ರಶ್ಮಿಕಾ ಆಯ್ತು ಇದೀಗ ಲಿಪ್’ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡ ಕನ್ನಡದ ಸ್ಟಾರ್ ನಟಿ..!!

22 Mar 2019 4:29 PM | Entertainment
6892 Report

ಇತ್ತಿಚಿಗೆ ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಭಾಷೆಗಳಿಯೂ ಕೂಡ ರೊಮ್ಯಾಂಟಿಕ್ ಸೀನ್’ಗಳಿಗೆ ಮಾತ್ರ ಕಡಿಮೆ ಇರಲ್ಲ… ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತ  ಸೀನ್ ಗಳು, ನಟಿ ಮಣಿ ಹಾಟ್ ಪೋಸ್ ಗಳು, ಅವರ ಡ್ರೆಸ್ ಸೆನ್ಸ್ ಎಲ್ಲವೂ ಕೂಡ ನೋಡುಗರ ನಿದ್ದೆ ಕೆಡಿಸುವುದರಲ್ಲಿ ನೋಡೌಟ್.. ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಲಿಫ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು.. ನಿಶ್ಚಿತಾರ್ಥ ಆದ ಮೇಲೆ ಇದೆಲ್ಲಾ ಬೇಕಿತ್ತಾ ಅನ್ನೋದು ಅಭಿಮಾನಿಗಳ ಮಾತಾಗಿತ್ತು. ಆದರೆ ಇದೀಗ ಮತ್ತೊಬ್ಬ ಕನ್ನಡದ ಸ್ಟಾರ್  ನಟಿ ಲಿಫ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಪರಭಾಷೆ ಚಿತ್ರಗಳಲ್ಲಿ ಕನ್ನಡದ ನಟಿಮಣಿಯರ ಲಿಪ್‍ಲಾಕ್‍ ದೃಶ್ಯಗಳು ವೈರಲ್‍ ಆಗ್ತಿವೆ. ಮೊನ್ನೆ ಮೊನ್ನೆಯಷ್ಟೇ ತೆಲುಗಿನ 'ಡಿಯರ್ ಕಾಮ್ರೆಡ್' ಚಿತ್ರದಲ್ಲಿ ವಿಜಯ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಲಿಪ್‍ ಲಾಕ್‍ ಮಾಡಿದ ಸೀನ್ ಭಾರಿ ಸುದ್ದಿಯಾಗಿತ್ತು. ಇದೀಗ ಕನ್ನಡದ ಮತ್ತೊಬ್ಬ ನಟಿ ಶ್ರದ್ಧಾ ಶ್ರೀನಾಥ್‍ ಕಿಸ್ಸಿಂಗ್ ಸೀನ್ ಸುದ್ದಿ ಮಾಡಿದೆ. ತೆಲುಗಿನ ಜೆರ್ಸಿ ಚಿತ್ರದಲ್ಲಿ ನಾಣಿ ಜೊತೆ ಶ್ರದ್ಧಾ ಶ್ರೀನಾಥ್‍ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ಹಾಡೊಂದು ಇದೀಗ ರಿಲೀಸ್ ಆಗಿದ್ದು, ಅದರಲ್ಲಿ ನಾಣಿ ಮತ್ತು ಶ್ರದ್ಧಾ ಲಿಪ್‍ ಲಾಕ್‍ ಮಾಡುವ ದೃಶ್ಯ ವೈರಲ್‍ ಆಗಿದೆ.

ಗೌತಮ್ ತನ್ನಾನುರಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ದ್ ರವೀಂದರ್ ಸಂಗೀತ ನಿರ್ದೇಶನವಿದೆ. ಏಪ್ರಿಲ್ 19 ರಂದು ಈ ಚಿತ್ರ ತೆರೆಗೆ ಬರಲಿದೆ. ಸ್ವಲ್ಪ ದಿನಗಳ ಹಿಂದೆ ಕಿಸ್ಸಿಂಗ್ ಸೀನ್ ಮಾಡಬೇಕು ಎಂದರೆ ಮೊದಲೆ ನನಗೆ ಹೇಳಬೇಕು.. ನಾವು ಆಗ ಮೊದಲೆ  ಸಿದ್ದರಾಗುತ್ತೇನೆ ಎಂದಿದ್ದ ನಟಿ ಇದೀಗ ಲಿಪ್ ಲಾಕ್ ಸೀನ್’ನಲ್ಲಿ ಕಾಣಿಸಿಕೊಂಡಿದ್ದಾರೆ..

Edited By

Manjula M

Reported By

Manjula M

Comments