ಬೆಲ್ ಬಾಟಂ-2 ಶುರು : ರಿಶಬ್’ಗೆ ನಾಯಕಿ ….?!

14 Mar 2019 10:35 AM | Entertainment
181 Report

ಅಂದಹಾಗೇ  ಕನ್ನಡದಲ್ಲಿ ದೊಡ್ಡ ಟೈಟಲ್ ಇಟ್ಟು ಸಿನಿಮಾ ಯಶಸ್ವಿ ಮಾಡಿದ ನಿರ್ದೇಶಕ ಅಂದ್ರೆ  ರಿಶಬ್ ಶೆಟ್ಟಿ ಅವರು. ಅಂದಹಾಗೇ ಹಿರಿಯ ಪ್ರಾಥಮಿಕ ಪಾಠ ಶಾಲೆ ನಂತರ ರಿಶಬ್ ಹಿರೋ ಆಗಿ ಬೆಲ್ ಬಾಟಂ ಸಿನಿಮಾ ಮಾಡಿದ್ರು. ಸಿನಿಮಾ ಸಿಕ್ಕಾಪಟ್ಟೆ ಸಕ್ಸಸ್ ಆಯ್ತು. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಗುಡ್ ರೆಸ್ಪಾನ್ಸ್ ಸಿಕ್ತು. ಇದೀಗ ನಾಯಕ ಕಂ ನಿರ್ದೇಶಕರಾಗಿರುವ ರಿಶಬ್ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಬೆಲ್ ಬಾಟಂ ಸಿನಿಮಾ ಪಾರ್ಟ್-2 ಮಾಡೊಕೆ ಮುಂದಾಗಿದ್ದಾರೆ. ಅಂದಹಾಗೇ ಈ ವರ್ಷದ ಕೊನೆಯಲ್ಲಿ ಭಾಗ-2 ಶುರುವಾಗುವ ಮುನ್ಸೂಚನೆ ಸಿಕ್ಕಿದೆ.

ಅಂದಹಾಗೇ ಡಿಟಕ್ಚೀವ್ ಕಥೆಯಾಧರಿತ ಸಿನಿಮಾ ಬೆಲ್ ಬಾಟಂ. ನೈಜ ಘಟನೆಯನ್ನಾಧರಿತ ಚಿತ್ಕಥೆಯನ್ನು ಒಳಗೊಂಡಿದೆ. ರಾಜ್ಯದ  ಪವರ್ ಫುಲ್ ಇಬ್ಬರು ಸಿಎಂ ಗಳ ಕುರಿತ ಚಿತ್ರಕಥೆಯದ್ದಾಗಿತ್ತು. ಒಟ್ಟಾರೆ ಸಿನಿಮಾ ಕೂಡ ಯಶಸ್ಸು ಆಯ್ತು. ದಯಾನಂದ ಪಾತ್ರದಲ್ಲಿ ರಿಶಬ್ ಶೆಟ್ಟಿ ಮಿಂಚಿದ್ರೆ, ಹರಿಪ್ರಿಯಾ ನಾಯಕಿಯಾಗಿ ಕಾಣಿಸಿಕೊಂಡರು. ಬೆಲ್ ಬಾಟಂ ಗೆ ಸಿಕ್ಕ ಕ್ರೇಜ್ ನೋಡಿ, ರಿಶಬ್ ಅವರು ಬೆಲ್ ಬಾಟಂ ಸಿನಿಮಾ ಪಾರ್ಟ್ -2  ಮಾಡೋಕೆ ಆರಂಭ ಮಾಡುತ್ತಿದ್ದಾರೆ. ಬೆಲ್‌ಬಾಟಂ ಮುಂದುವರಿದ ಭಾಗವನ್ನು ಜೇಮ್ಸ್ ಬಾಂಡ್ ಶೈಲಿಯಲ್ಲಿ ರೂಪಿಸುವುದಕ್ಕೆ ಹೊರಟಿದ್ದಾರೆ. ಅದರೆ ದಿವಾಕರನ ಕೈಗೆ ಪುಟ್ಟ ಪಿಸ್ತೂಲು ಬರಲಿದೆ. ಪಾರ್ಟ್ 2ನಲ್ಲಿ ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಕಲಾವಿದರೂ ಮುಂದುವರಿಯಲಿದ್ದಾರೆ ಬೆಲ್ಬಾಟಂ ಸಿನಿಮಾ-2 ಕ್ಕೆ ರಿಶಬ್ ಅವರೇ ನಾಯಕನಾಗಿ ಕಾಣಿಸಿಕೊಂಡರೇ ಇನ್ನು ನಾಯಕಿ ಆಯ್ಕೆ ಯಾಗಬೇಕಿದೆ. ದಿವಾಕರನೇ ನಾಯಕ,ನಿರ್ದೇಶಕ, ಕಥೆ ಕೂಡ ರೆಡಿಯಾಗಿದೆ. ಆದರೆ ಸಿನಿಮಾ ಶೂಟಿಂಗ್, ತಂತ್ರಜ್ಞಾನ ಸಿದ್ಧವಾಗ ಬೇಕಿದೆ.

 

Edited By

Kavya shree

Reported By

Kavya shree

Comments