ವಿಜಯ್ ದೇವರಕೊಂಡ ಆಯ್ತು ಇದೀಗ ಟಾಲಿವುಡ್ ‘ಪ್ರಿನ್ಸ್’ ಜೊತೆ ಸಾನ್ವಿ ರೊಮ್ಯಾನ್ಸ್..!!!

11 Mar 2019 10:27 AM | Entertainment
432 Report

ಮೊನ್ನೆಮೊನ್ನೆಯಷ್ಟೆ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.. ಸ್ಯಾಂಡಲ್ ವುಡ್ ನಟಿಯರು ಕೂಡ ಸ್ಪೆಷಲ್ ಆಗಿಯೇ ಆಚರಣೆ ಮಾಡಿದರು.. ಮಹಿಳಾ ದಿನಾಚರಣೆಯ ಅಂಗವಾಗಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಬಗ್ಗೆ ಒಂದು ಸೆನ್ಸೇಷನಲ್ ನ್ಯೂಸ್ ಒಂದು ಹೊರ ಬಿದ್ದಿದೆ… ಈಗಾಗಲೇ ಕರ್ನಾಟಕದ ಕ್ರಶ್ ರಶ್ಮಿಕಾ ಸೌತ್ ದುನಿಯಾದ ಹಾಟ್ ಅಂಡ್ ರೊಮ್ಯಾಂಟಿಕ್ ಹಿರೋಯಿನ್ ಆಗಿ ಬಿಟ್ಟಿದ್ದಾರೆ…

ಸ್ಯಾಂಡಲ್​ವುಡ್​ನಿಂದ ಶುರುವಾದ ಸಾನ್ವಿ ಹವಾ… ಈಗ ಟಾಲಿವುಡ್​​, ಕಾಲಿವುಡ್​ ಮೀರಿ ಬಾಲಿವುಡ್​ವರೆಗೂ ಸಾಗಿದೆ..  ತನ್ನ ಸೌಂದರ್ಯ ಮತ್ತು ಅಭಿನಯ ಎರಡರಲ್ಲೂ ಅಭಿಮಾನಿಗಳಲ್ಲಿ ಸೈ ಅನ್ನಿಸಿಕೊಂಡಿರೋ ಕೊಡಗಿನ ಕುವರಿ ಸೌತ್ ಸೂಪರ್ ಸ್ಟಾರ್​ಗಳ ಸಿನಿಮಾಗಳಲ್ಲಿ ನಟಿಸುತ್ತಾ, ಟಾಪ್ ಹೀರೋಯಿನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ..  

ಗೀತಾಗೋವಿಂದಂ ಸಿನಿಮಾ ಬಿಡುಗಡೆಯಾದ ಸಮಯದಲ್ಲಿಯೇ  ರಶ್ಮಿಕಾ ಕ್ರೇಜ್​ ನೋಡಿದ ಟಾಲಿವುಡ್ ಮಂದಿ, ಮುಂದೆ ಒಂದು ದಿನ ಈಕೆ  ಮಹೇಶ್ ಬಾಬು, ಜ್ಯೂನಿಯರ್ ಎನ್​ಟಿಆರ್​, ರಾಮ್​ಚರಣ್​​ ತೇಜಾರಂತಹ ಯಂಗ್ ಸೂಪರ್ ಸ್ಟಾರ್ಸ್​ ಜೊತೆ ನಟಿಸಿದ್ದರೂ ಕೂಡ ಯಾವುದೇ ರೀತಿಯ ಅಚ್ಚರಿಪಡ್ಬೇಕಿಲ್ಲ ಎಂದ ಮಾತು ಇದೀಗ ನಿಜವಾಗಿದೆ.. ಸದ್ಯ ಟಿಟೌನ್​ನಲ್ಲಿ ಒಂದು ನ್ಯೂಸ್ ಹರಿದಾಡುತ್ತಿದೆ.

ಮಹೇಶ್ ಬಾಬು  ಅವರ ಮುಂದಿನ ಚಿತ್ರಕ್ಕೆ ಕಿರಿಕ್ ಹುಡುಗಿ ನಾಯಕಿಯಾಗೋದು ಬಹುತೇಕ ಕನ್ಫರ್ಮ್ ಆಗಿದೆ ಎನ್ನಲಾಗಿದೆ. ಚಿತ್ರತಂಡದ ಜೊತೆ ಈ ಬಗ್ಗೆ ಮಾತುಕತೆ ಸಹ ಜೋರಾಗಿ ನಡಿಯುತ್ತಿದೆ ಎನ್ನಲಾಗಿದೆ. ಮಹೇಶ್ ಬಾಬು ಸದ್ಯ ಮಹರ್ಷಿ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.. ಮಹರ್ಷಿ ನಂತ್ರ ಮಹೇಶ್​ ಬಾಬು ದಿಲ್ ರಾಜು ನಿರ್ಮಾಣದಲ್ಲಿ ಅನಿಲ್ ರವಿಪುಡಿ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗುವ ಸಾಧ್ಯತೆಯಿದೆ.. ಆ ಪಾತ್ರಕ್ಕೆ ಸಾಯಿ ಪಲ್ಲವಿ ಮತ್ತು ರಶ್ಮಿಕಾ ಮಂದಣ್ಣ ಹೆಸರು ಫೈನಲ್ ಆಗಿವೆ ಎನ್ನಲಾಗಿದೆ… ಸದ್ಯ ಕೊವರಿನ ಹುಡುಗಿ ಸಾನ್ವಿಗೆ ಇರುವ ಕ್ರೇಜ್ ನೋಡ್ತಿದ್ರೆ, ಸಾಯಿ ಪಲ್ಲವಿನ ಹಿಂದಿಕ್ಕಿ ಟಾಲಿವುಡ್ ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಸ್ಕ್ರೀನ್ ಷೇರ್ ಮಾಡೋದು ಪಕ್ಕಾ ಆದಂತೆ ಆಗಿದೆ..

Edited By

Manjula M

Reported By

Manjula M

Comments

Cancel
Done