ನಾನವನಿಗೆ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ಸೇಡು ತೀರಿಸಿಕೊಂಡ : ಸ್ನೇಹಿತನ ವಿರುದ್ಧ ನಟಿ ಆರೋಪ..!!!

11 Mar 2019 10:10 AM | Entertainment
380 Report

ಅಯೋಗ್ಯ ಸಿನಿಮಾ ಸಕ್ಸಸ್ ಬೆನ್ನಲ್ಲೇ ಇದೀಗ ಅದೇ ಚಿತ್ರದ ನಟಿಯೊಬ್ಬರ ಮೇಲೆ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿತ್ತು. ಅಂದಹಾಗೇ ತನ್ನ ಸ್ನೇಹಿತೆಯ ವಿರುದ್ಧವೇ   ಪ್ರಶಾಂತ್ ದೂರು ನೀಡಿದ್ದರು. ನನ್ನ ಪರ್ಸನಲ್ ಫೇಸ್ಬುಕ್ ಅಕೌಂಟ್ ಮೂಲಕ ಬೇರೆ ಹುಡುಗಿಯರಿಗೆ, ಹುಡುಗರಿಗೆ ಮೆಸೇಜ್ ಮಾಡಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಳೆಂದು ಅಯೋಗ್ಯ ಸಿನಿಮಾ ನಟಿ ದೃಶ್ಯ ವಿರುದ್ಧ  ಸೈಬರ್ ಕ್ರೈಂ ಗೆ ಪ್ರಶಾಂತ್ ದೂರು ನೀಡಿದ್ದರು.

ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯರ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ದೃಶ್ಯ ಕೂಡ ಪ್ರಶಾಂತ್ ಮೇಲೆ ಆರೋಪ ಮಾಡಿದ್ದಾಳೆ. ನಾನು ಸಿಗಲಿಲ್ಲ ಎಂದು ಪ್ರಶಾಂತ್ ಸುಳ್ಳು  ಆಪಾದನೆಗಳನ್ನು ಮಾಡಿದ್ದಾನೆಂದು ದೃಶ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೇ ಪ್ರಶಾಂತ್ ಎಂಬುವವರು ನನ್ನ ಮತ್ತು ದೃಶ್ಯ ನಡುವೆ ಲಿವಿಂಗ್ ಟುಗೆದರ್ ರಿಲೇಶನ್’ಶಿಪ್ ಇದೆ ಎಂದು ಹೇಳುತ್ತಿದ್ದಾನೆ. ಆದರೆ ನನ್ನ ಮತ್ತು ಅವನ ನಡುವೆ ಯಾವುದೇ ಸಂಬಂಧವಿಲ್ಲ ಎಂದರು.  ಪ್ರಶಾಂತ್ ಬಳಿ ನಾನು ಯಾವತ್ತು ಹಣ ಕೇಳಿಲ್ಲ. ಫಸ್ಟ್ ಅಫ್ ಆಲ್ ಅವರು ಫೇಸ್‍ಬುಕ್ ಬಳಕೆ ಮಾಡೋದು ಇಲ್ಲ.  ಅದೇಗೆ ನಾನು ಅವರ ಹೆಸರಿನಲ್ಲಿ ಬೇರೆಯವರಿಗೆ ಮೆಸೇಜ್ ಮಾಡೋಕೆ ಸಾಧ್ಯ. ಇದೆಲ್ಲಾ ಪ್ರಶಾಂತ್ ಅವರ ಕಟ್ಟು ಕಥೆ. ಬೇಕೆಂತಲೇ ಪ್ರಶಾಂತ್  ಈ ರೀತಿ ಮಾಡುತ್ತಿದ್ದಾರೆಂದು ದೃಶ್ಯ ಪ್ರತ್ಯಾರೋಪ ಮಾಡಿದ್ದಾಳೆ. ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದಾನೆ ಆ ಮನುಷ್ಯ, ನನ್ನ ಸ್ನೇಹಿತನಷ್ಟೇ ಅವನು. ಪ್ರಶಾಂತ್ ಸದ್ಯ ನನ್ನ ಜೊತೆ ಯಾವ ಸಂಬಂಧವನ್ನು ಇರಿಸಿಕೊಂಡಿಲ್ಲ. ಇದರ ಮಧ್ಯೆ ಡಾ. ರಾಜ್‍ಕುಮಾರ್ ಹೆಸರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಿಂದ 2018ರಲ್ಲಿಯೇ ಕುಶಾಲನಗರದಲ್ಲಿ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.ನಾನು ಅವನಿಗಿಂತಲೂ ಮುಂಚೆ ದೂರು ದಾಖಲಿಸಿದ್ದೇನೆ. ನಾನು ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ಈ ರೀತಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದೇನೆ.

Edited By

Kavya shree

Reported By

Kavya shree

Comments