ನಟನ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ ವಿಜಯಲಕ್ಷ್ಮಿ..!!

10 Mar 2019 8:55 AM | Entertainment
285 Report

ಇತ್ತಿಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ವಿಜಯಲಕ್ಷ್ಮಿ ಸ್ವಲ್ಪ ಚೇತರಿಸಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ವಿಜಯಲಕ್ಷ್ಮಿ ಧನ ಸಹಾಯದ ನೆರವನ್ನು ಮಾಡಿಕೊಂಡಿದ್ದರು… ಖ್ಯಾತ ನಟಿಗೆ ಈ ರೀತಿಯ ಪರಿಸ್ಥಿತಿ ಬಂದಿರುವುದನ್ನು ನೋಡಿ ಜನ ಮರುಗಿದಂತೂ ಸುಳ್ಳಲ್ಲ… ವಿಜಯಲಕ್ಷ್ಮಿ ಅವರ ಅನಾರೋಗ್ಯದ ವಿಚಾರ ತಿಳಿದ ಖ್ಯಾತ ನಟ ಸುದೀಪ್ ಸೇರಿದಂತೆ ಹಲವರು ಹಣಕಾಸಿನ ನೆರವು ನೀಡಿದ್ದರು.

ಇದೀಗ ವಿಜಯಲಕ್ಷ್ಮಿ ಅವರ ಸಹೋದರಿ ಉಷಾರಾಣಿಯವರು ಹೊಸ ಬಾಂಬ್ ಸಿಡಿಸಿದ್ದಾರೆ…  ನಟ ರವಿಪ್ರಕಾಶ್ ಎಂಬವರು ಹಣಕಾಸು ನೆರವು ನೀಡಿದ ನೆಪದಲ್ಲಿ ವಿಜಯಲಕ್ಷ್ಮಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪದೇ ಪದೇ ಫೋನ್ ಮಾಡುವುದು, ಮೆಸೇಜ್ ಮಾಡುವುದರ ಮೂಲಕ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ರವಿ ಪ್ರಕಾಶ್ ನಿರಾಕರಿಸಿದ್ದಾರೆ.. ರವಿ ಪ್ರಕಾಶ್ ಕೂಡ ನಟರಾಗಿದ್ದಾರೆ.. ನಾನು ಯಾವುದೇ ರೀತಿಯಾಗಿಯೂ ಕೂಡ ಅವರ ಬಳಿ ಆ ರೀತಿಯೆಲ್ಲಾ ನಡೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.. ಒಟ್ಟಾರೆಯಾಗಿ ಈ ಆರೋಪವನ್ನು ಅಲ್ಲಗೆಳೆದಿರುವ ರವಿಪ್ರಕಾಶ್ ಅವರು ಮುಂದೆ ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments