ತಂದೆಯಾಗುವ ಸಂತಸದಲ್ಲಿದ್ದಾರೆ ಸ್ಯಾಂಡಲ್’ವುಡ್ ನ ಸ್ಟಾರ್ ನಟ..

13 Mar 2019 9:26 AM | Entertainment
484 Report

ಸ್ಯಾಂಡಲ್ವುಡ್ ನಲ್ಲಿ  ಸ್ಟಾರ್ ನಟ ನಟಿಯರು ಇತ್ತಿಚಿಗೆ ತಮ್ಮ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಿದ್ದಾರೆ..ತಮ್ಮ ನೆಚ್ಚಿನ ನಟರು ಗುಡ್ ನ್ಯೂಸ್ ಕೊಡ್ತಾರೆ ಅಂದ್ರೆ ಅಭಿಮಾನಿಗಳು ಸುಮ್ಮನೆ ಇರ್ತಾರ.. ಪುಲ್ ಖುಷಿಯಾಗಿ ಬಿಡುತ್ತಾರೆ.. ಕೆಲವು ತಿಂಗಳುಗಳು ಹಿಂದಷ್ಟೆ ಒಂದಿಷ್ಟು ನಟ ನಟಿಯರು ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿ ಸಪ್ತಪದಿಯನ್ನು ತುಳಿದರು.. ಮತ್ತೆ ಕೆಲವರ ಲೈಫ್ ನಲ್ಲಿ ಹೊಸ ಅಥಿತಿಯ ಆಗಮನವಾಯಿತು.. ಇದೀಗ ಮತ್ತೊಬ್ಬ ಸ್ಟಾರ್ ನಟ ಅಪ್ಪನಾಗುವ ಸಂಭ್ರಮದಲ್ಲಿದ್ದಾರೆ..ಅರೇ ಯಾರ್ ಅದು ಅಂತ ಯೋಚನೆ ಮಾಡುತ್ತಿದ್ದೀರಾ…,ಮುಂದೆ ಓದಿ ನಿಮಗೆ ಗೊತ್ತಾಗುತ್ತೆ..

ಚಂದನವನದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ಸಿನಿಮಾ ಅಂದರೆ ಅದು ದುನಿಯಾ ಸಿನಿಮಾ.. ಈ ಸಿನಿಮಾ ಒಂದಷ್ಟು ನಟರಿಗೆ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿತ್ತು.. ಅದರಲ್ಲಿ ಲೂಸ್ ಮಾದ ಯೋಗಿ ಕೂಡ ಒಬ್ಬರು…ಇದೀಗ ಲೂಸ್ ಮಾದ ಯೋಗಿ ತಂದೆಯಾಗುವ ಸಂಭ್ರಮದಲ್ಲಿ ಇದ್ದಾರೆ. ಈ ಬಗ್ಗೆ ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಸ್ಟಾಗ್ರಾಂನಲ್ಲಿ ಹೆಂಡತಿ ಸಾಹಿತ್ಯ ಅವರ ಪೋಟೋ ಹಾಕಿ ಖುಷಿ ಹಂಚಿಕೊಂಡಿರುವ ಯೋಗಿ, You and a MINI you is all I ever wanted. It's happening soon ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಯೋಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.. ಲೂಸ್ ಮಾದ ಯೋಗಿ ತನ್ನದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ… ಅಭಿಮಾನಿಗಳು ಕೂಡ ಲೂಸ್ ಮಾದ ಯೋಗಿಗೆ ಶುಭಾಷಯ ತಿಳಿಸಿದ್ದಾರೆ.

Edited By

Manjula M

Reported By

Manjula M

Comments