ಈ ಬಾರಿ ಆ್ಯಕ್ಷನ್ ಪ್ರಿನ್ಸ್ ಧೃವಾ ಸರ್ಜಾ ಕ್ಯಾಂಪೇನ್ ಯಾರಿಗೆ...?!!!

22 Mar 2019 10:05 AM | Entertainment
270 Report

ಸ್ಯಾಂಡಲ್’ವುಡ್ನಲ್ಲಿ ಈ ಬಾರಿ ಚುನಾವಣೆ ಕಾವು ಜೋರಾಗಿಯೇ ಇದೆ. ಈ ಸಲ ಕನ್ನಡ ಚಿತ್ರರಗದ  ನಟರು ಯಾವ ಕ್ಯಾಂಡಿಡೇಟ್’ಗೆ ಕ್ಯಾಂಪೇನ್ ಮಾಡುವುದು ಎಂಬ ಕನ್ಫ್ಯೂಸ್’ನಲ್ಲಿರೋದಂತೂ  ನಿಜ. ಹೈ ವೊಲ್ಟೋಜ್ ಮಂಡ್ಯ ಈ  ಬಾರಿ ಯಾವ ಸ್ಟಾರ್’ಗೆ ಶಾಕ್ ಕೊಡುತ್ತೋ, ಯಾವ ಸ್ಟಾರ್’ನ ಕೈ ಹಿಡಿಯುತ್ತೋ ಗೊತ್ತಿಲ್ಲ. ಆದರೆ ಸ್ಪರ್ಧಿಗಳಾಗಿರುವ ಸುಮಲತಾ ಮತ್ತು ನಿಖಿಲ್ ಅವರು ಇಡೀ ಚಿತ್ರರಂಗ ನಮ್ಮೊಂದಿಗಿದೆ. ಖಂಡಿತಾ ಅವರೆಲ್ಲಾ ನಮಗೆ ಸಪೋರ್ಟ್’ಗೆ ನಿಲ್ತಾರೆ ಎಂಬ ಭರವಸೆ ನೀಡುತ್ತಲೇ ಇದ್ದಾರೆ. ಈ ನಡುವೆ ನಿನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಾನು ಯಾರ ಪರವೂ ಇಲ್ಲ. ನಾನು ಯಾವ ರಾಜಕೀಯ ವ್ಯಕ್ತಿಯೂ ಅಲ್ಲ. ನನಗೆ ಇಷ್ಟವೂ ಇಲ್ಲ. ನನ್ನ ಹೆಸರು ಅನಾವಶ್ಯಕವಾಗಿ ಬಳಸಿಕೊಳ್ಳ ಬೇಡಿ ಎಂದು ವಾರ್ನ್ ಮಾಡಿದ್ದರು.

ಇದೀಗ ಮತ್ತೊಬ್ಬ ಸ್ಟಾರ್ ಆ್ಯಕ್ಷನ್ ಸ್ಟಾರ್ ಧೃವಾ ಸರ್ಜಾ ಅವರು ಮೊದಲಿನಿಂದಲೂ ಡಿ ಬಾಸ್ ದರ್ಶನ್ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅಂಬರೀಶ್ ಫ್ಯಾಮಿಲಿಗೆ ಆತ್ಮೀಯರು. ಈ ಬಾರಿ ಸುಮಲತಾ ಅವರ ಪರ ಪ್ರಚಾರಕ್ಕೆ ಇವರು ಬರುತ್ತಾರೆ ಎಂಬ ಸುದ್ದಿ ಇತ್ತು. ಆದರೆ…ಧೃವಾ ಎಲೆಕ್ಷನ್ ಸಂಬಂಧಿಸಿದಂತೇ ಮಾತನಾಡಲೂ ಇಷ್ಟ ಪಡಲಿಲ್ಲ. ಆದರೆ ಪ್ರಸಕ್ತ ರಾಜಕೀಯದ ಬಗ್ಗೆ ಮಾತನಾಡುವುದು ಬೇಡವೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರು. ಅಷ್ಟೇ ಅಲ್ಲಾ…ನಿಮಗೆ ಯಾರಾದರೂ ಪ್ರಚಾರಕ್ಕಾಗಿ ಬುಲಾವ್ ನೀಡಿದರೇ ಎಂಬ ಪ್ರಶ್ನೆಗೆ, ನಾನು ಯಾರ ಪರವಾಗಿ ಪ್ರಚಾರ ಮಾಡಲ್ಲ ಎಂದರು.

Image result for nikhil kumarswamiಅದ್ಯಾಕೋ ಸ್ಟಾರ್ ನಟರು ಒಬ್ಬರಾದ ಮೇಲೆ ಒಬ್ಬರಂತೇ ಈ ರೀತಿ ಹೇಳಿಕೆ ನೀಡುತ್ತಿರುವುದರ ಹಿಂದೆ ಸ್ಟಾರ್ ನಟರು ಚುನಾವಣೆಗೆ ನಿಂತಿರೋದು ಪರೋಕ್ಷವಾಗಿ ಬೇಸರ ತಂದಿದೆ ಎಂಬುದನ್ನು  ತೋರಿಸುತ್ತಿದೆ. ಅಣ್ಣ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗಾ' ಸಿನಿಮಾದ ಹಾಡಿನ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧ್ರವ ಸರ್ಜಾ, ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ದಯವಿಟ್ಟು ರಾಜಕೀಯ ವಿಷಯಗಳಿಗೆ ನನ್ನನ್ನು ಎಳೆದು ತರಬೇಡಿ. ಎಲ್ಲರೂ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಎಂದು ಹೇಳಿದರು.  ಧೃವಾ ಸರ್ಜಾ ಹೇಳಿಕೆಯಿಂದ ಅವರು ಯಾರ ಪರ ಪ್ರಚಾರಕ್ಕೂ ಬರಲು ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗಿದೆ.

Edited By

Kavya shree

Reported By

Kavya shree

Comments