ಅಂಬಿಯಣ್ಣನ ಋಣ ತೀರಿಸೋಕೆ ನಾನು ಸುಮಲತಾ ಜೊತೆನೇ ಇರ್ತೇನೆ ಎಂದು ಹೇಳಿದ ಖ್ಯಾತ ಸ್ಟಾರ್ ನಟ : ಯಾರ್ ಗೊತ್ತಾ..?!!!

12 Mar 2019 9:05 AM | Entertainment
4276 Report

ಮಂಡ್ಯ ಲೋಕಸಭೆ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಒಂದು ಕಡೆ ಸ್ಟಾರ್ ನಟರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ನಟಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲು ನಾನು ತೀರ್ಮಾನ ಮಾಡಿದ್ದೀನಿ, ನನಗೆ ಚಿತ್ರರಂಗದ ಸಪೋರ್ಟ್ ಇದೆ ಎಂದು ಹೇಳಿದ್ದಾರೆ. ಇದರ ನಡುವೆ ಡಿ ಬಾಸ್ ಖ್ಯಾತಿಯ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ನಟಿ ಸುಮಲತಾ ಕೈ ಹಿಡಿದಿದ್ದಾರೆ ಎಂಬ ಸುದ್ದಿಯೂ ಇದೆ. ಇನ್ನು ಟಿಕೆಟ್, ಕ್ಷೇತ್ರ ಯಾವುದೂ ನಿರ್ಧಾರವಾಗಿಲ್ಲ ಇದರ ಮಧ್ಯೆ ಸ್ಟಾರ್ ನಟರೊಬ್ಬರು ನಟಿ ಸುಮಲತಾ ರಾಜಕೀಯದಲ್ಲಿ ಸ್ಪರ್ಧಿಸುವುದೇ ಆದರೆ ನಾನು ಅವರೊಂದಿಗೆ ಇರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಬೆಂಬಲಕ್ಕೆ ನಿಂತಿದ್ದಾರೆ ಮತ್ತೊಬ್ಬ ಕನ್ನಡದ ಸ್ಟಾರ್..?

ಮಂಡ್ಯದಿಂದ ಸುಮಲತಾ ಸ್ಪರ್ಧಿಸುವುದೇ ಆದರೆ  ನಾನು ಆಕೆಗೆ ಖಂಡಿತಾ ಸಪೋರ್ಟ್ ಮಾಡ್ತೀನಿ, ಅವರ ಪ್ರಚಾರಕ್ಕೆ ನಾನು ಬರುತ್ತೇನೆ ಎಂದು ಹೇಳಿದ್ದಾರೆ.ಅಂಬಿಯಣ್ಣನ ಋಣ ತೀರಿಸಬೇಕು.  ಅವರ ಮನೆಯ ಅನ್ನ ತಿಂದಿದ್ದೇನೆ. ಕನ್ನಡ ಚಿತ್ರರಂಗದ ಯಾವ ಕಲಾವಿದರು ಬರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ನಾನು ಯಾವ ಸಮಯದಲ್ಲಿಯಾದ್ರು ಸುಮಲತಾ ಅವರ ಪರ ಪ್ರಚಾರಕ್ಕೆ ಸಿದ್ಧ. ಸುಮಲತಾ ಅವರು ಅಂಬರೀಶ್ ಅವರ ಹಾದಿಯಲ್ಲಿ ನಡೆಯಲು ಮುಂದಾಗಿದ್ದಾರೆ. ಹಾಗಾಗಿ ನಾನು ಸುಮಲತಾ ಪರವೇ ಇರುತ್ತೇನೆ. ಅಂಬಿಯಣ್ಣ ನನ್ನ ಮನದಲ್ಲಿದ್ದಾರೆ ಅವರ ಋಣವನ್ನು ಈ ಮೂಲಕ ತೀರಿಸುತ್ತೇನೆ ಎಂದು ನಟ ಚರಣ್ ರಾಜ್ ಹೇಳಿದ್ದಾರೆ.

ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲು ಬಿರುಸಿನ ಪ್ರಚಾರ ನಡೆಸಿದ್ದಾರೆ. ಆದರೆ ಮಾರ್ಚ್ 18 ಕ್ಕೆ ಸುಮಲತಾ ಅವರು ತಮ್ಮ ರಾಜಕೀಯದ ಅಂತಿಮ ನಿರ್ಧಾರ ತಿಳಿಸುವುದಾಗಿ ಪ್ರಕಟಿಸಿದ್ದಾರೆ.ದರ್ಶನ್ ನನ್ನ ದೊಡ್ಡ ಮಗ, ಅಭಿಷೇಕ್ ಹೇಗೋ ದರ್ಶನ್ ಹಾಗೆ. ನಾನು ಕರೆಯದೇ ಇದ್ರೂ ನನ್ನ ಬಳಿ ಬರುತ್ತಾನೆ. ನಮ್ಮ ಮನೆ ಮಗ ಅವನು. ಆಗಾಗ್ಗ ನನ್ನ ಭೇಟಿ ಮಾಡೋಕೆ ಬರ್ತಾ ಇರ್ತಾನೆ.ಆರ್ಡರ್ ಮಾಡಿ ನಾನು ನಿಮ್ಮ ಮಾತನ್ನ ಕೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ದರ್ಶನ್ ನನ್ನನ್ನು ಮದರ್ ಇಂಡಿಯಾ ಅಂತ ಕರೆಯುತ್ತಾರೆ. ದರ್ಶನ್ ಕಂಡರೆ ಅಂಬಿಗೆ ತುಂಬಾ ಇಷ್ಟ, ನನಗೂ ದರ್ಶನ್ ಅಂದ್ರೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ ಸುಮಲತಾ . ಒಟ್ಟಾರೆ ಸುಮಲತಾ ಯಾವ ಪಕ್ಷ ಸೇರಿದ್ರೂ ದರ್ಶನ್ ಕೈ ಹಿಡಿಯುತ್ತಾರೇ ಎಂಬ ಸುದ್ದಿಯಂತೂ ಇದ್ದೇ ಇದೆ.

Edited By

Kavya shree

Reported By

Kavya shree

Comments