‘ಮಾಲ್ಗುಡಿ ಡೇಸ್’ಗೆ ಎಂಟ್ರಿ ಕೊಟ್ಟ ಜನಮನ ಗೆದ್ದ ಬಿಗ್‌ಬಾಸ್ ಸ್ಪರ್ಧಿ..!?

21 Mar 2019 9:12 AM | Entertainment
171 Report

ಕನ್ನಡದ ಬಿಗ್ ರಿಯಾಲಿಟಿ ಷೋಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ಮೊದಲು ಸೆಲಬ್ರೆಟಿಗಳಿಗೆ ಇದ್ದ ಷೋ ಇದೀಗ ಕಾಮನ್ ಮ್ಯಾನ್ ಗಳಿಗೂ ಕೂಡ ಎಂಟ್ರಿ.. ಬಿಗ್ ಬಾಸ್ ಮನೆಯ ಒಳಗೆ ಹೋಗುವಾಗ ಕಾಮನ್ ಮ್ಯಾನ್ ಆಗಿ ಹೋಗ್ತಾರೆ. ಆದರೆ ಹೊರಗೆ ಬರುವಷ್ಟರಲ್ಲಿ ಅವರು ಕೂಡ ಸೆಲಬ್ರೆಟಿಗಳು ಆಗಿ ಬಿಡುತ್ತಾರೆ.  ಅಂದ ಹಾಗೆ ಈ ಬಾರಿ ಬಿಗ್ ಬಾಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿ.. ಅದೆಷ್ಟು ಕಾಮನ್ ಮ್ಯಾನ್ ಗಳ ಕನಸು ನನಸಾಗಿತ್ತು.. ಅಭಿಮಾನಿಗಳ ಮೆಚ್ಚುಗೆ ಸಂಪಾದಿಸಿದವರಲ್ಲಿ ಧನರಾಜ್ ಕೂಡ ಒಬ್ಬರು..ಧನರಾಜ್ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ವಿಜಯ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ಮಾಲ್ಗುಡಿ‌ ಡೇಸ್’ ಚಿತ್ರೀಕರಣಕ್ಕೂ ಮೊದಲೇ ಟೈಟಲ್ನಿಂದ ಸಿಕ್ಕಾಪಟ್ಟೆ ಸದ್ದು‌ ಮಾಡಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ ತೀರ್ಥಹಳ್ಳಿ ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ‌ನಡೆಸುತ್ತಿದ್ದು‌ಚಿತ್ರತಂಡದಿಂದ ಹೊಸದೊಂದು ಸುದ್ದಿ‌ ಹೊರಬಂದಿದೆ. ಬಿಗ್ ಬಾಸ್ 6ರ ಸ್ಪರ್ಧಿಯಾದ ಧನರಾಜ್ ‌ತನ್ನ ಪ್ರಾಮಾಣಿಕ ಆಟದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಬಿಗ್ ಬಾಸ್ ಸ್ಪರ್ಧೆ ಗೆದ್ದಿಲ್ಲದಿದ್ದರೂ  ಅಭಿಮಾನಿಗಳ ಮನಸ್ಸನ್ನು ಧನರಾಜ್ ಗೆದ್ದಿದ್ದರು. ಬಿಗ್‌ಬಾಸ್‌ ನಂತರ ಧನರಾಜ್ ಎಲ್ಲಿ ಹೋದ್ರು ಅನ್ಕೊಂಡ್ರ..

ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ನಂತರ ಮೊದಲ ಬಾರಿಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು ಮಾಲ್ಗುಡಿ ಡೇಸ್’ ಸಿನಿಮಾದಲ್ಲಿ ವಿಜಯ್ ಜೊತೆಯಾಗಲಿದ್ದಾರೆ. ಡಬ್ಬಿಂಗ್ ಹಾಗೂ ನಟನೆಯಲ್ಲೂ ಸೈ ಎನಿಸಿಕೊಂಡಿರೋ ಧನರಾಜ್ ಮಾಲ್ಗುಡಿ ಡೇಸ್​​ ಸಿನಿಮಾ‌ ಮೂಲಕ ಕಮಾಲ್ ಮಾಡೋಕೆ ಸಿದ್ದರಾಗುತ್ತಿದ್ದಾರೆ. ಅವರ ಪಾತ್ರದ ಕುರಿತು ಮಾತನಾಡಿರೋ ನಿರ್ದೇಶಕ ಕಿಶೋರ್ ಮೂಡಬಿದ್ರೆ, ಸಿನಿಮಾದಲ್ಲಿ ಧನರಾಜ್ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಿದ್ದಾರೆ ಅಂತಾ ಕತೆಯ ಗುಟ್ಟನ್ನು ಬಿಟ್ಟುಕೊಡದೆ ಸುಮ್ಮನಾದರು. ಒಟ್ಟಿನಲ್ಲಿ ಧನರಾಜ್ ಬಣ್ಣದ ಲೋಕದ ಕನಸು ಇದೀಗ ನನಸಾಗುತ್ತಿದೆ.. ತೆರೆ ಮೇಲೆ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗೋದಂತು ಗ್ಯಾರೆಂಟಿ.

Edited By

Manjula M

Reported By

Manjula M

Comments