ಚುಂಬನ ದೃಶ್ಯದಲ್ಲಿ ಕಾಣಿಸಿಕೊಳ್ಳೋಕೆ ನಾನ್ ರೆಡಿ ಆದರೆ...... : ಕನ್ನಡದ ಖ್ಯಾತ ನಟಿ…?!!!

15 Mar 2019 10:37 AM | Entertainment
1852 Report

ಅಂದಹಾಗೇ ಇತ್ತೀಚೆಗೆ ಕನ್ನಡದ ನಾಯಕಿಯರು ಪರಭಾಷೆಯಲ್ಲಿ ಮಿಂಚಿ ಹೆಸರು ಮಾಡುತ್ತಿದ್ದರೇ, ಇತ್ತ ಕನ್ನಡಿಗ ಅಭಿಮಾನಿಗಳು ಪರಭಾಷಾ ನಾಯಕಿಯರಿಗೆ ಫಿದಾ ಆಗುತ್ತಿದ್ದಾರೆ. ನಾನು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಅಭ್ಯಂತರ ಇಲ್ಲ. ಆದರೆ ನನಗೆ ಮೊದಲೇ ಹೇಳಬೇಕು ಎಂದು ಹೇಳಿದ್ದಾರೆ ಕನ್ನಡದ ಇತ್ತೀಚಿನ ಸ್ಟಾರ್ ನಾಯಕಿಯೊಬ್ಬರು.ಅವರು ಕಿಸ್ಸಿಂಗ್ ದೃಶ್ಯದ ಬಗ್ಗೆ ಹೇಳಿದ್ದೇನು ಗೊತ್ತಾ..?

ಸ್ಯಾಂಡಲ್ ವುಡ್ ನಟಿ ಶ್ರದ್ದಾ ಶ್ರೀನಾಥ್ ಮೂಗುತಿ ಸುಂದರಿ ಎಂದೇ ಗಾಂಧಿನಗರದಲ್ಲಿ ಫೇಮಸ್. ಯೂ ಟರ್ನ್ ಮೂಲಕ ಅನೇಕ ಅಭಿಮಾನಿಗಳ ಮನಸ್ಸು ಗೆದ್ದ ಶ್ರದ್ಧಾ ಶ್ರೀನಾಥ್  ತಮಿಳಿನಲ್ಲಿಯೂ ಜನಪ್ರಿಯ ನಟಿಯಾಗಿದ್ದಾರೆ. ಅವರೀಗ ಬಾಲಿವುಡ್ ನಲ್ಲಿಯೂ ಮಿಂಚಲಿದ್ದಾರೆ. ಶ್ರದ್ಧಾ ಶ್ರೀನಾಥ್ ನಟಿಸಿರುವ  'ಮಿಲನ್ ಟಾಕೀಸ್' ಶುಕ್ರವಾರ ತೆರೆಕಂಡಿದೆ. ಹಿಂದಿ ಚಿತ್ರರಂಗ ಪ್ರವೇಶ ಮಾಡಿಸಿರುವ ಶ್ರದ್ದಾ ಶ್ರೀ ನಾಥ್ ಕನ್ನಡದಲ್ಲೂ ಮಸಲ್ಲಿಯುಳಿವಂತಹ ಪಾತ್ರವನ್ನೇ ಮಾಡಿದ್ದಾರೆ. ಸಿನಿಮಾ ಕಥೆಯಲ್ಲಿ ಚ್ಯೂಸಿಯಾಗಿರುವ ಶ್ರದ್ಧಾ ಶ್ರೀನಾಥ್ ಆಕ್ಷನ್ ಸಿನಿಮಾ ಮಾಡುವಾಗ ಆಕ್ಷನ್ ಗೆ ಮಹತ್ವ ಇದ್ದೇ ಇರುತ್ತದೆ. ಅದೇ ರೀತಿ ಲವ್ ಸ್ಟೋರಿ ಸಿನಿಮಾ ಮಾಡಿದಾಗ ರೋಮ್ಯಾನ್ಸ್ ಇದ್ದೇ ಇರುತ್ತದೆ ಎನ್ನುವುದು ಶ್ರದ್ಧಾ ಶ್ರೀನಾಥ್ ಅಭಿಪ್ರಾಯವಾಗಿದೆ. ಕಿಸ್ಸಿಂಗ್ ದೃಶ್ಯದ ಬಗ್ಗೆ ಮೊದಲೇ ಹೇಳಬೇಕು ಎಂದ ನಟಿ.  ಅವರು  ಹಾಗೇ ಹೇಳೋಕೆ ಕಾರಣವಿದೆ. ನಮಗೆ ಚುಂಬನ ದೃಶ್ಯ ಇರೋದರ ಬಗ್ಗೆ ಗೈಡ್ ಮಾಡಿರಲ್ಲ, ನಮಗೆ ಹೇಳದಂತೇ ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದಿದ್ದಾರೆ. 

ನಾವು ಕಲಾವಿದರು ಪಾತ್ರ ಯಾವುದಾದರೂ ಮಾಡುತ್ತೀವಿ ಎಂಬ ಮನೋಭಾವನೆ ಖಂಡಿತಾ ಅದು ಕಷ್ಟವಾಗುವುದಿಲ್ಲ. ನಿಜ ಜೀವನದಲ್ಲಿ ಪ್ರೇಮಿಗಳು ಕಿಸ್ ಮಾಡುವುದಿಲ್ಲವೇ…? ಅದನ್ನು ಮುಚ್ಚಿಟ್ಟು ಲವ್ ಸಿನಿಮಾಗಳಲ್ಲಿ ಏನು ಮಾಡಲು ಸಾಧ್ಯ. ಮುಚ್ಚಿಟ್ಟರೇ ಅದು ಲವ್ ಸ್ಟೋರಿ ಆಗಲ್ಲವೆಂದರು.ಅದು 60 ರ ದರ್ಶಕದ ಚಿತ್ರವಾಗುತ್ತದೆ ಎಂದರು. ಅಗತ್ಯವಾದ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳಲು ನನಗೆ ಅಭ್ಯಂತರ ಇಲ್ಲ. ಆದರೆ, ಅದನ್ನು ಮೊದಲೇ ಹೇಳಬೇಕು.ಏಕೆಂದರೇ ನಾವು ಮೊದಲೇ ಮೆಂಟಲೀ ಪ್ರಿಪೇರ್ ಆಗ್ತೀವಿ. ಕೊನೆ ಕ್ಷಣದಲ್ಲಿ ಚುಂಬನ ದೃಶ್ಯವನ್ನು ಸೇರಿಸುತ್ತೇವೆ ಎಂದರೆ ನಾನು ಒಪ್ಪಲಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Edited By

Manjula M

Reported By

Kavya shree

Comments