ಸ್ಟಾರ್ಟ್ ಆಯ್ತು ಕೆಜಿಎಫ್-2 : ಈ ಬಾರಿ ಹೇಗಿರುತ್ತೆ ಗೊತ್ತಾ ಯಶ್ ಹವಾ..?!!!

13 Mar 2019 12:15 PM | Entertainment
325 Report

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ಮೈಲುಗಲ್ಲು ಸಾಧಿಸಿದ ಸಿನಿಮಾ ಅಂದ್ರೆ ಅದು ಕೆಜಿಎಫ್. ಕರ್ನಾಟಕ ಅಷ್ಟೇ ಅಲ್ಲ,ಸಿನಿಮಾ ದೇಶದ ಮೂಲೆ ಮೂಲೆಗೂ ತಲುಪಿತು. ಯಶ್ ನ್ಯಾಷನಲ್  ಸ್ಟಾರ್ ಆದ್ರು. ಕೆಜಿಎಫ್ ನ್ನು ಕನ್ನಡದ ಹಿರಿಮೆ ಅಂದ್ರು. ಕೆಜಿಎಫ್ ನೋಡಿದ ಅಭಿಮಾನಿಗಳು, ಸುಮ್ಮನೇ ಕೂರಲಿಲ್ಲ. ತಾವು ಸಿನಿಮಾದಲ್ಲಿ ಕೇಳಿದ ಪ್ರಶ್ನೆಗಳಿಗೆ ಸದ್ಯ ಯಶ್ ಉತ್ತರ ಕೊಡಲು ಈಗ ಸಿದ್ಧರಾಗಿದ್ದಾರೆ. ಎರಡು ವರ್ಷಗಳ ಕಾಲ ಹಗಲು-ರಾತ್ರಿ ಎನ್ನದೇ ಕೆಜಿಎಫ್ ಗಾಗಿ ಹಗಲಿರುಳು ದುಡಿದ ಯಶ್. ಈ ಬಾರಿ ಕೆಜಿಎಫ್-ಭಾಗ- 2 ನಲ್ಲಿ ಇನ್ನೊಂದು ಇನ್ನಿಂಗ್ಸ್ ಬರೆಯಲು ರೆಡಿಯಾಗಿದ್ದಾರೆ. ಕೆಜಿಎಫ್ ನೋಡಿದವರು ಭಾಗ-2 ಯಾವಾಗ , ಬೇಗ ಆರಂಭ ಮಾಡಿ ಎಂದು ಅಷ್ಟೇ ಮಟ್ಟದಲ್ಲಿ ಥ್ರಿಲ್ ತೋರಿಸಿದ್ದರು .

ಸದ್ಯ ಅದಕ್ಕೆ ಸಮಯ ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಡಬಲ್ ಧಮಾಕಾ ನೀಡಲು ರೆಡಿಯಾಗಿದ್ದಾರೆ. ಇದೀಗ ಕೆಜಿಎಫ್: ಚಾಪ್ಟರ್ -2 ಚಿತ್ರದ ಮುಹೂರ್ತ ನೆರವೇರಿದೆ ಎಂದು ಯಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.ಅಂದಹಾಗೇ ತಾವು ಕೆಜಿಎಫ್ ಗೆ ತೋರಿಸಿದ ಪ್ರೀತಿ, ಆಶೀರ್ವಾದ ಹೀಗೆ ಮುಂದುವರೆಯಲಿ ಎಂದು ಮುಹೂರ್ತ ಫೋಟೋ ಹಾಕಿ ತಮ್ಮ ಟ್ವಿಟ್ಟರ್  ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಶ್ ರಗಡ್ ಲುಕ್ನಲ್ಲಿ ಅಪಾರ ಅಭಿಮಾನಿಗಳನ್ನು ಸೆಳೆದ್ರು. ಕೆಜಿಎಫ್ ದೊಡ್ಡ ಮಟ್ಟದ ಯಶಸ್ಸುಗಳಿಸಿತ್ತು. ಇಡೀ ದಕ್ಷಿಣ ಸಿನಿಮಾ ರಂಗದಲ್ಲಿ ಅತೀ ಬೇಡಿಕೆ ಸಿನಿಮಾವಾಗಿ ಕೆಜಿಎಫ್ ಮಾರ್ಪಟ್ಟಿತ್ತು. ಇದೀಗ ಅದರ ಮುಂದುವರೆದ ಭಾಗ -2 ರೆಡಿಯಾಗ್ತಿದೆ.

ಬೆಂಗಳೂರಿನ ಕೋದಂಡರಾಮ ದೇವಾಲಯದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್, ನಿರ್ಮಾಪಕ ವಿಜಯ್ ಕಿರಗಂದೂರು, ಭುವನ್ ಗೌಡ, ನಾಯಕಿ ಶ್ರೀನಿಧಿ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಕೆಜಿಎಫ್ ಚಾಪ್ಟರ್ 1 ಕ್ಕೆ ನಿಮ್ಮ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿದೆ. ಇದೀಗ ಚಾಪ್ಟರ್ 2 ಮೇಲೂ ನಿಮ್ಮ ಆಶೀರ್ವಾದವಿರಲಿ ಎಂದು ಯಶ್ ಮನವಿ ಮಾಡಿದ್ದಾರೆ. ಮೊದಲ ಭಾಗದ ಕೆಜಿಎಫ್ ನಲ್ಲಿ ಯಶ್ ಅಷ್ಟೇ, ಇತರೆ ಕಲಾವಿದರು ಕೂಡ ಅಷ್ಟೇ ಪ್ರಮಾಣದಲ್ಲಿ ಜನಪ್ರಿಯಗೊಳಿಸಿದ್ದಾರೆ. ಈ ಬಾರಿ ಯಶ್ ಹವಾ ಭಾಗ-1 ಕ್ಕಿಂತ ಹೆಚ್ಚಾಗಿರುತ್ತೆ. ಮತ್ತಷ್ಟು ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್ ನಟರು ಕೂಡ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೆ. ಒಟ್ಟಾರೆ ಯಶ್ ಕೆಜಿಎಫ್ ಭಾಗ-2 ಗಾಗಿ ಅಭಿಮಾನಿಗಳು ಬಕ ಪಕ್ಷಿಗಳಂತೇ ಕಾಯ್ತಾ ಇರೋದಂತೂ ಸತ್ಯ.

Edited By

Kavya shree

Reported By

Kavya shree

Comments