‘ನಾನು ಪ್ರಗ್ನೆಂಟ್, ಆದರೆ ನನಗೆ ಡಿವೋರ್ಸ್ ಬೇಕೆ ಬೇಕು’: ನಟಿ ಶಿಲ್ಪಾ ಶೆಟ್ಟಿ….?!!!

18 Mar 2019 11:55 AM | Entertainment
2332 Report

ಅಂದಹಾಗೇ ನಟಿ ಶಿಲ್ಪಾ ಶೆಟ್ಟಿಯವರ ಕುಟುಂಬ ಚೆನ್ನಾಗಿಯೇ ಇದೆ ಅಲ್ವಾ. ಅಂತದ್ದೇನು ಆಯ್ತು, ವಿಚ್ಛೇದನ ಕೊಡುವಂತದ್ದು. ಮಗನ ಜೊತೆ, ಗಂಡನ ಜೊತೆ  ಸಂಸಾರ ನಡೆಸುತ್ತಿರುವ ಶಿಲ್ಪಾ ಶಿಟ್ಟಿ ತಲೆಯಲ್ಲಿ ಡಿವೋರ್ಸ್ ಯೋಚನೆ ಯಾಕ್ ಬಂತು..? ಅಂದಹಾಗೇ ಈಗ ಏನೋ ಶಿಲ್ಪಾ ಶೆಟ್ಟಿ ಫ್ಯಾಮಿಲಿ ಜೊತೆ ಚೆನ್ನಾಗಿಯೇ  ಇದ್ದಾರೆ. ಆದರೆ  ಒಂದು ಕಾಲದಲ್ಲಿ ಪತಿ ರಾಜ್ ಕುಂದ್ರಾಗೆ   ವಿಚ್ಚೇದನ ಕೊಡುವ ಬಗ್ಗೆ ಯೋಚಿಸಿದ್ರಂತೆ, ಕೊಡಲು ಕೂಡ ಮುಂದಾಗಿದ್ರಂತೆ ನಟಿ ಶಿಲ್ಪಾ ಶೆಟ್ಟಿ.

ಅಚ್ಚರಿಯಾಗಬೇಡಿ, ಇಂತಹದ್ದೊಂದು ಸುದ್ದಿಯನ್ನು ಶಿಲ್ಪಾ ಶೆಟ್ಟಿ ತಾಯಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಮೊಬೈಲ್ ಸಂದೇಶದ ಮೂಲಕ ತಿಳಿಸಿಸಿದ್ದರಂತೆ. ಆದರೆ ಇದೆಲ್ಲವೂ ಅನುರಾಗ್ ಮಾಡಿದ್ದು ಯಾಕೆ ಗೊತ್ತಾ....? ಅಸಲಿಗೆ ಶಿಲ್ಪಾ-ರಾಜ್ ಚೆನ್ನಾಗಿಯೇ ಇದ್ದರು.ಆದರೆ ಈ ರೀತಿ ಮಾಡಿದ್ದು ಏಕೆ ಗೊತ್ತಾ..?  ಶಿಲ್ಪಾ ಶೆಟ್ಟಿ ತಾಯಿ ಈ ಸುದ್ದಿ ಕೇಳಿ ಕ್ಷಣ ಶಾಕ್ ಆಗಿದ್ರಂತೆ. ಅಂದಹಾಗೇ ನಡೆದಿದ್ದಾದ್ರು ಏನು ಅಂತೀರಾ..? ಒಂದ್ ಸಲ ನಟಿ ಶಿಲ್ಪಾ ಶೆಟ್ಟಿ ಜೊತೆ ನಿರ್ದೇಶಕ ಅನುರಾಗ್ ಬಸು ಅವರು ಶಿಲ್ಪಾ ಶೆಟ್ಟಿ ಮೊಬೈಲ್ ತೆಗೆದುಕೊಂಡು ಆಕೆಯೇ ಮೆಸೇಜ್ ಮಾಡುವಂತೆ ತಾಯಿಗೆ, ನಾನು ಪ್ರಗ್ನೆಂಟ್ ಆಗಿದ್ದೀನಿ. ಹೀಗಾಗಿ ನಾನು ರಾಜ್ ಜೊತೆ ಜೀವನ ಮಾಡಲು ಆಗಲ್ಲ, ನನ್ನ ಮತ್ತು ರಾಜ್ ಕುಂದ್ರಾ ನಡುವೆ ದೊಡ್ಡ ಜಗಳ ನಡೆದಿದೆ. ನಾವಿಬ್ಬರು ಒಟ್ಟಿಗೆ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇವೆ. ಎಂದು ಮೆಸೇಜ್ ಮಾಡಿದ್ದರಂತೆ.  ಮೆಸೇಜ್ ನೋಡುತ್ತಿದ್ದಂತೇ ಶಿಲ್ಪಾ ಶೆಟ್ಟಿ ತಾಯಿ ಗಾಬರಿಯಾಗಿದ್ದಾರೆ. ಎದೆಯೇ ಹೊಡೆದುಹೋಗೋ ಥರಾ ಆಯ್ತಂತೆ ಶಿಲ್ಪಾ ಅಮ್ಮಂಗೆ.

ಎಂದು ಹೇಳುತ್ತಾರೆ ಶಿಲ್ಪಾ. ಕೊನೆಗೆ ಶಿಲ್ಪಾಗೆ ಕಾಲ್ ಮಾಡಿದ್ದಾರೆ. ನಡೆದ ವಿಚಾರವನ್ನು ಶಿಲ್ಪಾ ತಾಯಿಗೆ ವಿವರಿಸುವ ಹೊತ್ತಿಗೆ ಶಿಲ್ಪಾಗೆ ಸಾಕು ಸಾಕಾಗಿ ಹೋಯ್ತು.ಇದೆಲ್ಲವೂ ಅನುರಾಗ್ ಬಸು ತಮಾಷೆಗಾಗಿ ಮಾಡಿದ್ದು. ನಾನೇ ಹೇಳುವವರೆಗೂ ಈ ರೀತಿ ನಾನು ಪ್ರೆಗ್ನೆಂಟ್, ಡಿವೋರ್ಸ್ ಪಡೆಯುತ್ತಿದ್ದೇನೆ ಎಂದೆಲ್ಲಾ ಯಾರಾದರೂ ಹೇಳಿದರೆ ನಂಬಬೇಡ ಎಂದು ತಿಳಿಹೇಳುವಲ್ಲಿ ಸಾಕಾಗಿ ಹೋಯಿತಂತೆ. ಇದೆಲ್ಲವನ್ನೂ ಶಿಲ್ಪಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Edited By

Kavya shree

Reported By

Kavya shree

Comments