ವಿಜಯ್ ದೇವರಕೊಂಡಾ ಜೊತೆ ಎಂಗೇಜ್'ಮೆಂಟ್ ಆಗಿದ್ಯಾ ರಶ್ಮಿಕಾಗೆ..?!!!

21 Mar 2019 2:48 PM | Entertainment
2547 Report

ಗೀತಾ ಗೋವಿಂದಂ  ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಟಾಪ್ ಮೋಸ್ಟ್ ಹೀರೋಯಿನ್ ಪಟ್ಟ ಗಿಟ್ಟಿಸಿಕೊಂಡ ರಶ್ಮಿಕಾ ಮಂದಣ್ಣ ಮತ್ತೆ ದೇವರಕೊಂಡಾ ಜೊತೆ ರೊಮ್ಯಾನ್ಸ್ ಮಾಡಿ ಮತ್ತೆ ಟ್ರೋಲ್ ಆಗಿದ್ದರು. ಅವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಹೊಸ ಸಿನಿಮಾ  ಡಿಯರ್ ಕಾಮ್ರೆಡ್ ನಲ್ಲಿನ ಇವರಿಬ್ಬರ ಲಿಪ್ ಲಾಕ್ ವಿಡಿಯೋ ವೈರಲ್ ಆಯ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೇ ಸಾಕಷ್ಟು ಜನರು ರಶ್ಮಿಕಾರನ್ನು ಮತ್ತೆ ಟ್ರೋಲ್ ಮಾಡಲು ಆರಂಭಿಸಿದರು. ಕೆಲವರು ರಶ್ಮಿಕಾರನ್ನು ‘ಯಾರ ಹೊಟ್ಟೆ ಉರಿಸಲು’ ಇಂತಹ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದೀರಿ ಎಂದು ಬಾಯಿಗೆ ಬಂದಂತೆ ಕಮೆಂಟ್ ಮಾಡಿದ್ದಾರೆ.

ಈ ಕಮೆಂಟ್’ಗಳಿಂದಲೋ ಅಥವಾ ಇನ್ಯಾವ ಕಾರಣಗಳಿಂದಲೋ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾಳೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ. ಟ್ರೋಲಿಗರ ಹಾವಳಿ ತಡೆಯಲಾರದೇ ಸದ್ಯವಷ್ಟೇ ರಶ್ಮಿಕಾ ಪೋಸ್ಟೊಂದನ್ನು ಮಾಡಿದ್ದಾರೆ. ನಿಜವಾದ ಪ್ರೀತಿ ಈಗ ಗೊತ್ತಾಗುತ್ತದೆ. ಯಾರು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾರೆಂಬುದು ಈಗ ಗೊತ್ತಾಗುತ್ತದೆ ಎಂದಿದ್ದಾರೆ. ನನ್ನನ್ನು ನಿಜವಾಗಿಯೂ ಯಾರು ಪ್ರೀತಿಸುತ್ತಾರೆಂಬ  ಸತ್ವ ಪರೀಕ್ಷೆ ಇದು. ಅಷ್ಟೇ ಅಲ್ಲದೇ ನನ್ನನ್ನು ಇಷ್ಟ ಪಡದೇ ಇರುವವರಿಗೂ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ.

ಅವರು ಕೇಳಿರುವ ನಿಜವಾದ ಪ್ರೀತಿಸುವವರು ಎಂಬ ಕಮೆಂಟ್ ಗೆ ಟ್ರೋಲಿಗರು ಮತ್ತೆ ರಿಯಾಕ್ಟ್ ಮಾಡಿದ್ದಾರೆ. ಹಾಗಿದ್ರೆ... ರಶ್ಮಿಕಾ ಅವರೇ ನಿಮ್ಮ ಮತ್ತು ರಕ್ಷಿತ್ ಶೆಟ್ಟಿ ಅವರ ನಡುವೆ ಇದ್ದ ಪ್ರೀತಿ ನಿಜವಾದುದ್ದಲ್ಲವೇ…ಎಂದು ಕಾಲೆಲೆದಿದ್ದಾರೆ. ಅಲ್ಲದೇ ಮತ್ತೆ ವಿಜಯ್ ದೇವರಕೊಂಡಾ ಜೊತೆ ಎಂಗೇಜ್’ಮೆಂಟ್ ಮಾಡಿಕೊಂಡಿದ್ದರೇ ಅದನ್ನು ಅನೌನ್ಸ್ ಮಾಡಮ್ಮ  ಎಂದು ಕೂಡ ಟಾಂಗ್ ಕೊಟ್ಟಿದ್ದಾರೆ. ಅಂದಹಾಗೇ ರಶ್ಮಿಕಾ ಮಂದಣ್ಣ ಈಗಾಗಲೇ ಗೀತಾ ಗೋವಿಂದಂ ಸಿನಿಮಾದಲ್ಲಿ ಮಾಡಿದ ರೊಮ್ಯಾನ್ಸ್ ವಿಡಿಯೋ ನೋಡಿ ರಕ್ಷಿತ್ ಅಭಿಮಾನಿಗಳು ಸಿಕ್ಕಾಪಟ್ಟೆ  ಸಿಟ್ಟಾಗಿದ್ದರು. ಈಗ ಮತ್ತೆ ರಶ್ಮಿಕಾರ ಹಾಟ್ ವಿಡಿಯೋ  ನೋಡಿ ಒಂದಷ್ಟು ಜನ ರಶ್ಮಿಕಾಗೆ ತಿರುಗೇಟು ಕೊಟ್ಟಿದ್ದಾರೆ.

Edited By

Kavya shree

Reported By

Kavya shree

Comments