ಮಾರ್ಚ್ 16ಕ್ಕೆ ಅಪ್ಪು ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಗುಡ್ ನ್ಯೂಸ್…?!!!

13 Mar 2019 12:34 PM | Entertainment
216 Report

ಅಂದಹಾಗೇ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದು ಭರ್ಜರಿ ಸಿಹಿ ಸುದ್ದಿ ಕಾದಿದೆ. ಅದು ಏನು ಎಂದು ಹಲವು ಜನ ಕಾತುರರಾಗಿರೋದು ಪಕ್ಕಾ..? ಯಾಕಂದ್ರೆ ಮಾರ್ಚ್ 16 ಕ್ಕೆ ಪುನೀತ್ ರಾಜ್ ಕುಮಾರ್ ಅವರ ಬರ್ತಡೇ. ಪವರ್ ಸ್ಟಾರ್ ಅಭಿನಯದ ನಟ ಸಾರ್ವಭೌಮ ಸಿನಿಮಾ ಕೂಡ ರಿಲೀಸ್ ಆಗಿ 50 ನೇ ದಿನಕ್ಕೆ ಕಾಲಿಡುತ್ತಿದೆ. ಅದೇ ಸಂಭ್ರಮದಲ್ಲಿ ಚಿತ್ರತಂಡ ಸೇರಿ ಅಪ್ಪು ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆಯೊಂದನ್ನು ಕೊಡುತ್ತಿದ್ದಾರೆ.

ಅಂದಹಾಗೇ ಪವರ್ ಸ್ಟಾರ್ ಸಿನಿಮಾ ಅಂದ್ರೆ ಅದರಲ್ಲಿ ಹಾಡು, ಆ್ಯಕ್ಷನ್, ಡ್ಯಾನ್ಸ್ ಗೆ ಬರವೇ ಇಲ್ಲ ಬಿಡಿ. ಮಸ್ತ್ ಮಜಾ ಮಾಡೋಕೆ ಅಪ್ಪು ಸಿನಿಮಾಗಳು ಅಂತಾರೆ ಕೆಲ ಅಭಿಮಾನಿಗಳು. ಅದೇನೇ ಇರಲಿ ಸಿನಿಮಾಗೆ ನಟ ಸಾರ್ವಭೌಮ ಟೈಟಲ್ ಇಟ್ಟಾಗ ನಾನು ಸ್ವಲ್ಪ ಹೆದರಿದ್ದೆ, ಏಕೆಂದರೆ ಅದು ಅಪ್ಪಾಜಿ ಬಿರುದು, ನನ್ನ ಸಿನಿಮಾಗೆ ಇಡೋದು ಹೇಗೆ ಎಂದುಕೊಂಡೆ. ಆದರೆ ಅಪ್ಪಾಜಿ ಆಶೀರ್ವಾದ ಮಾಡಿಯೇ ಬಿಟ್ಟರು ಎಂದಿದ್ದರು ಪವರ್ ಸ್ಟಾರ್ . ಅದೇ,  ನಟ ಸಾರ್ವಭೌಮ ಚಿತ್ರತಂಡ, ಸಿನಿಮಾ ಯಶಸ್ಸಿನ ಖುಷಿಯನ್ನು ಇದೀಗ ಅಪ್ಪು ಹುಟ್ಟುಹಬ್ಬದಂದೇ ವಿಶೇವಾಗಿ ಆಚರಿಸಲಾಗುತ್ತಿದ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡಿನ ಕೊಡುಗೆ ನೀಡಲಿದ್ಯಂತೆ ನಟ ಸಾರ್ವಭೌಮ ಚಿತ್ರತಂಡ. ಪುನೀತ್ ಸಿನಿಮಾಗಳ ಹಲವು ಸೂಪರ್ ಹಿಟ್ ಟೈಟಲ್ ಗಳನ್ನಿಟ್ಟುಕೊಂಡು ವಿಶೇಷ ಹಾಡು ತಯಾರಿಸಲಾಗಿದ್ದು, ಇದನ್ನು ಅವರ ಬರ್ತ್ ಡೇ ದಿನ ಮಾರ್ಚ್ 16 ರ ಮಧ್ಯರಾತ್ರಿ ಲೋಕಾರ್ಪಣೆಗೊಳಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.ಅಂದಹಾಗೇ ಇತ್ತೀಚೆಗೆ ಸ್ಯಾಂಡಲ್ವುಡ್ ನಲ್ಲಿ ಒಂದು ಹೊಸ ಟ್ರೆಂಡ್ ಆರಂಭವಾಗಿದೆ. ಸ್ಟಾರ್ ಗಳ ಹುಟ್ಟುಹಬ್ಬಕ್ಕೆ ಅವರ ಸಿನಿಮಾ ಟೈಟಲ್, ಟೀಸರ್ ಅಥವಾ ಟ್ರೇಲರ್ ರಿಲೀಸ್ ಮಾಡೋ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಅದೇನೆ ಇರಲಿ ಈ ಬಾರಿ ಅಪ್ಪು ಅಭಿಮಾನಿಗಳಿಗೆ ಈ ವಿಶೇಷ ಹಾಡು ಸ್ಟೆಪ್ಪು ಹಾಕಿಸೋಕೆ ಬರ್ತಾಯಿದೆ, ಸಿನಿಮಾ ಟೈಟಲ್ ಗಳ ಹಾಡಿನ ಊರಣ ಹೇಗಿರುತ್ತೋ…ಕಾದು ನೋಡಬೇಕಿದೆ.

Edited By

Kavya shree

Reported By

Kavya shree

Comments