ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ..!!!

19 Mar 2019 5:18 PM | Entertainment
7496 Report

ನಟ  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಕೋರ್ಟ್ ಮೆಟ್ಟೆಲೇರಿದ್ದಾರೆ. ಅಂದಹಾಗೇ ನೋಡೊಕೆ ಹೀರೋಯಿನ್ ಥರಾನೇ ಕಾಣುವ ಪ್ರಜ್ವಲ್ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಂತೂ ನಿಜ. ದೇವರಾಜ್ ಕುಟುಂಬಕ್ಕೆ ಸೊಸೆಯಾಗಿರುವ ರಾಗಿಣಿಗೆ ಏನಾದರೂ ಸಮಸ್ಯೆ ಆಗಿದ್ದಿಯಾ ಅಂತಾ ಹುಬ್ಬೇರಿಸ ಬೇಡಿ. ಅಂದಹಾಗೇ ರಾಗಿಣಿಗೆ ಯಾವ ತೊಂದರೆ ಆಗಿಲ್ಲಾ, ಆದರೂ ಕೋರ್ಟ್  ಮೆಟ್ಟಿಲೇರಿದ್ದಾರೆ. ಆದರೆ ರಿಯಲ್ ಆಗಿ ಅಲ್ಲಾ,ರೀಲ್’ನಲ್ಲಿ. ರಾಗಿಣಿ  ಚಂದ್ರನ್ ‘ಲಾ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಲಾ’ ಸಿನಿಮಾ ದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಕಾನೂನಿನ ಕಥಾ ಪ್ರಧಾನದಲ್ಲಿ  ನಾಯಕಿಯಾಗಿ  ರಾಗಿಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ಪದವೀಧರೆ ಆಗಿದ್ದು ತನ್ನದೇ ಪ್ರಕರಣದಿಂದ ಹೇಗೆ ಹೊರ ಬರುತ್ತಾರೆ ಎಂಬುವುದು ಚಿತ್ರದ ಒನ್ ಲೈನ್ ಸ್ಟೋರಿ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಚಿತಾ ರಾಮ್ ನಿರ್ದೇಶನದ ಕಿರುಚಿತ್ರ ‘ರಿಷಭ ಪ್ರಿಯಾ’ ದಲ್ಲಿ ಅಭಿನಯಿಸಿರುವ ರಾಗಿಣಿ ’ಲಾ’ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿ ಜರ್ನಿ ಬಗ್ಗೆ ಖಚಿತಪಡಿಸಿದ್ದಾರೆ.

Edited By

Kavya shree

Reported By

Kavya shree

Comments