ಡಿಂಪಲ್’ಕ್ವೀನ್ ಗೆ ಪ್ರಪೋಸ್ ಮಾಡೋಕೆ ರೆಡಿಯಾದ ‘ರಿಯಲ್ ಸ್ಟಾರ್’..!!

11 Mar 2019 11:48 AM | Entertainment
282 Report

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಕಥೆಯುಳ್ಳ ಸಿನಿಮಾಗಳು ಬರುತ್ತಿವೆ.. ಅದರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದರೆ ಕೇಳಬೇಕಾ… ಎಲ್ಲವು ಕೂಡ ಢಿಪರೆಂಟಾಗಿ ಇರುತ್ತವೆ…ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಉಪೇಂದ್ರ ಸಿನಿಮಾಗಳು ಹೇಗಿರುತ್ತವೆ ಎಂಬುದನ್ನು ಅಭಿಮಾನಿಗಳು ನೋಡಿದ್ದಾರೆ.. ಬುದ್ದಿವಂತನ ತಲೆಯೇ ತಲೆ ಎಂದು ಹಾಡಿ ಹೊಗಳಿದ್ದಾರೆ.. ಉಪೇಂದ್ರ ಅಭಿನಯದ ಎ,ಉಪೇಂದ್ರ ಪ್ರೀತ್ಸೆ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಂಡ ಸಿನಿಮಾಗಳು.. ಈ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದವು…

ಇದೀಗ ಆರ್​. ಚಂದ್ರು ಕಟ್ಟಿಕೊಡ್ತಿರೋ ಹೊಸ ಸಿನಿಮಾ ಐ ಲವ್ ಯು.  ಈ ಸಿನಿಮಾದಲ್ಲಿ ಉಪ್ಪಿ ಜೊತೆ ಬುಲ್ ಬುಲ್ ಬೆಡಗಿ ಸ್ಕ್ರೀನ್ ಷೇರ್ ಮಾಡಿದ್ದಾರೆ… ಐ ಲವ್​ ಯು, ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರೋ ಬಹು ನಿರೀಕ್ಷಿತ ಸಿನಿಮಾವಾಗಿದೆ.. ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಲಿರಿಕಲ್​ ವೀಡಿಯೋ ಸಾಂಗ್ಸ್ ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿದೆ. ಎಲ್ಲಾ ಅಂದು ಕೊಂಡಂತೆ ಆಗಿದ್ರೆ, ವ್ಯಾಲಂಟೈನ್ಸ್ ಡೇ ಸ್ಪೆಷಲ್ಲಾಗಿ ಸಿನಿಮಾ ತೆರೆಗೆ ಬರಬೇಕಿತ್ತು. ಬಟ್ ಲೇಟ್ ಆದ್ರೂ, ಲೇಟೆಸ್ಟಾಗಿ ಉಪ್ಪಿ ರಚಿತಾಗೆ ಐ ಲವ್ ಯೂ ಹೇಳೋಕೆ ಬರ್ತಿದ್ದಾರೆ..

ಬ್ರಹ್ಮ ಸಿನಿಮಾ ನಂತರ ಉಪೇಂದ್ರ, ಆರ್​. ಚಂದ್ರು ಕಾಂಬಿನೇಷನ್​ನಲ್ಲಿ ಬರ್ತಿರೋ ಸಿನಿಮಾ ಐ ಲವ್ ಯು. ಆರ್​. ಚಂದ್ರು ಸ್ವತ: ಈ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ಸಿನಿಮಾ ಬರ್ತಿರೋದ್ರಿಂದ ಪೋಸ್ಟ್​ ಪ್ರೊಡಕ್ಷನ್​ ತಡವಾಗ್ತಿದ್ದು, ಲೇಟ್ ಆದ್ರೂ, ಸಿನಿಮಾ ಪ್ರೇಕ್ಷಕರನ್ನ ರಂಜಿಸೋದು ಗ್ಯಾರೆಂಟಿ ಅಂತಿದೆ ಐ ಲವ್ ಯೂ ಚಿತ್ರತಂಡ… ಏಪ್ರಿಲ್ 12ಕ್ಕೆ ವಿಶ್ವದಾದ್ಯಂತ ತರೆಗೆ ಬರೋದು ಪಕ್ಕಾ ಎಂದು ಹೇಳುತ್ತಿದೆ ಚಿತ್ರತಂಡ. ಸಿನಿಮಾ ಬಿಡುಗಡೆಯಾಗುವರೆಗೂ ರಚಿತ ಹಾಗೂ ಉಪ್ಪಿ ಅಭಿನಯ ಹೇಗಿದೆ ಎಂಬುದನ್ನು ಕಾದು ನೋಡಲೇ ಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು

Edited By

Manjula M

Reported By

Manjula M

Comments