ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್’ಗಳ ಮಾನ ಹರಾಜು : ಟ್ರೋಲಿಗರ ಕೈಗೆ ಸಿಕ್ಕ ಸ್ಯಾಂಡಲ್’ವುಡ್ ನಟರು !!!

11 Mar 2019 3:52 PM | Entertainment
1059 Report

ಅಂದಹಾಗೇ ಸ್ಯಾಂಡಲ್’ವುಡ್ನಲ್ಲಿ  ಸದ್ಯ ಸ್ಟಾರ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್  ತಣ್ಣಗಾಗಿದೆ. ಈ ನಡುವೆ ಪಾಲಿಟಿಕ್ಸ್ ಫೈಯರಿಂಗ್ ಹೆಚ್ಚಾಗುತ್ತಿದೆ. ಇದರ ಮಧ್ಯೆ ಸೋಶಿಯಲ್ ಮಿಡಿಯಾದಲ್ಲಿ ಸ್ಟಾರ್'ಗಳನ್ನು ಪ್ರಚಾರ ಮಾಡೋ ಭರದಲ್ಲಿ ಅಭಿಮಾನಿಗಳು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಸ್ಟಾರ್ ಗಳ ಕೀಳು ಮಟ್ಟದಲ್ಲಿ ಪ್ರಚಾರ ಕಾರ್ಯ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಬಾಸ್ ವಾರ್ ಆದಾಗಲೇ ಸ್ಟಾರ್ ನಟರು ಈಗಾಗಲೇ ವಾರ್ನಿಂಗ್ ಮಾಡಿದ್ರು . ಸ್ಆವಲ್ದಪ ತಣ್ಣಗಾಗಿದ್ದ ಅಭಿಮಾನಿಗಳು ಬೇರೆ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಒಂದೇ ಸುದ್ದಿ. ಅದು ಯಾವ ಯಾವ  ಸ್ಟಾರ್ ಯಾರ ಪರ ಪ್ರಚಾರಕ್ಕಿಳಿಯುತ್ತಾರೆ ಅಂತಾ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಯಶ್  ಹೆಸರು ಮಂಡ್ಯ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. 

ನಟಿ ಸುಮಲಲತಾ ರಾಜಕೀಯ ಪ್ರವೇಶಕ್ಕೆ ಬೆಂಬಲ ನೀಡಲು ಈಗಾಗಲೇ ಒಂದಷ್ಟು ಸ್ಟಾರ್ ಹೀರೋಗಳು ಸಪೋರ್ಟ್ ಮಾಡ್ತಿದ್ದಾರೆಂಬ ಸುದ್ದಿ ಕೇಳುತ್ತಿದ್ದಂತೇ ನಟರ ಅಭಿಮಾನಿಗಳಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಬಾಸ್ ಅಂತಾ ಶುರು ಮಾಡಿದ ಅಭಿಮಾನಿಗಳು ತಮ್ಮ ಸ್ಟಾರ್ ನಟರ ಕೀಳು ಮಟ್ಟದ ಪ್ರಚಾರದಲ್ಲಿ ತೊಡಗಿಸಿಕೊಂಡರು. ಖುದ್ದು ನಟರೇ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ರು ಕೇಳದ ಫ್ಯಾನ್ಸ್ ಸದ್ಯ ಬಾಸ್ ವಾರ್’ನಿಂದ ತುಸು ತಣ್ಣಗಾಗಿದ್ದಾರೆ. ಆದರೆ ಇದೀಗ ಮತ್ತೆ ತಮ್ಮ ನಟರಾದ ದರ್ಶನ್, ಸುದೀಪ್ ಹಾಗೂ ಯಶ್ ಅಭಿಮಾನಿಗಳ ನಡುವೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧವೇ ನಡೆಯುತ್ತಿದ್ದು, ಇದು ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ.

ತಮ್ಮ ನೆಚ್ಚಿನ ನಟನಿಗೆ ಅಭಿಮಾನ ತೋರುವ ಭರದಲ್ಲಿ ಅಭಿಮಾನಿಗಳು ಬೇರೆ ನಟರನ್ನು ಅಣಕಿಸುವ ಮೂಲಕ ತಮ್ಮ ಸ್ಟಾರ್ ಗಳ ಮಾನ ಹರಾಜು ಹಾಕುತ್ತಿದ್ದಾರೆ.ಇತ್ತೀಚೆಗೆ ಫಿಟ್ನೆಸ್ ಚಾಲೆಂಜ್ ಪ್ರಕರಣದಲ್ಲಿ ಯಶ್ ಹಾಗೂ ಸುದೀಪ್ ಅಭಿಮಾನಿಗಳ ದುರ್ವರ್ತನೆ ಎಲ್ಲೆ ಮೀರಿತ್ತು. ಈ ಬಗ್ಗೆ ಯಶ್ ಕೂಡ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟರು. ಅಂದಹಾಗೇ ರಾಜಕೀಯ ನಾಯಕರ ಕೈ ಹಿಡಿಯುತ್ತಿರುವ ಸ್ಟಾರ್ ನಟರನ್ನು ಬೇರೆ ನಟರ ಅಭಿಮಾನಿಗಳು ಅಣಕಿಸಲು ಶುರು ಮಾಡಿದ್ದಾರೆ.ಅಶ್ಲೀಲ ಫೋಟೋಗಳಾಕುವುದು, ಕಾರ್ಟೂನ್ಗಳನ್ನು ಬಿಡಿಸುವುದು, ಅಶ್ಲೀಲ ಸ್ಟೇಟ್’ಮೆಂಟ್ ಹಾಕುವುದು ಶುರುಮಾಡಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ಸ್ಟಾರ್'ಗೆ ಬಿಲ್ಡಪ್ ಕೊಡುವಲ್ಲಿ ಬೇರೆ ಕಲಾವಿದರನ್ನು ಬಕೆಟ್ ಹಿಡಿಯುವವರು, ಚಮಚಾಗಳು, ಬೂಟು ನೆಕ್ಕುವವರು ಎಂಬೆಲ್ಲಾ ಪದ ಬಳಕೆ ಮಾಡುವುದು ಸರಿ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಕಲೆಯಲ್ಲಿ ಪೈಪೋಟಿ ಬೇಕೆ ವಿನಹ, ಕೀಳು ಮಟ್ಟದ ಪ್ರಚಾರ ನಿಜಕ್ಕೂ ಶೋಭೆ ಅಲ್ಲ.

Edited By

Kavya shree

Reported By

Kavya shree

Comments