ಅಕ್ಕನ ಮದುವೆಯಲ್ಲಿ ಆತ ಫ್ಲರ್ಟ್ ಮಾಡಲು ಬಂದ : ನಟಿ ಪರಿಣಿತಿ ಚೋಪ್ರಾ…?!!!

18 Mar 2019 1:54 PM | Entertainment
256 Report

ಅಂದಹಾಗೇ ನಟಿ ಪ್ರಿಯಾಂಕ ಚೋಪ್ರಾ ಅವರ ಅದ್ಧೂರಿ ಮದುವೆ ಬಗ್ಗೆ  ಕೇಳಿದ್ದೀವಿ. ಪಿಗ್ಗಿ ತಮ್ಮ ಗೆಳೆಯ ನಿಕ್ ಜೋನಸ್ ಜೊತೆ ಸಪ್ತಪದಿ ತುಳಿದ ಮೇಲೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಈಗ ಅವರ ಮದುವೆ ವಿಚಾರ ಹಳೆಯ ವಿಚಾರವಾಗಿದೆ. ಆದರೆ ಅಂದು ನಡೆದ ಒಂದು ಘಟನೆಯನ್ನು ಮೆಲುಕು ಹಾಕಿದ್ದಾರೆ ಪಿಗ್ಗಿ ಸಹೋದರಿ ಪರಿಣಿತಿ ಚೋಪ್ರಾ. ಅಂದು ನಡೆದ ಘಟನೆಯನ್ನು ಸ್ವಾರಸ್ಯಕರವಾಗಿ  ಹೇಳಿಕೊಂಡಿದ್ದಾರೆ.

ಅಂದಹಾಗೇ ಮಾಧ್ಯಮವೊಂದರ ಸಂದರ್ಶನದಲ್ಲಿ  ಪಾಲ್ಗೊಂಡಿದ್ದ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗೆ  ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ.ಇತ್ತೀಚೆಗೆ ಚಾಟ್ ಶೋ ಒಂದರಲ್ಲಿ ಭಾಗವಹಿಸಿದ್ದ ಅವರು, ಅಲ್ಲಿನ ಮಾತುಕತೆ ವೇಳೆ ಈ ವಿಷಯ ಹೇಳಿಕೊಂಡಿದ್ದಾರೆ. ನಿಮ್ಮ ಜೊತೆ ನಿಕ್ ಫ್ರೆಂಡ್ಸ್ ಯಾರೂ ಫ್ಲರ್ಟ್ ಮಾಡಲು ಯತ್ನಿಸಿಲ್ಲವೇ ಎಂಬ ಪ್ರಶ್ನೆಗೆ  ಪರಣಿತಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ…? "ಕೆಲವರು ಲೈನ್ ಹೊಡೆದರು, ಆದರೆ ನಾನು ಲೈನ್ ಕೊಡಲಿಲ್ಲ" ಎಂದಿದ್ದಾರೆ. ಅಂದಹಾಗೇ ಯಾರಾದ್ರೂ..ನಿಮಗೆ ಕ್ಯಾಚ್ ಹಾಕಿದ್ದಾರಾ..?ಎಂಬ ಪ್ರಶ್ನೆಗೆ ಪರಿಣಿತಿ ಕ್ಯಾಚ್ ಹಾಕಲು ನಾನು ಬಿಡಬೇಕಲ್ಲಾ. ಅಕ್ಕನ ಮದುವೆಯಲ್ಲಿ ಒಬ್ಬ ಕಾಳ್ ಹಾಕೋಕೆ ಬಂದ, ಆದರೆ ನನಗೆ ಅರ್ಥವಾಗಿತ್ತು. ನಾನು ಅವನಿಗೆ ಅವಕಾಶವೇ ಕೊಡಲಿಲ್ಲ. ಇರಲೀ, ನಿಮ್ಮ ಮದುವೆ ಬಗ್ಗೆ ಮಾತನಾಡಿ ಎಂದರೆ.. ನನ್ ಮದುವೆನಾ….ನಾನು ಅದರ ಬಗ್ಗೆ ಈಗ ಯೋಚನೆ ಮಾಡುತ್ತಿಲ್ಲ. ಅಷ್ಟಕ್ಕೂ ಪ್ರಿಯಾಂಕಾ ಮದುವೆ ಆಗಿದ್ದೇ 36ನೇ ವರ್ಷಕ್ಕೆ. ಹಾಗೆ ನೋಡಿದರೆ ನನಗಿನ್ನೂ ಮದುವೆಗೆ 6 ವರ್ಷ ಸಮಯವಿದೆ ಎಂದು ಹೇಳಿದ್ದಾರೆ.

Edited By

Kavya shree

Reported By

Kavya shree

Comments