ಕಿರುತೆರೆಯ ಸುಂದರಿ ಸನ್ನಿಧಿಗೆ ಎದುರಾಯ್ತು ಬಹು ದೊಡ್ಡ ಅಗ್ನಿ ಪರೀಕ್ಷೆ…?!!!

13 Mar 2019 2:19 PM | Entertainment
271 Report

ಅಂದಹಾಗೇ ಕಿರುತೆರೆ ಹೈ ಟಿಆರ್ ಪಿ ಧಾರವಾಹಿ ಅಗ್ನಿಸಾಕ್ಷಿಯ ಹೀರೋಯಿನ್ ವೈಷ್ಣವಿ ಗೌಡ ಸದ್ಯ ಅಗ್ನಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಅಂದಹಾಗೇ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ತಮ್ಮ ಲೈಫ್ ನ ಮತ್ತೊಂದು ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಈಗಾಗಲೇ ಸೀರಿಯಲ್ ಮೂಲಕ ಹೆಂಗೆಳೆಯರ ಮನ ಗೆದ್ದಿದ್ದ ಸನ್ನಿಧಿ, ಸದ್ಯ ಸಿಲ್ವರ್ ಸ್ಕ್ರೀನ್ ಗೆ ಎಂಟ್ರಿಯಾಗಿದ್ದಾರೆ. ಸನ್ನಿಧಿ ಅಂದ್ರೆ ಅಪಾರ ಅಭಿಮಾನಿಗಳಿಗೆ ಅಚ್ಚುಮೆಚ್ಚು, ಕ್ಯೂಟ್ ಲುಕ್, ಮುದ್ದು ಮುದ್ದಾಗಿ ಮಾತನಾಡುವ ವೈಷ್ಣವಿ ಅಗ್ನಿಸಾಕ್ಷಿ ಧಾರವಾಹಿಯ ಹಿರೋಯಿನ್. ಈಗ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಅಂದಹಾಗೇ ಸನ್ನಿಧಿ ವೈಷ್ಣವಿಗೌಡ ಬೆಳ್ಳಿ ಪರದೆ ಮೂಲಕ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

 

ರವಿಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಸಿನಿಮಾ ಎಲ್ಲಾ ಕಡೆ ಕ್ರೇಜ್ ಹುಟ್ಟಿಸಿಕೊಂಡಿದೆ. ಟ್ರೇಲರ್, ಹಾಡುಗಳ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ. ಹೀಗೆ 'ಗಿರ್ ಗಿಟ್ಲೆ' ಬಗ್ಗೆ ಎಲ್ಲೆಡೆ ದೊಡ್ಡ ಮಟ್ಟದ ಕ್ರೇಜ್ ಆರಂಭವಾಗಿದೆ. ಎಲ್ಲಾ ಥರಹೊಸ ಹೊಸ ಅನುಭವಗಳನ್ನು ಸಿನಿಮಾವೊಂದಿದೆ. ಈ ಸಿನೆಮಾ ಮೂಲಕ ಸೀರಿಯಲ್ ಸ್ಟಾರ್ ವೈಷ್ಣವಿ ಗೌಡ ನಾಯಕಿಯಾಗಿ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿ ಅವರ ಪಾತ್ರ ಕೂಡಾ ಒಟ್ಟಾರೆ ವಿಶೇಷತೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.  ಆದರೆ ಗಿರ್’ಗಿಟ್ಲೆಯಲ್ಲಿ ಅಗ್ನಿಸಾಕ್ಷಿ ಸನ್ನಿಧಿ ಪಾತ್ರ ಸಿನಿಮಾದಲ್ಲಿ ಬೇರೆಯದ್ದೇ ಆಗಿದೆ. ಮುಗ್ಧ ಪಾತ್ರ ಮೂಲಕ ಎಲ್ಲರನ್ನು ಸೆಳೆದಿದ್ದ ಸನ್ನಿಧಿ ಅಲಿಯಾಸ್ವೈಷ್ಣವಿ ಗೌಡ  ಸಿಲ್ವರ್ ಸ್ಕ್ರೀನ್ ನ ಗಿರ್’ಗಿಟ್ಲೆ ಯಲ್ಲಿ ಡಿಫರೆಂಟ್ ಆಗಿಯೇ ಕಾಣುತ್ತಾರೆ. ಅವರ ಪಾತ್ರ ನೊಡಿ ಖಂಡಿತಾ ಮೆಚ್ಚಿಕೊಳ್ತಾರೆ ಅವರ ಅಭಿಮಾನಿಗಳು. ಒಂದೊಮ್ಮೆ ಸಿನಿಮಾ ಮೂಲಕ ವೈಷ್ಣವಿಗೆ ಲಕ್ ದಕ್ಕಿದ್ರೆ ಖಂಡಿತಾ ಅವರು ದೊಡ್ಡ ಅಗ್ನಿ ಪರೀಕ್ಷೆಯಲ್ಲಿ ಗೆದ್ದಂತೆ.

Edited By

Kavya shree

Reported By

Kavya shree

Comments