ಅಭಿಮಾನಿ ಕೇಳಿದ ತಕ್ಷಣ ತನ್ನ ಮೊಬೈಲ್ ನಂಬರ್ ನೀಡಿದ ಕೆಜಿಎಫ್ ಕ್ವೀನ್…

22 Mar 2019 5:55 PM | Entertainment
1399 Report

ಅಂದಹಾಗೇ ಮೊದಲ ಸಿನಿಮಾದಲ್ಲೇ ನ್ಯಾಷನಲ್ ಸ್ಟಾರ್ ಹೀರೋಯಿನ್ ಆಗಿ ಫೇಮಸ್ ಆದ ನಟಿ ಶ್ರೀನಿಧಿ  ಶೆಟ್ಟಿಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್. ಅಭಿಮಾನಿಗಳ ಕೈಗೆ ಸ್ಟಾರ್ ನಾಯಕಿರು ಸಿಗೋದು ಅಂದ್ರೆ ಸುಮ್ನೆನಾ...? ಅವರ ಜೊತೆ ಫೋಟೋ ತೆಗೆದುಕೊಳ್ಳೋದು, ಅವರನ್ನು ಮೀಟ್ ಮಾಡೋದು ಬಹಳ ಕಷ್ಟವೇ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ  ನಾಯಕಿಯರು ಸಿಗೋದು ಕನಸಿನ ಮಾತೇ ಸರಿ. ಆದರೆ ಕೆಜಿಎಫ್ ಕ್ವೀನ್  ನಾಯಕಿ ಶ್ರೀನಿಧಿ ಶೆಟ್ಟಿ ತಮ್ಮ ಅಭಿಮಾನಿಗಳಿಗಾಗಿ ಒಂದು ಅವಕಾಶ ಕೊಟ್ಟಿದ್ದರು.

Image result for actress kgF heroine

ತಮ್ಮ ಇನ್ಸಾಟ್ರಾಗ್ರಾಂ ನಲ್ಲಿ  ನೀವು ಕೇಳೋ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ ಎಂದಿದ್ದರು. ಅದರಂತೇ ಶ್ರೀ ನಿಧಿ ಶೆಟ್ಟಿಗೆ ಅಭಿಮಾನಿಗಳೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು. ಇನ್ನೊಂದಿಷ್ಟು ಮಂದಿ ನಾವ್ ಏನ್ ಕೇಳಿದ್ರು ನೀವ್ ಆನ್ಸರ್ ಮಾಡ್ತೀರಾ..? ಕೊಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ನಟಿ ನೀವ್ ಏನ್ ಕೇಳಿದ್ರು ನಾನು ಕೊಡ್ತೀನಿ ಎಂದಿದ್ದಾರೆ. ಅದರಲ್ಲೊಬ್ಬ ಅಭಿಮಾನಿ ನಿಮ್ಮ ಪರ್ಸನಲ್ ಮೊಬೈಲ್ ನಂಬರ್ ಕೊಡಿ ಎಂದಿದ್ದಾರೆ. ಅದಕ್ಕೇ ಶ್ರೀ ನಿಧಿ ಶೆಟ್ಟಿ ಅಯ್ಯೋ, ಯಾಕಿಲ್ಲ ಎಂದು ತಮ್ಮ ನಂಬರ್ ಕೊಟ್ಟಿದ್ದಾರೆ. ಎಷ್ಟೇ ಆದ್ರು ಹೀರೋಯಿನ್'ಗಳು, ಹಾಗೆಲ್ಲಾ ತಾವು ಬಳಸೋ ನಂ, ಕೊಡಲ್ಲ ಎಂದು ಭಾವಿಸಿದ್ದ ಅಭಿಮಾನಿಗೆ ಶಾಕ್ ಕಾದಿತ್ತು. ಯಾಕಂದ್ರೆ ಆಕೆ ಕೊಟ್ಟಿದ್ದು ತಾನು ಬಳಸ್ತಾ ಇರೋ ಮೊಬೈಲ್ ನಂಬರ್ ಅನ್ನೇ. ಟ್ರೂ ಕಾಲ್ ನಲ್ಲಿ ಚೆಕ್ ಮಾಡಿದಾಗ ಅದು ಶ್ರೀನಿಧಿ ಶೆಟ್ಟಿ ನಂಬರ್ ಎಂದೇ ಖಚಿತವಾಗಿದೆ.

Related imageಮಾಡಿದ್ದು ಕನ್ನಡದಲ್ಲಿ ಒಂದೇ ಸಿನಿಮಾವಾದ್ರು ಅಪಾರ ಅಭಿಮಾನಿಗಳ ಮನಗೆದ್ದಿರುವ ಈ ಸ್ಟಾರ್ ಹೀರೋಯಿನ್ ಗೆ ಅನೇಕ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಬಾಯಲ್ಲಿ ಮಾತನಾಡಿ, ಎದುರು ಬಂದಾಗ ಅಭಿಮಾನಿಗಳನ್ನು ಸರಿಯಾಗಿ ಟ್ರೀಟ್ ಮಾಡದೇ ಇರೋ ಸ್ಟಾರ್ ನಾಯಕಿಯರ ಮಧ್ಯೆ ಇಂತಹ ಒಬ್ಬ ನಾಯಕಿ ಇದ್ದಾರೆಯೇ ಎನ್ನುತ್ತಿದ್ದಾರೆ ಫ್ಯಾನ್ಸ್. ಅಭಿಮಾನಿಗಳೇ ನಮಗೆಲ್ಲಾ …ಎನ್ನೋ ಹೊಸ ನಾಯಕಿ ಶ್ರೀನಿಧಿಗೆ ಮತ್ತಷ್ಟು ಅವಕಾಶಗಳು ಅರಸಿ ಬರಲಿ, ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹರಸುತ್ತಿದ್ದಾರೆ ಅಭಿಮಾನಿಗಳು.

Edited By

Kavya shree

Reported By

Kavya shree

Comments