'ಅಲ್ರೀ ನಿಮ್ಮಿಂದ ಮಂಡ್ಯಕ್ಕೇನು ಕೊಡುಗೆ ಇಲ್ಲಾ, ನೀವ್ಯಾಕೆ ಅವರಿಂದೆ ಹೋಗಿದ್ದೀರಾ'' : ದರ್ಶನ್, ಯಶ್ ರನ್ನೇ ಪ್ರಶ್ನಿಸಿದ ಸ್ಯಾಂಡಲ್'ವುಡ್'ನ ಯಂಗ್ ಸ್ಟಾರ್..?!!!

19 Mar 2019 1:55 PM | Entertainment
3752 Report

ನಟಿ ಸುಮಲತಾ ಅವರು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರಲ್ಲಾ ಅವರು ಯಾರ ಪರ ಎಂದು ಯಾರಾದರೂ ಕೇಳಿದ್ದೀರಾ..? ಅವರು ಮಂಡ್ಯಕ್ಕೆ ಏನು ಮಾಡಿದ್ದಾರೆಂದು ಅಲ್ಲಿ ಹೋಗಿ ಚುನಾವಣೆಗೆ ನಿಲ್ತಿದ್ದಾರೆ ಎಂದು ಕನ್ನಡದ ಸ್ಟಾರ್ ನಟರೊಬ್ಬರು ಪ್ರಶ್ನೆ ಕೇಳಿದ್ದಾರೆ. ಸುಮಲತಾ ಅವರ ಪರ ಕೆಲ ಸ್ಟಾರ್ ನಟರು ಮಾಜಿ ಮುಖ್ಯಮಂತ್ರಿಗಳು ಪರವಾಗಿ ನಿಂತಿದ್ದಾರೆ. ನಿಮ್ಮ ನಡೆ ನಿಜಕ್ಕೂ ನನಗೆ ಪ್ರಶ್ನಾರ್ಥಕವಾಗಿದೆ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ಅಂತಾ ಗೊತ್ತಿಲ್ಲ. ಮಂಡ್ಯ ಅಭಿವೃದ್ಧಿ ಕೆಲಸದಲ್ಲಿ ನಿಮ್ಮ ಪಾತ್ರ  ಏನು ಇಲ್ಲ. ನಿವ್ಯಾಕೆ ಮಂಡ್ಯದಿಂದ ಸ್ಪರ್ಧಿಸುತ್ತಿದ್ದೀರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಸುಮಲತಾಗೆ ಆ ಯಂಗ್ ಸ್ಟಾರ್ ಕಲಾವಿದ ಪ್ರಶ್ನಿಸಿದ್ದಾರೆ. ಇನ್ನು ಸುಮಲತಾ ಪರ ನಿಂತಿರುವ ನಟ ಯಶ್ ಮತ್ತು ದರ್ಶನ್, ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಸೇರಿದಂತೇ ಕೆಲ ಕಲಾವಿದರ ವಿರುದ್ಧ ಹೇಳಿಕೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅಂದಹಾಗೇ ಮೀಟೂ ಕೇಸ್ ನಲ್ಲಿ ಭಾರೀ ಸುದ್ದಿಯಾಗಿದ್ದ ನಟ ಚೇತನ್ ಮತ್ತೆ ಕೆಲ ಸಿನಿ ನಟರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ನಟ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಅವರ ಮೀಟೂ ಕೇಸ್ನಲ್ಲಿ ಮೂಗು ತೂರಿ ಚೇತನ್ ಗೆ ಭಾರೀ ಮುಖ ಭಂಗವಾಗಿದ್ದೂ ನಿಜ. ಶೃತಿ ಪರ ಮಾತನಾಡಿದ ಚೇತನ್ ವಿರುದ್ಧ ಸರ್ಜಾ ಫ್ಯಾನ್ಸ್ ಸಿಡಿದೆದ್ದಿದ್ದರು. ಇನ್ನೂ ಆ ಘಟನೆ ಹಸಿ ಹಸಿ ಇರುವಾಗಲೇ ಮತ್ತೆ ಚೇತನ್  ಸುದ್ದಿಗೆ ಬಂದಿದ್ದಾರೆ. ಅದು ನಟ ದರ್ಶನ್ ಮತ್ತು ಯಶ್ ವಿರುದ್ಧ ಮಾತನಾಡಿ.ಈ ಬಾರಿ ರಾಜಕೀಯ ಪ್ರವೇಶ ಮಾಡುತ್ತಿರುವ ರೆಬೆಲ್ ಸ್ಟಾರ್ ಅಂಬಿ ಪತ್ನಿ ಸುಮಲತಾ ವಿರುದ್ಧ ಚೇತನ್ ಹೇಳಿಕೆ ನೀಡಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಿನಿಮಾ ಸ್ಟಾರ್ ನಟರನ್ನು ಪ್ರಶ್ಮಿಸಿದ್ದಾರೆ. ಸದ್ಯ ಅವರ ಹೇಳಿಕೆಯಿಂದ ದಚ್ಚು ಅಭಿಮಾನಿಗಳು, ಯಶ್ ಅಭಿಮಾನಿಗಳು ಚೇತನ್ ವಿರುದ್ಧ ಕೋಪಗೊಂಡಿದ್ದಾರೆ. ನೀವು ಬಹಿರಂಗವಾಗಿಯೇ ನಾವು ಸುಮಲತಾ ಪರ ಪ್ರಚಾರ ಮಾಡ್ತೀವಿ ಎಂದಿದ್ದೀರಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು. ದರ್ಶನ್ ಆಗಲೀ ಯಶ್ ಆಗಲೀ ನಿಮ್ಮಲ್ಲಿ ಯಾರೂ ಕೂಡ ಮಂಡ್ಯದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.

Image result for chetan actorಸಾಮಾಜಿಕ ಸೇವೆ, ಭ್ರಷ್ಟಾಚಾರ ನಿರ್ಮೂಲನೆ ಅಥವಾ ಕೇವಲ ಸಿದ್ಧಾಂತಗಳು, ಎನ್ನುವ ಅವರು ಚುನಾವಣಾ ಸ್ಪರ್ಧೆಗೆ ಕಾರಣವೇ ಅದೇ ಹಾಗಿದ್ರೆ, ಸುಮಲತಾ ಅವರು ಯಾವುದರ ವಿರೋಧ ಮತ್ತು ಯಾವುದರ ಪರ ಎಂದು ಯಾರಿಗಾದರೂ ಹೇಳಿದ್ದಾರಾ…? ಅಥವಾ ಯಾರಿಗಾದರೂ ಗೊತ್ತಿದೆಯಾ'' ಎಂದು ನಟ ಚೇತನ್ ಅಂಬರೀಶ್ ಪತ್ನಿಯನ್ನ ಪ್ರಶ್ನಿಸಿದ್ದಾರೆ. ಒಟ್ಟಾರೆ  ನಟ ಚೇತನ್ ಹೇಳಿಕೆ ವೈರಲ್ ಆಗುತ್ತಿದ್ದಂತೇ ಅವರ ಫೇಸ್ ಬುಕ್ ಪೋಸ್ಟ್ ಗಳಿಗೆ ಕಮೆಂಟ್ ಗಳು ಬರ ತೊಡಗಿವೆ.

Edited By

Kavya shree

Reported By

Kavya shree

Comments