ಕಿಚ್ಚ ಸುದೀಪ್ ಕ್ಯಾಂಪೇನ್ ವಿಚಾರವಾಗಿ ಅಚ್ಚರಿ ಹೇಳಿಕೆ ಕೊಟ್ರು ಸುಮಲತಾ ...?!!!

13 Mar 2019 9:46 AM | Entertainment
359 Report

ಅಂದಹಾಗೇ ಸುಮಲತಾ ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೇ ಸ್ಯಾಂಡಲ್ವುಡ್ ಸ್ಟಾರ್’ಗಳಲ್ಲಿ ಭಾರೀ ಗೊಂದಲದ ವಾತವರಣ ಸೃಷ್ಟಿಯಾಗಿದೆ. ಇತ್ತೀಚಿಗೆ ನಟಿ ಸುಮಲತಾ, ಯಶ್ ಮತ್ತು ದರ್ಶನ್ ನನ್ನ ಪರವಾಗಿದ್ದಾರೆ. ನನಗೇನು ಭಯವಿಲ್ಲವೆಂದಿದ್ದರು. ಈ ವಿಚಾರವಾಗಿ ಸುದೀಪ್ ಕೂಡ  ಕೊಟ್ಟ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಾಧ್ಯಮದವರು ಸುಮಲತಾ ರಾಜಕೀಯ ಪ್ರಚಾರಕ್ಕೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದಾಗ, ದರ್ಶನ್ ಇರುವಾಗ ನಮ್ಮ ಅವಶ್ಯಕತೆ ಅವರಿಗೆ ಇಲ್ಲವೆಂದು ಹೇಳಿಕೆ ನೀಡಿದ್ರು. ಇದರ ಬೆನ್ನಲ್ಲೇ ಸೋಶಿಯಲ್ ಮಿಡಿಯಾದಲ್ಲಿ  ಸ್ಟಾರ್ ಅಭಿಮಾನಿಗಳ ಮಧ್ಯೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸದ್ಯ ನಟಿ ಸುಮಲತಾ ಸುದೀಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು..

ಖಾಸಗಿ  ವಾಹಿನಿ ಸಂದರ್ಶನದ ವೇಳೆ ಮಾತನಾಡಿದ ಅವರು ಸುದೀಪ್ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸುದೀಪ್ ದರ್ಶನ್ ಮತ್ತು ಯಶ್ ನನಗೂ ನಮ್ಮ ಯಜಮಾನರಿಗೂ, ನಮ್ಮ ಕುಟುಂಬಕ್ಕೆ ಆತ್ಮೀಯರು. ಎಲ್ಲರೂ ನಮ್ಮ ಮನೆಯವರಂತೇ. ನಾನು ಯಾರಿಗೂ ನನ್ನ ಪರವಾಗಿ ಪ್ರಚಾರ ಮಾಡಿ ಎಂದು ಕೇಳಿ ಕೊಳ್ಳುವುದಿಲ್ಲ, ಅವರಿಗೆ ಒತ್ತಾಯ ಮಾಡುವುದಿಲ್ಲ. ಅವರಿಗೂ ಅವರದ್ದೇ ಆದ ಕೆಲಸಗಳಿರುತ್ತವೆ. ನಾನು ಆ ಥರಾ ಕೇಳಿಕೊಳ್ಳುವುದು ಸರಿಯಿಲ್ಲ. 

ಸುದೀಪ್ ನಮ್ಮ ಕುಟುಂಬಕ್ಕೆ ಒಳ್ಳೆ ಫ್ರೆಂಡ್. ಆ ಫ್ರೆಂಡ್ ಶಿಪ್’ಗೆ ರಾಜಕೀಯ ಬೆರೆಸುವುದು ಸರಿಯಿಲ್ಲ  ಎಂದು ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.ಆದರೆ ಸುದೀಪ್ ಹೇಳಿಕೆ ಹಿಂದೆ ಭಾರೀ ಗೊಂದಲಗಳಿದ್ದವು. ದರ್ಶನ್ ಅಂಬಿಗೆ ಎಷ್ಟು ಆತ್ಮೀಯ ಸುದೀಪ್ ಕೂಡ ಅಷ್ಟೆ ಆತ್ಮೀಯರೋ. ಸುದೀಪ್ ಕುಮಾರ ಸ್ವಾಮಿ ಕುಟುಂಬಕ್ಕೆ ಒಳ್ಳೆ ದೋಸ್ತ್. ಸುದೀಪ್ ದರ್ಶನ್ ಬಗ್ಗೆ ಕೊಟ್ಟ ಹೇಳಿಕೆಯಿಂದ ನಟಿ ಸುಮಲತಾಗೆ ಮನದಲ್ಲಿ ಬೇಸರವಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಕೆಲವು ವಿಚಾರ ಅವರವರಿಗೆ ಬಿಟ್ಟಿದ್ದು, ಪ್ರಚಾರಕ್ಕೆ ನೀವು ಬನ್ನಿ, ಎಂದು ಕರೆಯುವುದು ಸೂಕ್ತವಲ್ಲ ಎಂದಿದ್ದಾರೆ. ಈ ನಡುವೆ ರಾಕಿಂಗ್ ಸ್ಟಾರ್ ಈಗಷ್ಟೇ ಸುಮಲತಾರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಕ್ಯಾಂಪೇನ್ ಬಗ್ಗೆ ಮಾತನಾಡಿದ್ದಾರೆ ಎಂಬ ಮಾಹಿತಿ ಇದೆ.

Edited By

Manjula M

Reported By

Kavya shree

Comments