್ ಕುಟುಂಬಕ್ಕೆ ಆದೇಶಿಸಿತ್ತು.

Edited By

Kavya shree

Reported By

Kavya shree

Comments