ಕಾರು ಅಪಘಾತದಲ್ಲಿ ಯುವ ನಿರ್ದೇಶಕ ಸಾವು..!!!

22 Mar 2019 11:20 AM | Entertainment
237 Report

ಖ್ಯಾತ ಯಂಗ್ ನಿರ್ದೇಶಕರೊಬ್ಬರು ಕಾರು ಅಪಘಾತದಲ್ಲಿ  ಸಾವನಪ್ಪಿರುವ ಘಟನೆ ನಡೆದಿದೆ. ಯಂಗ್ ಡೈರೆಕ್ಟರ್ ಹ್ಯಾರಿಸ್ ಹೌದಾಲ್ ಅವರು ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಿರ್ದೇಶಕ ಹ್ಯಾರಿಸ್ ಚಲಾಯಿಸುತ್ತಿದ್ದ ಓಮ್ನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿರುವ ಘಟನೆ  ದಕ್ಷಿಣ ಜಿಲ್ಲೆಯ ಮಾಡಬಿದ್ರೆಯ ಶಿರ್ತಾಯಡಿಯಲ್ಲಿ ನಡೆದಿದೆ.

ಹ್ಯಾರಿಸ್ ಹೌದಾಲ್(30) ಮೃತಪಟ್ಟ ಯುವ ಚಿತ್ರ ನಿರ್ದೇಶಕ. ಹ್ಯಾರಿಸ್ ಹೌದಾಲ್  ಅವರು ತುಳು ಚಿತ್ರದ ನಿರ್ದೇಶಕರಾಗಿದ್ದು, ಹಲವು ಸಿನಿಮಾಗಳನ್ನು ಇವರು ನಿರ್ದೇಶನ ಮಾಡಿದ್ದರೆಂದು ತಿಳಿದು ಬಂದಿದೆ. ಮೃತ ಹ್ಯಾರಿಸ್ ಹೌದಾಲ್ ಕಾರಿನಲ್ಲಿ ಮೂಡಬಿದ್ರೆಯಿಂದ ಶಿರ್ತಾಡಿ ಕಡೆಗೆ ಬೆಳಗ್ಗಿನ ಜಾವ ಹೋಗುತ್ತಿದ್ದರು. ಈ ವೇಳೆ ಮೂಡುಬಿದ್ರೆಯ ಶಿರ್ತಾಡಿ ಬಳಿ ನಿದ್ದೆ ಮಂಪರಿನಲ್ಲಿ ಚಲಾಯಿಸುತ್ತಿದ್ದ ಕಾರು  ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ನಿರ್ದೇಶಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹ್ಯಾರಿಸ್ ನಿರ್ದೇಶನದ ಆಟಿಡೊಂಜಿ ದಿನ ತುಳು ಸಿನಿಮಾ ಶೂಟಿಂಗ್ ನಡೆಯುತ್ತಿತ್ತು.

Edited By

Kavya shree

Reported By

Kavya shree

Comments