ಸುಮಲತಾ, ನಿಖಿಲ್ ರಾಜಕೀಯದ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಪವರ್ ಸ್ಟಾರ್...?!!!

21 Mar 2019 10:31 AM | Entertainment
1302 Report

ಅಂದಹಾಗೇ ಸ್ಯಾಂಡಲ್’ವುಡ್ ನಲ್ಲಿ ರಾಜಕೀಯದ್ದೇ ಸೌಂಡು. ಇವರು ಯಾರ ಪರ..? ಅವರು ಯಾರ ಪರ…? ಈ ಸೌಂಡಿನ ನಡುವೆ ರಾಜ್ ಕುಂಟುಂಬದವರ ಹೆಸರು ಕೂಡ ಕೇಳಿ ಬರುತ್ತಿದೆ. ಮಂಡ್ಯ ಕ್ಷೇತ್ರದ ಅಖಾಡದಲ್ಲಿದಿಳಿದಿರುವುದು ಇಬ್ಬರು ಪವರ್ ಫುಲ್ ಸ್ಟಾರ್ ಗಳು. ಇಬ್ಬರಿಗೂ ನಟನೆ, ರಾಜಕೀಯ ಬ್ಯಾಗ್ರೌಂಡ್ ಜೋರಾಗಿಯೇ ಇದೆ. ಈ ನಡುವೆ ಪವರ್ ಸ್ಟಾರ್ ಪುನೀತ್  ರಾಜ್ ಕುಮಾರ್ ಅವರ ಹೇಳಿಕೆಯೊಂದು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅಂದಹಾಗೇ ಅವರು ಒಂದು ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ನಾನು ಒಬ್ಬ ನಟನಾಗಿ ನಿಮ್ಮೆಲ್ಲರ ಸ್ಟಾರ್ ಅಥವಾ ಅಭಿಮಾನಿಯಾಗಿದ್ದೇನೆ. ಆದರೆ ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಯಾರ ಪರವಾಗಿಯೂ ಇಲ್ಲ. ಮಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ನಿಂತಿರೋದು ಇಬ್ಬರು ನನ್ನ ಹಿತೈಷಿಗಳೇ. ಇಬ್ಬರಿಗೂ ಒಳ್ಳೆಯದಾಗಲೀ ಎಂಬುದೇ ನನ್ನ  ಆಶಯ. ಅಂಬಿಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ನನಗೆ ಆತ್ಮೀಯರು. ನಾನು ಯಾಕೆ ಈ ಪತ್ರ ಬರೆಯುತ್ತಿದ್ದೇನೆ ಎಂದರೆ, ಈಗಾಗಲೇ ಸ್ಟಾರ್ ನಟರು ಚುನಾವಣೆಗೆ ನಿಂತಿರೋ ಹಿನ್ನಲೆಯಲ್ಲಿ ಕೆಲ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ  ನಿಮಗೆ ಒಂದು ವಿಚಾರ ತಿಳಿಸಬೇಕಿದೆ. ಅದಕ್ಕಾಗಿ ಬರೆಯುತ್ತಿದ್ದೇನೆ.ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ಅವರು ಈ ಪತ್ರವನ್ನು ಬರೆದಿದ್ದಾರೆ. ಆ ಮೂಲಕ ನನ್ನ ಹೆಸರನ್ನು ಚುನಾವಣೆಗೆ, ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಪತ್ರದಲ್ಲಿ ಸ್ಪಷ್ಟನೆ ನೀಡಿ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ನಾನು ಕಲೆಯಲ್ಲಿ ಗುರುತಿಸಿಕೊಂಡಿದ್ದೇನೆ, ಕಲೆಯಲ್ಲಿಯೇ ಗುರುತಿಸಿಕೊಳ್ಳಲು ಬಯಸುತ್ತೇನೆ. ರಾಜಕಾರಣದಲ್ಲಲ್ಲ. ನಾನು ಯಾವ ರಾಜಕಾರಣಿಯೂ ಪರವೂ ಅಲ್ಲ. ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು.  ಮತ ಚಲಾಯಿಸಿ, ಅದು ನಮ್ಮ ಹಕ್ಕು. ಪಕ್ಷ, ವ್ಯಕ್ತಿ ನೋಡದೇ ಮತ ಚಷಲಾಯಿಸಿ ಎಂದಷ್ಟೇ ಹೇಳ ಬಯಸುತ್ತೇನೆ. ಇನ್ನೊಂದು ವಿಚಾರ….ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವು ಹಾಗು ಅಂಬರೀಶ್ ರವರ ಕುಟುಂಬವು ನಮ್ಮ ಕುಟುಂಬದ ಹಾಗೆ, ಇಬ್ಬರು ನಮ್ಮ ಹಿತೈಷಿಗಳೇ. ಇಬ್ಬರಿಗೂ ಒಳ್ಳೆದಾಗಲಿ, ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.  ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ನನ್ನ ಹೆಸರನ್ನು ಚುನಾವಣೆಗೆ ಸಂಬಂಧಿಸಬೇಡಿ ಎಂದು  ಕೇಳಿಕೊಳ್ಳುತ್ತೇನೆ.

 

Edited By

Manjula M

Reported By

Kavya shree

Comments