ಸುದ್ದಿಗೊಷ್ಠಿಯಲ್ಲಿ ಸಿಟ್ಟಾದ ಚಾಲೆಂಜಿಂಗ್ ಸ್ಟಾರ್ ದರ್ಶನ್..!! ಕಾರಣ ಏನ್ ಗೊತ್ತಾ..?

16 Mar 2019 11:38 AM | Entertainment
571 Report

ಸ್ಯಾಂಡಲ್ ವುಡ್’ನ ಬಹು ನಿರೀಕ್ಷಿತ ಸಿನಿಮಾವಾದ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಯಾಗಿ ಸುಮಾರು ದಿನಗಳೇ ಕಳೆದವು.. ಎಲ್ಲೆಡೆ ಭರ್ಜರಿ ಯಶಸ್ಸನ್ನು ಕಾಣುತ್ತಿದೆ.. ಅಭಿಮಾನಿಗಳು ತೆರೆ ಮೇಲೆ ಡಿ ಬಾಸ್ ನೋಡಿ ಸಂಭ್ರಮಿಸುತ್ತಿದ್ದಾರೆ..ದಾಖಲೆಗಳನ್ನು ಮುರಿಯೋದೆ ದರ್ಶನ್ ಸಿನಿಮಾಗಳ ಕೆಲಸ ಅನ್ನೋದು ಸಿನಿ ರಸಿಕರ ಮಾತಾಗಿದೆ.. ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ ಎಂಬುದು ನಿರ್ಮಾಪಕರ ಮಾತಾಗಿದೆ.. ಯಜಮಾನ ಯಶಸ್ಸಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿ ಬಾಸ್  ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು, ಮತ್ತೊಂದು ಕಡೆ ಕ್ರಿಕೆಟ್ ಪಂದ್ಯ ಇತ್ತು, ಆದರು ಸಿನಿಮಾ ಸಕ್ಸಸ್ ಆಗಿದೆ ಇದಕ್ಕೆ‌ ಸಹಕರಿಸಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳ್ತಿನಿ ಎಂದು ತಿಳಿಸಿದ್ದಾರೆ.

ಯಜಮಾನ ಚಿತ್ರ ತಂಡ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದರ್ಶನ್ ಸಿನಿಮಾ ಯಶಸ್ವಿನ ಬಗ್ಗೆ ಖುಷಿಯನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಮಂಡ್ಯ ಚುನಾವಣೆ ಪ್ರಚಾರಕ್ಕೆ ಬರ್ತಿರಾ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕೇವಲ ಯಜಮಾನ ಚಿತ್ರದ ಸುದ್ದಿಗೋಷ್ಟಿ ಅಷ್ಟೇ. ಯಜಮಾನ ಸಿನಿಮಾ ಬಗ್ಗೆ ಏನಾದರೂ ಕೇಳಿ ಹೇಳ್ತಿನಿ. ಇಲ್ಲಿಗೆ ಬಂದಿರೋದು ನಾನು ಯಜಮಾನನಾಗಿ. ಬೇರೆ ವಿಚಾರಗಳನ್ನು ಬೇರೆ ಕಡೆ ನಾನು ಮಾತನಾಡುತ್ತೇನೆ ಎಂದು ದರ್ಶನ್ ಸಿಟ್ಟಾದರು..

ಅಷ್ಟೆ ಅಲ್ಲದೆ ಯಜಮಾನ ಚಿತ್ರದ ಗಳಿಕೆಯ ಬಗ್ಗೆ ಮಾತನಾಡಿದ ಯಜಮಾನ ಗಳಿಕೆ ಎಷ್ಟು ಅನ್ನೋದು ಕಟ್ಟಿಕೊಂಡು ನಿಮಗೇನು ಆಗಬೇಕು ಸರ್.. ಒಂದು ವೇಳೆ ನಿಮಗೆ ಬೇಕೆ ಬೇಕು ಅಂದರೆ ಎಷ್ಟು ಥಿಯೇಟರ್‌ಗಳಲ್ಲಿ ಚಿತ್ರ ಇದೆ. ಒಂದು ಶೋಗೆ ಎಷ್ಟು ಕಲೇಕ್ಷನ್ ಆಗುತ್ತೆ.? ದಿನಕ್ಕೆ ಎಷ್ಟು ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಿ ಎಂದು ಮತ್ತೊಮ್ಮೆ ಸುದ್ಧಿಗೋಷ್ಟಿಯಲ್ಲಿ ದರ್ಶನ್ ಸಿಟ್ಟಾದರು… ಒಟ್ಟಾರೆ ಸಕ್ಸಸ್ ಕಾಣುತ್ತಿರುವ ಯಜಮಾನ ಸಿನಿಮಾಗೆ ಮತ್ತಷ್ಟು ಯಶಸ್ಸು ಸಿಗಲಿ ಅನ್ನೋದು ಅಭಿಮಾನಿಗಳ ಮಾತು.

Edited By

Manjula M

Reported By

Manjula M

Comments