ಸಿನಿಮಾವಾಗ್ತಿದೆ ಜಯಲಲಿತಾ ಜೀವನ : 'ತಲೈವಿ' ಯಾಗಿ ಬರ್ತಾಯಿರೋ ಆ ಸ್ಟಾರ್ ನಾಯಕಿ ಯಾರ್ ಗೊತ್ತಾ..?!!!

23 Mar 2019 11:20 AM | Entertainment
287 Report

ಅಂದಹಾಗೇ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜೀವನ ಇದೀಗ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಎಷ್ಟೋ ಜನರಿಗೆ ಜಯಲಲಿತಾ ಜೀವನ ಕುರಿತಾಗಿ ತಿಳಿದುಕೊಳ್ಳುವ ಆಸಕ್ತಿಯಿದೆ. ಆಕೆ ನಡೆದು ಬಂದ ಮುಳ್ಳಿನ ಹಾದಿ ಸುಪತ್ತಿಗೆ ಹಾಗಿದ್ದೇಗೆ ಎನ್ನುವುದನ್ನು ತೆರೆ ಮೇಲೆ ತೋರಿಸಲು ನಿರ್ದೇಶಕರೊಬ್ಬರು ರೆಡಿಯಾಗಿದ್ದಾರೆ. ತಮಿಳರ ಆರಾಧ್ಯ ದೈವ ಜಯಲಲಿತಾ ಒಬ್ಬ ಕಲಾವಿದೆ ಎಂದು ಎಲ್ಲರಿಗೂ ಗೊತ್ತು. ಇಂದಿಗೂ ತಮಿಳುನಾಡಿನಲ್ಲಿ ಜಯಲಲಿತಾ ಅವರನ್ನು ಅಮ್ಮಾ ಎಂದೇ ಕರೆಯಲಾಗುತ್ತಿದೆ. ದಿವಂಗತ ಜಯಲಲಿತಾ ಕುರಿತಾದ ಆ ಬಯೋಪಿಕ್ ಇಂಟ್ರೆಸ್ಟಿಂಗ್ ಆಗಿದ್ದೂ, ಬಹಳ ಅಭಿಮಾನಿಗಳನ್ನು ಸೆಳೆಯಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗುತ್ತಿದೆ.

ಅಂದಹಾಗೇ ಜಯಲಲಿತಾ ರಾಜಕೀಯವಾಗಿ ಬಹಳ ಧೈರ್ಯಶಾಲಿ ಮಹಿಳೆಯಾಗಿ ಸೈ ಎನಿಸಿಕೊಂಡಿದ್ದವರು.  ಸಿನಿಮಾಗೆ ಏನ್ ಹೆಸರು ಗೊತ್ತಾ..? ತಲೈವಿ’ ಎಂದು ಹೆಸರಿಡಲಾಗಿದೆ. ಎ.ಎಲ್. ವಿಜಯ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿದೆ.ಅಂದಹಾಗೇ ಜಯಲಲಿತಾ ಸಿನಿಮಾ ಭರ್ಜರಿಯಾಗಿಯೇ ಮೂಡಿ ಬರಲಿದೆ. ಅಂದಹಾಗೇ ಆ ಪಾತ್ರ ಮಾಡುತ್ತಿರುವವರು ಯಾರು ಗೊತ್ತೇ…?  ಕೆಲ ಮೂಲಗಳ ಮಾಹಿತಿ  ಪ್ರಕಾರ ಜಯಲಲಿತಾ ಪಾತ್ರಕ್ಕೆ ಬಾಲಿವುಡ್ ನಟಿ ಕಂಗನಾ ರನಾವತ್ ರನ್ನು ಕರೆತರಲಾಗುತ್ತಿದೆಯಂತೆ.

Image result for kangana ranautಕಂಗನಾನೇ ಈ ಪಾತ್ರಕ್ಕೆ ಬೆಸ್ಟ್ ಎಂಬ ಪ್ರತಿಕ್ರಿಯೆ ಬರುತ್ತಿದ್ದು ಅವರನ್ನೇ ತರುವಲ್ಲಿ ಚರ್ಚೆ ನಡೀತಿದ್ಯಂತೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಸವಾಲಿನ ಪಾತ್ರಮಾಡಿ ಸೈ ಎನಿಸಿಕೊಂಡಿರುವ ರನಾವತ್ ಜಯಲಲಿತಾ ಪಾತ್ರ ಮಾಡಬೇಕಾದರೆ ಸಾಕಷ್ಟು ತಯಾರಿ ನಡೆಸಬೇಕಾಗುವುದಂತೂ ನಿಜ.

Edited By

Kavya shree

Reported By

Kavya shree

Comments