ತಂದೆಯಾಗಿರುವ ಖುಷಿಯಲ್ಲಿ ಬಿಗ್ ಬಾಸ್ ಸ್ಪರ್ಧಿ..!!! ಯಾರ್ ಗೊತ್ತಾ

14 Mar 2019 1:54 PM | Entertainment
1447 Report

ಸ್ಯಾಂಡಲ್ವುಡ್’ನಲ್ಲಿ ಒಂದಷ್ಟು ದಿನ ಒಬ್ಬರಾದ ಮೇಲೆ ಒಬ್ಬರಿಗೆ ಕಂಕಣ ಭಾಗ್ಯ ಕೂಡಿ ಬರುತ್ತಿತ್ತು. ಆದರೆ ಈ ಬಾರಿ ಸ್ಟಾರ್ ನಟರು ಅಪ್ಪ ಆಗ್ತಿರುವ ಖುಷಿಯಲ್ಲಿ ಇದ್ದಾರೆ. ಈಗಷ್ಟೇ ನಟ ಸೃಜನ್ ಲೋಕೇಶ್ ಅವರ ಪತ್ನಿ, ಸಿರಿಯಲ್ ನಟಿ ಗ್ರೀಷ್ಮಾ ಸೀಮಂತ ಸಂಭ್ರಮ  ಆಚರಿಸಿಕೊಂಡರು. ಅವರಾದ ನಂತರ ಮತ್ತೊಂದು ಸ್ಯಾಂಡಲ್’ವುಡ್ ಗೆ ಗುಡ್ ನ್ಯೂಸ್ ಸಿಕ್ಕಿತು. ಲೂಸ್ ಮಾದ ಯೋಗಿ ಅಪ್ಪ ಆಗ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಈಗ ಮತ್ತೆ ಒಬ್ಬ ಸ್ಟಾರ್ ಅಪ್ಪ ಆಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್-5 ರಲ್ಲಿ ಸ್ಪರ್ಧಿಯಾಗಿದ್ದ ರಿಯಾಜ್ ಪಾಷಾ ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಮನೆಗೆ ಬಂದ ಹೊಸ ಅತಿಥಿ ಆಗಮನಕ್ಕೆ ಸಿಕ್ಕಾಪಟ್ಟೆ ಸಂಭ್ರಮದಲ್ಲಿದ್ದಾರೆ ಕುಟುಂಬಸ್ಥರು.

ಬುಧವಾರ ರಿಯಾಝ್ ಪತ್ನಿ ಆಯೇಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಂದಹಾಗೇ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ರಿಯಾಜ್ ತಮ್ಮ ಖುಷಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಹಾಕುವುದರ ಮೂಲಕ ಹೊಸ ಅತಿಥಿಗೆ ವೆಲ್ ಕಮ್ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿ ಎಂಬ ಸುದ್ದಿಗೆ ಹೆಚ್ಚು ಸೌಂಡು ಮಾಡಿದ್ದ ಸ್ಪರ್ಧಿಗಳ ಪೈಕಿ ಈ  ರಿಯಾಜ್  ಕೂಡ ಒಬ್ಬರು.

Edited By

Kavya shree

Reported By

Kavya shree

Comments