ಡಿಂಪಲ್ ಕ್ವೀನ್ ‘ಗೆ ಎದುರಾಯ್ತು ಅಗ್ನಿ ಪರೀಕ್ಷೆ….?!!!

12 Mar 2019 8:31 AM | Entertainment
284 Report

‘ರ’ ಅಕ್ಷರಕ್ಕೂ ಸ್ಯಾಂಡಲ್ವುಡ್’ನ ನಾಯಕಿಯರಿಗೂ ಅದೇನೋ ಅವಿನಾಭವ ಸಂಬಧ.ಹತ್ತು ವರ್ಷಗಳ ಹಿಂದೆ ಸ್ಯಾಂಡಲ್ವುಡ್ನ’ನ್ನು ಮೂರು ‘ರ’ ಗಳು ಆಳುತ್ತಿದ್ದರು. ರಕ್ಷಿತಾ, ರಾಧಿಕಾ, ರಮ್ಯಾ. ಈಗ ಮತ್ತೆ ರ ಅಕ್ಷರದ್ದವರದ್ದೇ ಕಾರುಬಾರು. …ರಚಿತಾರಾಂ ಮತ್ತು ರಶ್ಮಿಕಾ ಮಂದಣ್ಣ ಗಾಂಧಿನಗರದ ಹಿಟ್ ಹಿರೋಯಿನ್ ಗಳಾಗಿದ್ದಾರೆ.ಅಂದಹಾಗೇ ಕನ್ನಡದ ಕ್ವೀನ್ ರಚಿತಾರಾಂ ಸದ್ಯ ಸ್ಯಾಂಡಲ್’ವುಡ್’ನಲ್ಲಿ ಬಹು ಬೇಡಿಕೆ ನಟಿ. ಹೇಳಿ ಕೇಳಿ ಸ್ಟಾರ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರೋ ರಚಿತಾ, ಸದ್ಯ ಮತ್ತೊಂದು ಅಚೀವ್ಮೆಂಟ್ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಜೊತೆ ಬುಲ್ ಬುಲ್ ಚಿತ್ರದ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದರು. ಅಲ್ಲಿಂದ ರಚ್ಚು ಲೈಫ್ ಸ್ಟೈಲ್ ಬದಲಾಯ್ತು. ಅದೃಷ್ಟ ಕೈ ಹಿಡಿಯಿತು. ಸೀರಿಯಲ್ನಿಂದ ಸಿನಿಮಾ ತನಕ ಯಶಸ್ಸೇ ಗಳಿಸಿಕೊಂಡಿರುವ ರಚಿತಾ ಸದ್ಯ ಮತ್ತೊಂದು ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ದಾರೆ.

ಈಗಾಗಲೇ ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ನಿಗೆ ಟಾಲಿವುಡ್ ಕೈ ಹಿಡಿಯಿತು. ಸ್ಟಾರ್ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ ಈ ಚೆಲುವೆ. ಅದೇ ರೀತಿ ರಚ್ಚುಗೆ ಟಾಲಿವುಡ್ ಇಂಡಸ್ಟ್ರಿ ಕೈ ಹಿಡಿಯುತ್ತೋ ಗೊತ್ತಿಲ್ಲ. ಆದರೆ ತೆಲುಗಿನಲ್ಲೂ ಸಿನಿಮಾ ಮಾಡ್ತಾರೆ ಎಂದು ಕೆಲ ವರ್ಷಗಳಿಂದ ಗಾಂಧಿನಗರದಲ್ಲಿ ಸುದ್ದಿಯೊಂದು ಗಿರಿಗಿಟ್ಲೆ ಹೊಡಿತಿದೆ.ಆದ್ರೆ, ಅಧಿಕೃತವಾಗಿ ರಚಿತಾ ರಾಮ್ ತೆಲುಗಿಗೆ ಹೋಗಿಲ್ಲ. ಆದರೆಇದೀಗ, ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿಕೊಡ್ತಿದ್ದಾರೆ.ಹೌದು, ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗ್ತಿದೆ. ' ಐ ಲವ್ ಯೂ' ಚಿತ್ರದ ತೆಲುಗು ಟ್ರೈಲರ್ ಬಿಡುಗಡೆಯಾಗಿದೆ. ಈ ಮೂಲಕ ಅಧಿಕೃತವಾಗಿ ರಚ್ಚು ಟಾಲಿವುಡ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.ಅಂದಹಾಗೇ ರಚಿತಾರಾಂ ಸದ್ಯ ಸ್ಯಾಂಡಲ್’ವುಡ್ನ  ಎಲ್ಲಾ ಸ್ಟಾರ್ ನಾಯಕರ ಜೊತೆ ಆ್ಯಕ್ಟ್ ಮಾಡಿದ್ದಾರೆ. ಇನ್ನು ತೆಲುಗಿನಲ್ಲಿ ಐ ಲವ್ ಯೂ ಸಿನಿಮಾ ರಿಲೀಸ್ ಆಗ್ತಾ ಇದೆ. ಈ ಮೂಲಕ ಟಾಲಿವುಡ್’ನಲ್ಲಿ ಲಕ್ ಪರೀಕ್ಷೆಗೆ ನಿಂತಿದ್ದಾರೆ ಬುಲ್’ಬುಲ್ ಬೆಡಗಿ.ಒಂದೊಮ್ಮೆ ಕನ್ನಡ ಸಿನಿಮಾ ತೆಲುಗಿನಲ್ಲಿ ಹಿಟ್ ಆದರೆ, ಡಿಂಪಲ್ ಕ್ವೀನ್ ರಚ್ಚು ಮುಂದಿನ ತೆಲಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡೋಕೆ ಇದು ಅಗ್ನಿ ಪರೀಕ್ಷೆಯಾಗಲಿದೆ.

Edited By

Kavya shree

Reported By

Kavya shree

Comments