ಅಂತೂ ಇಂತೂ ‘ಅಗ್ನಿಸಾಕ್ಷಿ’ ಮುಗಿತಾ…!! ಸನ್ನಿಧಿ ಜಾಗಕ್ಕೆ ‘ರಂಗನಾಯಕಿ’ ಬರ್ತಾಳಾ..?

23 Mar 2019 10:55 AM | Entertainment
3015 Report

ಕನ್ನಡ ಕಿರುತೆರೆಯಲ್ಲಿ ಕೆಲವೊಂದು ಧಾರವಾಹಿಗಳು ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.. ಅದರಲ್ಲಿ ಅಗ್ನಿಸಾಕ್ಷಿ ಧಾರವಾಹಿ ಕೂಡ ಒಂದು… ಸುಮಾರು 6 ವರ್ಷಗಳಿಂದ ಪ್ರಸಾರ ವಾಗುತ್ತಿರುವ ಧಾರವಾಹಿ ಗೆ ಅಭಿಮಾನಿಗಳ ಬಳಗ ಸಾಕಷ್ಟಿದೆ.. ಸಿದ್ದಾರ್ಥ್ ಸನ್ನಿಧಿಯ ಜೋಡಿಗೆ ಮರುಳಾದ ಅಭಿಮಾನಿಗಳು ಅದೆಷ್ಟೊ ಗೊತ್ತಿಲಲ್ಲ..ಅಂದಿನಿಂದ ಇಂದಿನವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಗ್ನಿಸಾಕ್ಷಿ ಯಶಸ್ವಿಯಾಗಿದೆ ಎನ್ನಬಹುದು.. ರಾತ್ರಿ 8 ಗಂಟೆ ಆಯಿತು ಅಂದರೆ ಸಾಕು ಮಾಡೋ ಕೆಲಸವನ್ನುಬಿಟ್ಟು ಟಿವಿ ಮುಂದೆ ಹಾಜರಾಗುತ್ತಾರೆ..ಇತ್ತಿಚಿಗಷ್ಟೆ ಚಂದ್ರಿಕಾ ಬಣ್ಣ ಬಯಲಾಗಿದೆ.. ಇದರಿಂದ ಅಭಿಮಾನಿಗಳು ಸದ್ಯ ಈಗಾದರೂ ಸತ್ಯ ತಿಳಿಯಿತ್ತಲ್ಲ ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.. 

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಗೆ ಅದೆಷ್ಟೋ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಧಾರವಾಹಿ ಇತ್ತೀಚೆಗೆ ಪಡೆದುಕೊಳ್ಳುತ್ತಿರುವ ತಿರುವು ನೋಡಿದರೆ ಅಭಿಮಾನಿಗಳಿಗೆ ಈ ಧಾರವಾಹಿ ಮುಗಿದೇ ಹೋಗುತ್ತಿದೆಯಾ ಎಂಬ ಅನುಮಾನ ಕಾಡಲು ಪ್ರಾರಂಭವಾಗಿದ್ಯಂತೆ. ಸದ್ಯ ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ, ಅತ್ತ ರಾಧಿಕಾನೂ ಸನ್ನಿಧಿ ಭೇಟಿಯಾಗಿ ಆಗಿದೆ. ಇನ್ನು ಸಿದ್ಧಾರ್ಥ್ ವಾಪಾಸ್ ಆಗುವುದು ಮತ್ತು ಚಂದ್ರಿಕಾಗೆ ಶಿಕ್ಷೆ ಸಿಗುವುದಷ್ಟೇ ಬಾಕಿ ಇರೋದು. ಹಾಗಿದ್ದರೆ ಅಗ್ನಿಸಾಕ್ಷಿ ಇಲ್ಲಿಗೇ ಮುಗಿಯಿತಾ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ..

ಅಷ್ಟೆ ಅಲ್ಲದೆ ಅದರ ಜೊತೆಗೆ 'ರಂಗನಾಯಕಿ' ಎನ್ನುವ ಹೊಸ ಧಾರವಾಹಿಯ ಪ್ರೋಮೋ ಬರುತ್ತಿರುವುದು ನೋಡಿ ಅಭಿಮಾನಿಗಳಿಗೆ ಅನುಮಾನವಾಗಿದೆ. ಆದರೆ 'ಅಗ್ನಿಸಾಕ್ಷಿ' ಮುಗಿಯುತ್ತಿಲ್ಲ. ಕತೆ ಇನ್ನೊಂದು ತಿರುವು ಪಡೆಯುತ್ತದೆ ಎಂಬ ಸುದ್ದಿ ಧಾರವಾಹಿ ಮೂಲಗಳಿಂದ ಬಂದಿದೆ. ಹೀಗಾಗಿ ಅಪ್ಪಟ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಸಮಧಾನ ಪಟ್ಟುಕೊಳ್ಳಬಹುದು.

Edited By

Manjula M

Reported By

Manjula M

Comments