ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ಆಪ್ತ..!

20 Mar 2019 4:54 PM | Entertainment
289 Report

ಬಣ್ಣದ ಲೋಕವೇ ಒಂಥರಾ ಮಾಯ ಜಗತ್ತು ಇದ್ದ ಆಗೆ.. ಯಾರು ಯಾವಾಗ ಹೇಗೆ ಇರುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ..ಕೆಲವರಿಗೆ ಅದೃಷ್ಟ ಕೈ ಹಿಡಿದು ಬಣ್ಣದ ಲೋಕದಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರಿಗೆ ಅದೃಷ್ಟ ಕೈ ಕೊಟ್ಟು ಬಣ್ಣದ ಜಗತ್ತಿನಿಂದ ದೂರವೆ ಉಳಿದುಬಿಡುತ್ತಾರೆ. ಅಂದಹಾಗೆ ಒಂದು ಕಾಲದಲ್ಲಿ ಸಿನಿರಂಗವನ್ನು ಆಳಿದ ಸಾಕಷ್ಟು ಕಲಾವಿದರು ಇಂದು ಕೈ ಚೆಲ್ಲಿಕೊಂಡು ಕೂತಿದ್ದಾರೆ.. ಅದಕ್ಕೆ ವಿಜಯಲಕ್ಷ್ಮಿ ಅವರೇ ನಿದರ್ಶನ…

ಅನಿಲ್ ಕುಮಾರ್ ಈ ಹೆಸರನ್ನು ನೀವು ಕೇಳಿರದೆ ಇರಬಹುದು ಆದರೆ ಮೂಡಲ ಮನೆಯ ನಾಣಿ ಪಾತ್ರ ಎಲ್ಲರಿಗೂ ಕೂಡ  ತಿಳಿದೆ ಇದೆ.. ಕನ್ನಡ ಕಿರುತೆರೆಯಲ್ಲಿ ಆ ಹೆಸರು ಜನಪ್ರಿಯವಾಗಿತ್ತು…ನೂರಾರು ಧಾರವಾಹಿಗಳಲ್ಲಿ ನಟಿಸಿ ಎಲ್ಲರ ಕೈಯಲ್ಲೂ ಕೂಡ ಸೈ ಎನಿಸಿಕೊಂಡವರು..

ವಿಷಯ ಏನೆಂದರೆ ಅನಿಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಪಾಠಿ ಆಗಿದ್ದರಂತೆ.. ಆದರೆ ಇದೀಗ ಅನಿಲ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ರಂಗಭೂಮಿ, ಕಿರುತೆರೆ ಕಲಾವಿದ್ದರಾಗಿದ್ದ ಅನಿಲ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಬೆಂಗಳೂರಿನ ಬ್ಯಾಪ್ಟಿನ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಿಲ್ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

Edited By

Manjula M

Reported By

Manjula M

Comments