ಬಿಗ್ ಬಾಸ್ ಶಶಿಗೆ 'ಕಲ್ಯಾಣ' : ಕವಿತಾ ಅಲ್ಲಾ ಕೌಸಲ್ಯ ಜೊತೆ…..?!!!

19 Mar 2019 3:44 PM | Entertainment
1389 Report

ಬಿಗ್’ಬಾಸ್ ಸೀಸನ್ 6 ವಿನ್ನರ್ ಆಗಿ ಶಶಿ ಕುಮಾರ್ ಹೊರ ಬಂದ ಮೇಲೆ  ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಶಿ ಕುಮಾರ್ ಅವರು ಸಿನಿಮಾ, ಅಗ್ರಿ ಕಲ್ಚರ್ ಅಂತಾ ಬ್ಯುಸಿ ಆಗಿದ್ದಾರೆ. ಕರ್ನಾಟಕದ ಅಪಾರ ಅಭಿಮಾನಿಗಳ ಮನಗೆದ್ದ ಶಶಿ ಕುಮಾರ್’ಗೆ ಕಲ್ಯಾಣ ಭಾಗ್ಯ ಒದಗಿ ಬಂದಿದೆ. ಏನಪ್ಪಾ ಇದು…ಬಿಗ್ ಬಾಸ್ ಮನೆಯೊಳಗೆ ನಟಿ ಕವಿತಾ ಜೊತೆ ಗಾಸಿಪ್’ಗೆ ಒಳಗಾಗಿದ್ದ ಶಶಿ ಕುಮಾರ್ ಹೆಸರು ಇದೀಗ ಕೌಸಲ್ಯ ಜೊತೆ ತಳುಕಿ ಹಾಕಿಕೊಂಡಿದೆ.

ಅಂದಹಾಗೇ ಕನ್ಫೂಸ್ ಆಗಬೇಡ್ರಿ. ಶಶಿ ಕುಮಾರ್ ಅವರು  ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಯಾವುದೋ ಹುಡುಗಿ ಜೊತೆ ಸುತ್ತಾಡ್ತಿದ್ದಾರೆ ಅನ್ಕೊಂಡ್ರಾ…? ಅಂತದ್ದೇನು  ಇಲ್ಲಾ..ಅಂದಹಾಗೇ ಬಿಗ್ ಬಾಸ್ ಮನೆಯೊಳಗಿದ್ದಾಗ ಶಶಿ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಅದ್ಯಾವ ಸಿನಿಮಾ? ನಾಯಕಿ ಯಾರು? ಎಂಬುದರ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಈಗ ಶಶಿ 'ಕೌಸಲ್ಯ ಕಲ್ಯಾಣ' ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  ‘ಕೌಸಲ್ಯ ಕಲ್ಯಾಣ’ ಒಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಇದಕ್ಕೆ ನವೀನ್ ಕುಮಾರ್ ಹಾಗೂ ಗಿರೀಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಈ ಚಿತ್ರದಲ್ಲಿ ರಾಘವಿ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ವಿಶೇಷವೇನೆಂದರೆ ಈ ಚಿತ್ರ ಕಥೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತದೆ. ಇನ್ನು ಚಿತ್ರದ ಟ್ರೈಲರ್ ರೆಡಿ ಆಗಿದ್ದು ಸಮಯ ನೋಡಿ ರಿಲೀಸ್ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ಸಿನಿಮಾ ಶಶಿ ಕುಮಾರ್ ಕೈ ಹಿಡಿಯುತ್ತೋ ಗೊತ್ತಿಲ್ಲ. ಆದರೆ ಶಶಿ ಕುಮಾರ್ ಅವರ ಸಿನಿಮಾ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

Edited By

Kavya shree

Reported By

Kavya shree

Comments