ಲೋಕಸಭೆ ಚುನಾವಣೆಗೆ ಮತ್ತೊಬ್ಬ ಸ್ಟಾರ್ ನಟಿ ಸ್ಪರ್ಧೆ..?!!!
                    
					
                    
					
										
					                    ಅಂದಹಾಗೇ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಟಾರ್ ಸ್ಟಾರ್ ನಟರು-ನಟಿಯರು ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಬಾರಿ ರಾಜಕೀಯ ನಾಯಕರಾದಿಯಾಗಿ ದೊಡ್ಡ ಮಟ್ಟದ ಸ್ಟಾರ್’ಗಳೇ ಕಣಕ್ಕಿಳಿದಿರುವುದು ದೊಡ್ಡ ವಿಶೇಷ. ಕರ್ನಾಟಕದ ರಾಜ್ಯ ರಾಜಕೀಯ ರಣರಂಗವಾಗುತ್ತಿದೆ. ಸ್ಯಾಂಡಲ್ವುಡ್’ ನ ಸ್ಟಾರ್ ಗಳೆಲ್ಲಾ ಲೋಕ ಸಭೆ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ನಟಿ ಲೋಕ ಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆ ಖ್ಯಾತ ನಟಿ ಯಾರು ಗೊತ್ತಾ,…?

ಟಾಲಿವುಡ್ ನ ಸುಂದರಿ ಮಿಮಿ ಚಕ್ರವರ್ತಿ ಈ ಬಾರಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ಆದರೆ ಇವರು ಚುನಾವಣೆಗೆ ನಿಲ್ಲುತ್ತಿರುವುದು ಜಾಧವ್ ಪುರ್ ಲೋಕಸಭೆ ಕ್ಷೇತ್ರದಿಂದ ಎಂಬುದು ವಿಶೇಷ. ಮಿಮಿ ಚಕ್ರವರ್ತಿ ಅವರು ಮೂಲತಃ ಬಂಗಾಳದವರು. ಆದರೆ ಅವರು ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಹೆಸರು ಮಾಡಿದರು. ಅಲ್ಲೇ ನೆಲೆ ಕಂಡು ಕೊಂಡವರು.

ತೆಲಗು ಅಷ್ಟೇ ಅಲ್ಲಾ, ಬಂಗಾಳಿಯ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೆಚ್ಚುಕಾಣಿಸಿಕೊಂಡು ಜನಪ್ರಿಯರಾಗಿದ್ದಾರೆ. ಅಂದಹಾಗೇ ಚಿರಪರಚಿತರಾಗಿರುವ ಮಿಮಿ ಚಕ್ರವರ್ತಿ ತೃಣಮೂಲ ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಿದ್ಯಂತೆ. ಈ ಹಿನ್ನೆಲೆಯಲ್ಲಿ ತನ್ನ ತಾರಾ ವರ್ಚಸ್ಸು ಬಳಸಿ ಸಂಸತ್ತು ಪ್ರವೇಶಿಸುವ ಇರಾದೆಯಲ್ಲಿದ್ದಾರೆ ಮಿಮಿ ಚಕ್ರವವರ್ತಿ.
																		
							
							
							
							
						
						
						
						



								
								
								
								
								
								
								
								
								
								
Comments