ಈ ದೇವಸ್ಥಾನದಲ್ಲಿ ಪೂಜೆ ಮಾಡಿದ್ರೆ ಯಶ್ ಸಿನಿಮಾ ಹಿಟ್ ಆಗುತ್ತಂತೆ… ಅದ್ಯಾವ ದೇವಸ್ಥಾನ ಗೊತ್ತಾ..?

14 Mar 2019 5:01 PM | Entertainment
287 Report

ಕಳೆದ ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಬಹು ದೊಡ್ಡ ಯಶಸ್ಸು ಕಂಡ ಸಿನಿಮಾ ಅಂದರೆ ಅದು ಕೆಜಿಎಫ್.. ಕರ್ನಾಟಕ ಅಷ್ಟೇ ಅಲ್ಲ,ಸಿನಿಮಾ ದೇಶದ ಮೂಲೆ ಮೂಲೆಗೂ ತಲುಪಿತು. ಯಶ್  ಕೂಡ ಆ ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆದರು…. ಎರಡು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೇ ಕೆಜಿಎಫ್ ಗಾಗಿ ಹಗಲಿರುಳು ದುಡಿದ ಯಶ್. ಈ ಬಾರಿ ಕೆಜಿಎಫ್-ಭಾಗ- 2 ನಲ್ಲಿ ಇನ್ನೊಂದು ಇನ್ನಿಂಗ್ಸ್ ಬರೆಯಲು ಮುಂದಾಗಿದ್ದಾರೆ… ಕೆಜಿಎಫ್ ನೋಡಿದವರು ಭಾಗ-2 ಯಾವಾಗ ಬೇಗ ಪ್ರಾರಂಭ ಮಾಡಿ ಎನ್ನುತ್ತಿದ್ದರು.. ಇದೀಗ ಕೆಜಿಎಫ್ 2 ಸಿನಿಮಾದ ಮೂಹೂರ್ತವಾಗಿದೆ.

ಕೆಜಿಎಫ್ ನ ಭರ್ಜರಿ ಯಶಸ್ಸಿನ ನಂತರ ಇದೀಗ ಕೆಜಿಎಫ್ 2 ಚಿತ್ರ ಯಶಸ್ಸಿನ ನಂತರ ಇದೀಗ ಕೆಜಿಎಫ್ 2 ಚಿತ್ರಿಕರಣ ಪ್ರಾರಂಭವಾಗಿದೆ.. ನಗರದ ಕೋದಂಡರಾಮ ದೇವಸ್ಥಾನದಲ್ಲಿ ಮೂಹೂರ್ತ ಮಾಡಲಾಗಿತ್ತು… ಆದರೆ ಮತ್ತೊಮ್ಮೆ ಮಹಾಲಕ್ಷ್ಮಿ ಲೇಔಟ್’ನಲ್ಲಿರುವ ಗಣೇಶ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆಯನ್ನು ಮಾಡಲಾಗಿದೆ.ವಿಶೇಷ ಎಂದರೆ ಕೆಜಿಎಫ್ 1 ಸ್ಕ್ರಿಪ್ಟ್ ಅನ್ನುಕೂಡ ಇಲ್ಲಿಯೇ ಪೂಜೆ ಮಾಡಿಸಲಾಗಿತ್ತು.. 

ಹಾಗಾಗಿಯೇ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.. ಇದೀಗ ಚಾಪ್ಟರ್ 2 ಅನ್ನು ಕೂಡ ಇಲ್ಲಿಯೇ ಮಾಡಲಾಗಿದೆ.. ..ಗಣೇಶನ ದೇವಸ್ಥಾನದಲ್ಲಿ ಪೂಜೆ ಮಾಡಿಸಿದರೆ ಯಶಸ್ಸು ಸಿಗುತ್ತೆ ಎನ್ನುವುದು ಚಿತ್ರತಂಡದ ನಂಬಿಕೆ ..ಹಾಗಾಗಿಯೇ ಗಣೇಶನ ದೇವಸ್ಥಾನದಲ್ಲಿಯೂ ಕೂಡ ಪೂಜೆ ಮಾಡಿಸಿದ್ದಾರೆ.. 

ಅದೇನೆ ಇರಲಿ ಕನ್ನಡ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟ ಸಿನಿಮಾ ಇದಾಗಿದ್ದು ಕೆಜಿಎಫ್ 2 ಮೇಲಿಯೂ  ಕೂಡ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದ್ದಾರೆ.. ಕೆಜಿಎಫ್ ರೀತಿಯಲ್ಲಿಯೇ ಸಕ್ಸಸ್ ಕಾಣುತ್ತದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸುಮಾರು ಒಂದು ವರ್ಷವಾದರೂ ಕಾಯಲೇಬೇಕು  

 

Edited By

Manjula M

Reported By

Manjula M

Comments