ದರ್ಶನ್, ಯಶ್ ಬಿಟ್ಟು ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಂತೆ ಈ ಸೂಪರ್ ಸ್ಟಾರ್ಸ್..?!

ಮಂಡ್ಯ ಲೋಕಸಭಾ ಚುನಾವಣೆಯಿಂದ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಅದೇ ಹಿನ್ನಲೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.. ಈಗಾಗಲೇ ಪ್ರಚಾರ ಶುರು ಮಾಡಿರುವ ಸುಮಲತಾ ಹಿಂದೆ ತಾರಾಬಳಗವೇ ಇದೆ. ದೊಡ್ಡ ದೊಡ್ಡ ನಟರು ಸುಮಲತಾ ಬೆನ್ನಿಗೆ ನಿಂತು ಅವರ ಪರ ಪ್ರಚಾರ ಮಾಡಲು ಸಿದ್ದರಾಗಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಸಾಕಷ್ಟು ಮಂದಿ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೆ ಕೆಲವರು ಸ್ಟಾರ್ ನಟರು ಟ್ವಿಟ್ಟರ್ ಮೂಲಕ ಸುಮಲತಾ ಪರ ಇದ್ದೀವಿ ಎನ್ನುವುದನ್ನು ಹೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಂಬರೀಶ್ ಅವರ ಆಪ್ತರು ಎನಿಸಿಕೊಂಡಿರುವ ಪರಭಾಷಾ ಸೂಪರ್ ಸ್ಟಾರ್ ಗಳು ಸುಮಲತಾ ಪರ ಪ್ರಚಾರಕ್ಕೆ ಬರ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ತೆಲುಗು ನಟ ಚಿರಂಜೀವಿ, ರಜನೀಕಾಂತ್, ಮೋಹನ್ ಬಾಬು, ಶತೃಘ್ನ ಸಿನ್ಹಾ ಸುಮಲತಾ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.. ಇವರೆಲ್ಲರೂ ಕೂಡ ಅಂಬರೀಶ್ ಅವರಿಗೆ ತುಂಬಾ ಆಪ್ತರಾಗಿದ್ದರು.. ಹಾಗಾಗಿ ಸುಮಲತಾ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಅಂಬರೀಶ್ ಸ್ನೇಹಿತರ ಬಳಗದಲ್ಲಿ ಗುರುತಿಸಿಕೊಂಡವರು ಹಾಗಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಗೆಳಯರನ್ನು ಸಂಪಾದಿಸಿದ್ದರು.. ಹಾಗಾಗಿ ಸುಮಲತಾ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
Comments