ಉಗ್ರಂ ನಾಯಕಯನ್ನು ಭೇಟಿ ಮಾಡಿದ ಬಿಗ್’ಬಾಸ್ ವಿನ್ನರ್..!!

13 Mar 2019 12:38 PM | Entertainment
543 Report

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಬಹಳಷ್ಟು ಹೆಸರನ್ನು ತಂದುಕೊಟ್ಟಿತ್ತು… ಈಗಾಗಲೇ ಆರು ಆವೃತ್ತಿಗಳನ್ನು ಮುಗಿಸಿರುವ ಬಿಗ್ ಬಾಸ್ 7 ನೇ ಆವೃತ್ತಿಗೆ ಚಿಂತನೆ ನಡೆಸುತ್ತಿರಬೇಕು.. ಇದರೆ ನಡುವೆ ಬಿಗ್ ಬಾಸ್ ಆವೃತ್ತಿ 6 ಸಿಕ್ಕಾಪಟ್ಟೆ ಕಾಂಟ್ರೋವರ್ಸಿಯನ್ನು ಮಾಡಿತ್ತು.. ಸೀಜನ್ 6 ಮುಗಿದ ಮೇಲೂ ಕೂಡ ಸಾಕಷ್ಟು ಸುದ್ದಿಯಲ್ಲಿತ್ತು.. ಸ್ಪರ್ಧಿಗಳು ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡ ಹತ್ತಿದ್ದಾರೆ.. ಈ ಸೀಜನ್ ಸುದ್ದಿಯಾದಷ್ಟು ಮತ್ಯಾವ ಸೀಜನ್ ಕೂಡ ಸುದ್ದಿಯಾಗಿರಲಿಲ್ಲ… ಬಿಗ್ ಬಾಸ್ ಸೀಜನ್ 6 ಏನೋ ಮುಗಿತು.. ಆದರೆ ಸೀಜನ್ 6 ರ ವಿನ್ನರ್ ಶಶಿಕುಮಾರ್ ಏನ್ ಮಾಡ್ತಿದ್ದಾರೆ ಗೊತ್ತಾ..

ಮಾಡ್ರನ್ ರೈತ ಅಂತಾನೆ ಶಶಿಕುಮಾರ್ ಫೇಮಸ್ ಆಗಿಬಿಟ್ಟಿದ್ದರು… ವೀಕ್ಷಕರ ಮನಗೆಲ್ಲುವಲ್ಲಿ ಶಶಿ ಯಶಸ್ವಿಯಾಗಿದ್ದಾರೆ..ಇದೀಗ ಬಿಗ್ ಬಾಸ್ ವಿನ್ನರ್ ಶಶಿ ಕೆಲವು ಸ್ಯಾಂಡಲ್’ವುಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ..ಕಾರಣ ಏನ್ ಗೊತ್ತಾ..? ಇದೀಗ ಮಾಡ್ರನ್ ರೈತ ಶಶಿ ಅವರು ಉಗ್ರಂ ನಾಯಕ ಶ್ರೀ ಮುರುಳಿಯವರನ್ನು  ಭೇಟಿ ಮಾಡಿದ್ದಾರೆ.. ಶಶಿ ಏನಾದರೂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರಾ ಎಂಬ ಪ್ರಶ್ನೆಗಳು ಹುಟ್ಟೋದು ಕಾಮನ್..

ಆದರೆ ಶಶಿ ಸದ್ಯ ಯಾವ ಸಿನಿಮಾದಲ್ಲೂ ಅಭಿನಯಿಸುತ್ತಿಲ್ಲ…..ಬದಲಿಗೆ ಕೃಷಿಯ ಬಗ್ಗೆ ಮಾತನಾಡಿದ್ದೇವೆ… ಎಂದು ಶಶಿ ತಿಳಿಸಿದ್ದಾರೆ.. ಶಶಿ, ಶ್ರೀ ಮುರುಳಿ ಬಳಿ ಕೃಷಿ ಬಗ್ಗೆ ಮಾತನಾಡಿದ್ದಾರೆ. ಶ್ರೀ ಮುರುಳಿ ತುಂಬಾ ಸಿಂಪಲ್ ಮನುಷ್ಯ, ಅವರನ್ನು ಭೇಟಿ ಮಾಡಿದ್ದು ನನಗೆ ಖುಷಿಯಾಯಿತು.. ಎಂದು ಶಶಿ ಹೇಳಿಕೊಂಡಿದ್ದಾರೆ. ಸದ್ಯ ಭರಾಟೆ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮುರುಳಿ ಮದಗಜ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

Edited By

Manjula M

Reported By

Manjula M

Comments