‘’ಯಾರದ್ದೋ ಸಕ್ಸಸ್ ನೋಡಿ ನೀವ್ ಮಾತ್ರ ಫೀಲ್ಡ್’ಗೆ ಇಳಿಬೇಡಿ ಎಂದ ಕಿಚ್ಚ ಸುದೀಪ್’’

12 Mar 2019 10:23 AM | Entertainment
674 Report

ಅಂದಹಾಗೇ ಕಿಚ್ಚ ಸುದೀಪ್ ಗೆ ಚಲನಚಿತ್ರದ ಕಲಾವಿದರ ಜೊತೆ ಫ್ರೆಂಡ್ಲಿ ನೇಚರ್ ಇದೆ ಎಂಬ ಮಾತಿದೆ. ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಹೊಸ ಹೊಸ ನಟ-ನಟಿಯರಿಗೆ ಮಾದರಿಯಾಗ್ತಿದ್ದಾರೆ ಅಭಿನಯ ಚಕ್ರವರ್ತಿ. ಇತ್ತೀಚೆಗೆ  ಅವರು ಹೇಳಿರುವ ಒಂದು ಹೇಳಿಕೆ ಬಗ್ಗೆ ಸ್ಯಾಂಡಲ್ವುಡ್’ನಲ್ಲಿ ಭಾರೀ ಚರ್ಚೆಯಾಗ್ತಿದೆ. ‘’ಯಾರದ್ದೋ ಸಕ್ಸಸ್‍ನ ನೋಡಿ ಫೀಲ್ಡ್‌ಗೆ ಧುಮುಕಬೇಡಿ. ನಿಮ್ಮೊಳಗೆ ಫ್ಯಾಷನ್ ಎನ್ನುವುದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು’’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ನಗರದಲ್ಲಿ ಯತೀರಾಜ್ ಸಾರಥ್ಯದ ಕಲಾವಿದ ಫಿಲಂ ಅಕಾಡೆಮಿಯನ್ನು ಉದ್ಘಾಟಿಸಿದ ಸುದೀಪ್  ಬಳಿಕ ಮಾತನಾಡಿದರು. ಕಲಾವಿದ ಫಿಲ್ಮ್ ಅಕಾಡೆಮಿಯಿಂದ ಒಳ್ಳೊಳ್ಳೆ ಪ್ರತಿಭೆಗಳು ಬರುತ್ತಿವೆ. ನೀವು ನಿಮ್ಮನ್ನು ಮೊದಲು ಪ್ರೀತಿಸಿ, ನಿಮ್ಮ ಬಗ್ಗೆ ಮೊದಲು ಯೋಚಿಸಿ, ಆ ನಂತರ ಬೇರೆಯದ್ದು ಎಂದರು ಸುದೀಪ್. ಫ್ಯಾಷನ್ ಬೆಳೆಸಿಕೊಳ್ಳಿ, ಆಮೇಲೆ ಅಖಾಡಕ್ಕೆ ಇಳಿಯಿರಿ, ಯಾರನ್ನೋ ನೋಡಿ, ಅವರ ಸಕ್ಸಸ್ ನ್ನು ಕಂಡು ನೀವು ಮಾತ್ರ ಫೀಲ್ಡ್ಗೆ ಇಳಿಬೇಡಿ ಎಂದರು.ಯಾರದ್ದೋ ಸಕ್ಸಸ್‍ನ ನೋಡಿ ಅದರಲ್ಲೂ ಸಿನಿಮಾ ಫೀಲ್ಡ್‌ಗಂತೂ ಧುಮುಕಬೇಡಿ. ನಿಮ್ಮೊಳಗೆ ಫ್ಯಾಷನ್ ಎನ್ನುವುದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದ್ದಾರೆ.

ಇದೊಂದು ಮಾಯಾ ಬಜಾರ್ ಯಾರನ್ನು ಬೇಕಾದ್ರೂ ಸೆಳೆಯುವ ಶಕ್ತಿ ಇದೆ. ಆದರೆ ನಿಮ್ಮ  ಯೋಚನೆ ನಿಮ್ಮ ಕೈಯಲ್ಲಿ ಇರಲಿ. ಆದರೆ ಬಣ್ಣದ ಜಗತ್ತಿಗೆ ಲಗ್ಗೆ ಇಡುವ ಮೊದಲು ಒಂದಿಷ್ಟು ಸಿದ್ಧತೆ ಬೇಕಾಗುತ್ತದೆ.  ನಟನೆಗಗೂ ತರಗತಿಗಳಿವೆ, ಆದರೆ ಬೇಸಿಕಲಿ ಮೊದಲು ಏನು ಕಲಿಯಬೇಕೋ ಅದನ್ನು ಕಲಿಯಲೇ ಬೇಕು. ಅದಕ್ಕೆಂದೇ ಇಂತಹ ತರಬೇತಿ ಕೇಂದ್ರಗಳಿ ಇವೆ ಎಂದರು.ಒಟ್ಟಾರೆ ಸುದಿಪ್ ಸಿನಿಮಾ ಮತ್ತು ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಕೀಯದಲ್ಲಿ, ಸುದೀಪ್ ಹೆಸರು ಹೆಚ್ಚು ಕೇಳಿ ಬರುತ್ತಿಲ್ಲವಾದರೂ ಒಂದೊಮ್ಮೆ ಅವರು ಯಾರ ಪರ ಪ್ರಚಾರಕ್ಕಿಳಿಯುತ್ತಾರೆಂಬುದೇ ಗಾಂಧಿನಗರದ ದೊಡ್ಡ  ಕೌತುಕ.

Edited By

Kavya shree

Reported By

Kavya shree

Comments