ತಮ್ಮ ಹಳೆಯ ಲವ್ ಸ್ಟೋರಿ ಬಿಚ್ಚಿಟ್ಟ ನವರಸ ನಾಯಕ ಜಗ್ಗೇಶ್…!!!

22 Mar 2019 4:45 PM | Entertainment
410 Report

ನವರಸ ನಾಯಕ ಜಗ್ಗೇಶ್ ರಮ್ಯಾ ಅವರನ್ನು ಕಾಲೆಳೆಯುತ್ತಲೇ ಎಲೆಕ್ಷನ್'ನಲ್ಲಿ ಸುಮಲತಾಗೆ ನಾನು ಸಪೋರ್ಟ್ ಮಾಡ್ತೀನಿ ಎಂದ್ರು. ರಮ್ಯಾರನ್ನು ಅಂಬಿ ಪತ್ನಿ ಸುಮಲತಾಗೆ ಹೋಲಿಸಬೇಡಿ ಎಂದು ರಮ್ಯಾ ವಿರುದ್ಧ ಖಡಕ್ ಟಾಂಗ್ ಕೊಟ್ರು. ಆದ್ರೂ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ.  ಜಗ್ಗೇಶ್ ಸದ್ಯ ಸಿಕ್ಕಾಪಟ್ಟೆ  ಖುಷಿಯಲ್ಲಿದ್ದಾರೆ. ತಮ್ಮ ಹಳೆಯ ಲವ್ ಸ್ಟೊರಿ ನೆನೆದು ದಿಲ್ ಖುಷ್ ಆಗಿದ್ದಾರೆ. ಜಗ್ಗೇಶ್’ ಖುಷಿಗೆ ಕಾರಣವೇನು ಗೊತ್ತಾ..? ಜಗ್ಗೇಶ್ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪರಿಮಳ ಜೊತೆಗಿನ 35 ವರ್ಷದ ಬಾಳ ನೌಕೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲದೇ ಅವರು ತಮ್ಮ ಪ್ರೀತಿಯ ಪ್ಲ್ಯಾಶ್ ಬ್ಯಾಕ್’ನ್ನು ಹಂಚಿಕೊಂಡಿದ್ದಾರೆ.

Image result for jaggesh with wife

ಟ್ವಿಟ್ಟರ್’ನಲ್ಲಿ ಆ ಕಷ್ಟ ದಿನಗಳನ್ನೇ ಸವಿ ನೆನಪು ಎನ್ನುವ ಜಗ್ಗೇಶ್, ಕೇವಲ 2 ಸಾವಿರ ರೂ ನಲ್ಲಿ ಮದುವೆಯಾಗಿದ್ದೆವು ಎನ್ನುತ್ತಾರೆ. ಪರಿಮಳರನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡೆ. ಸದ್ಯ ನನ್ನ ಮದುವೆಯಾಗಿ 35 ವರ್ಷವಾಗಿವೆ. ಅಂದು ತುಂಗಾ ತೀರದಲ್ಲಿ ಕಲ್ಲಿನ ಮೇಲೆ ಕೆತ್ತಿದ ಜಾಗದಲ್ಲಿ ನಾವಿಬ್ಬರು ಕುಳಿತುಕೊಂಡು ನಡೆದು ಬಂದ ಕಷ್ಟ-ಸುಖದ, ಸ್ವಾಭಿಮಾನದ ದಾರಿನೆನೆದು ಕಣ್ಣು ಒದ್ದೆಯಾಯಿತು. ಅರ್ಜುನನ ರಥಕ್ಕೆ ಶ್ರೀಕೃಷ್ಣ ಸಾರಥಿಯಾದರೆ, ನಮ್ಮ ಬದುಕಿನ ಬಂಡಿಗೆ ರಾಯರು ಸಾರಥಿಯಾದರು.

ಹಳೆ ನೆನಪು ಯಾವಾಗಲೂ ಅಮರವಾಗಿರುತ್ತದೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ. ಮಲ್ಲೇಶ್ವರಂನ 8 ನೇ ಕ್ರಾಸ್ ನಲ್ಲಿರುವ ರಾಯರ ಮಠದಲ್ಲಿ ಒಟ್ಟಿಗೆ ಹೆಜ್ಜೆ ಹಾಕಲು ನಿರ್ಧರಿಸಿದೆವು. 1983 ರಲ್ಲಿ ಪರಸ್ಪರ ಒಪ್ಪಿ ಬಾಳ ಬಂಡಿ ಎಳೆಯಲು  ಶುರು ಮಾಡಿದೆವು. ಆ ದಿನಗಳನ್ನು ಅದೇ ಸ್ಥಳದಲ್ಲಿ ನೆನಸಿಕೊಂಡರೇ ಅದೆಲ್ಲಾ ಹೇಗೆ ಹೋಯ್ತು ಎಂಬುದೇ ಗೊತ್ತಾಗುತ್ತಿಲ್ಲೆವೆಂದರು. ದೇವಸ್ಥಾನದಲ್ಲಿ ತೆಗೆದಿರುವ ಪತ್ನಿಯೊಟ್ಟಿಗಿನ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಮತ್ತು ಪರಿಮಳ ಮೊದಲ ಸಲ ಭೇಟಿಯಾದಾಗ ಜಗ್ಗೇಶ್ ಗೆ 19 ವರ್ಷ ವಯಸ್ಸಾಗಿದ್ರೆ ಪರಿಮಳಾಗೆ ಕೇವಲ 14 ವರ್ಷ ವಯಸ್ಸಾಗಿತ್ತಂತೆ. ಪರಸ್ಪರ ಪ್ರೀತಿಸುತ್ತಿದ್ದ ಇವರು ಮನೆಯವರು ಕಾಣದಂತೇ ರಿಜಿಸ್ಟರ್ ಮದುವೆ ಕೂಡ ಆಗಿದ್ದರಂತೆ.

Image result for jaggesh with wife old photo ಪರಿಮಳ ಅಪ್ರಾಪ್ತರಾಗಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲೂ ಸುದ್ದಿಯಾಗಿತ್ತು. ಈ ಘಟನೆ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಆ ನಂತರ ಮಾನವೀಯತೆ ಆಧಾರದ ಮೇರೆಗೆ ಇಬ್ಬರ ಮದುವೆಗೆ ಸುಪ್ರೀಂ ಒಪ್ಪಿ ಪ್ರೇಮಿಗಳ ಪರ ತೀರ್ಪು ಕೊಟ್ಟಿತ್ತು ಎಂದು ನಗುತ್ತಾರೆ ಜಗಣ್ಣ.ಇಂದು ಮದುವೆಯಾಗಿ 35 ವರ್ಷಗಳು ಕಳೆದಿವೆ ನನಗೆ ಖುಷಿಯಾಗುತ್ತಿದೆ ಎಂದಿದ್ದಾರೆ ಜಗ್ಗೇಶ್.

Edited By

Kavya shree

Reported By

Kavya shree

Comments