ಬಾಲಿವುಡ್ ಸಿನಿಮಾದಲ್ಲಿ ಮಿಂಚಲಿದ್ದಾರೆ ಕನ್ನಡದ ಹಿರಿಯ ನಟ..!!

13 Mar 2019 2:59 PM | Entertainment
325 Report

ಸ್ಯಾಂಡಲ್’ವುಡ್ ನ ನಟ ನಟಿಯರು ಬಾಲಿವುಡ್ ಗೆ ಹೋಗುವುದು ಕಾಮನ್ ಆಗಿಬಿಟ್ಟಿದೆ…ಆದರೆ ಸ್ಯಾಂಡಲ್’ವುಡ್ ನ ಹಿರಿಯ ನಟ ಬಾಲಿವುಡ್ ಗೆ ಹಾರಲಿದ್ದಾರೆ … ಅರೇ ಯಾರಪ್ಪ ಅದು ಅಂತ ಯೋಚನೆ ಮಾಡುತ್ತಿದ್ದೀರಾ... ಸ್ಯಾಂಡಲ್’ವುಡ್ ನಲ್ಲಿ ಚಿಗುರಿದ ಕನಸು ಒಂದೊಳ್ಳೆ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತು.. ಆ ಸಿನಿಮಾ ನೋಡಿದವರಿಗೆ ಒಂದಷ್ಟು ಪಾತ್ರಗಳು ಮನಸ್ಸಲ್ಲಿಯೇ ಉಳಿಯುತ್ತವೆ.. ಅದರಲ್ಲಿ ಹಿರಿಯ ನಟ ದತ್ತಣ್ಣ ಕೂಡ ಒಬ್ಬರು.. ಇದೀಗ ಬಾಲಿವುಡ್ ಸಿನಿಮಾದಲ್ಲಿ ಮಿಂಚಲಿದ್ದಾರೆ…  

ಇದೀಗ ಬಾಲಿವುಡ್ ಬಿಗ್ಬಜೆಟ್ಚಿತ್ರದಲ್ಲಿ ದತ್ತಣ್ಣ ಅಭಿನಯಿಸುತ್ತಿದ್ದಾರೆ…. ಅಕ್ಷಯ್ಕುಮಾರ್‌, ನಿತ್ಯಾ ಮೆನನ್‌, ವಿದ್ಯಾ ಬಾಲನ್‌, ಸೋನಾಕ್ಷಿ ಸಿನ್ಹಾ- ಹೀಗೆ ದೊಡ್ಡ ತಾರಾಗಣ ಹೊಂದಿರುವಮಿಷನ್ಮಂಗಲ್‌’ ಚಿತ್ರದಲ್ಲಿ ಅಭಿನಯಿಸಿ ಬಂದಿದ್ದಾರೆ. ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಅಭಿನಯಿಸಿದ್ದಾರೆ..

ಖ್ಯಾತ ನಿರ್ದೇಶಕ ಆರ್ಭಾಲ್ಕಿ ಮತ್ತು ಅಕ್ಷಯ್ಕುಮಾರ್ಇಬ್ಬರೂ ಸೇರಿ ನಿರ್ಮಿಸುತ್ತಿರುವ ಚಿತ್ರವಿದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ವರ್ಷದ ಆಗಸ್ಟ್ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬೈನಲ್ಲಿ ಬೆಂಗಳೂರು ಇಸ್ರೋದ ಸೆಟ್ಅನ್ನು ನಿರ್ಮಿಸಿಕೊಂಡು ಚಿತ್ರೀಕರಣ ನಡೆಸಲಾಗಿದೆ.

 

ದತ್ತಣ್ಣ, ಅಕ್ಷಯ್ಕುಮಾರು ಸೇರಿ ಸುಮಾರು ಎಂಟು ಜನ ವಿಜ್ಞಾನಿಗಳ ಪಾತ್ರ ಮಾಡಿದ್ದಾರೆ.ದತ್ತಣ್ಣ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ಸುಮಾರು 17 ದಿನ ಇವರ ಪಾತ್ರದ ಚಿತ್ರೀಕರಣ ನಡೆದಿದೆ. ಇನ್ನೂ ಒಂದು ದಿನದ ಚಿತ್ರೀಕರಣ ಬಾಕಿ ಇದೆ. ಬಾಲಿವುಡ್’ನ ಸಿನಿಮಾದ ಬಗ್ಗೆ ದತ್ತಣ್ಣ ಮೆಚ್ಚುಗೆಯ ಮಾತುಗಳನ್ನು ಹಾಡಿದ್ದಾರೆ. ಒಟ್ಟಾರೆ ಯಾಗಿ ಕನ್ನಡದ ಹಿರಿಯ ನಟ ಬಾಲಿವುಡ್ ನಲ್ಲಿ ಅಭಿನಯಿಸಿರುವುದೇ ಖುಷಿಯ ವಿಚಾರವೇ…

Edited By

Manjula M

Reported By

Manjula M

Comments