ಕೊನೆಗೂ 'ಪೊಗರು' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್..!!!

14 Mar 2019 3:39 PM | Entertainment
338 Report

ಸ್ಯಾಂಡಲ್ ವುಡ್ ಈ ವರ್ಷದಲ್ಲಿ ಸಿನಿಮಾ ಹಬ್ಬವೇ ನಡೆಯುತ್ತಿದೆ… ನಟಸಾರ್ವಭೌಮ, ಸೀತರಾಮ ಕಲ್ಯಾಣ, ಯಜಮಾನ, ಬೆಲ್ ಬಾಟಂ ಸಿನಿಮಾದಂತಹ ಸೂಪರ್ ಹಿಟ್  ಸಿನಿಮಾಗಳು ಬಿಡುಗಡೆಯಾಗಿವೆ… ಇದೀಗ ಧ್ರುವಸರ್ಜಾ ಅಭಿನಯದ ಪೊಗರು ಸಿನಿಮಾ ಬಿಡುಗಡೆಗೆ ಮೂಹೂರ್ತ ನಿಗಧಿಯಾಗಿದೆ.. ಭರ್ಜರಿ ನಂತರ ಧ್ರುವ ಸರ್ಜಾ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ… ಇದೀಗ ಭರ್ಜರಿ ಸಿನಿಮಾದ ನಂತರ ಪೊಗರು ಬಿಡುಗಡೆಯಾಗುತ್ತಿದೆ.. ಡೈಲಾಗ್ ನಿಂದಾನೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಆ್ಯಕ್ಷನ್ ಪ್ರಿನ್ಸ್ ಪೊಗರು ತೋರಿಸೋಕೆ ಬರ್ತಿದ್ದಾರೆ.

ನಟ ಧ್ರುವ ಸರ್ಜಾ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಭರ್ಜರಿ ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಭರ್ಜರಿ ಸಿನಿಮಾ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ತಡ ಆಗುತ್ತಲೇ ಬಂತು. ಆದರೆ, ಕೊನೆಗೂ ಈಗ ಸಿನಿಮಾ ರಿಲೀಸ್ ಡೇಟ್ ಅನ್ನು ಚಿತ್ರತಂಡ ತಿಳಿಸಿದೆ. ಅಂದುಕೊಂಡ ಸಮಯಕ್ಕೆ ಸರಿಯಾಗಿ ಸಿನಿಮಾ ಮುಗಿಸುವ ಕೆಲಸದಲ್ಲಿ ಚಿತ್ರತಂಡ ಬುಸ್ಸಿಯಾಗಿದೆ. 

ಹೈದರಾಬಾದ್ ನಿಂದ ಶೂಟಿಂಗ್ ಮುಗಿಸಿ ಬಂದ 'ಪೊಗರು' ಟೀಮ್ ಬಿಡುಗಡೆ ಯಾವಾಗ ಎಂಬ ಸುದ್ದಿಯನ್ನು ನೀಡಿದೆ.. ಧ್ರುವ ಸರ್ಜಾ ಅಭಿಮಾನಿಗಳು 'ಪೊಗರು' ಸಿನಿಮಾ ನೋಡಬೇಕು ಅಂದರೆ ಇನ್ನೂ ಐದು ತಿಂಗಳು ಕಾಯಬೇಕಿದೆ. ಸಿನಿಮಾವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಸಿನಿಮಾ ರಿಲೀಸ್ ಆಗುತ್ತಿದೆ. ಪೊಗರು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವತ್ಸವ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಿನಿಮಾ ತೆರೆ ಮೇಲೆ ಯಾವ ರೀತಿ ಕಾಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments