ಮಗನ ಆ್ಯಕ್ಟ್ ನೋಡಿ ಚಾಲೆಂಜಿಂಗ್ ಸ್ಟಾರ್ ದಂಪತಿ ಖುಷಿಪಟ್ಟಿದ್ಹೇಗೆ ಗೊತ್ತಾ..? ವಿಡಿಯೋ ವೈರಲ್..!!!

09 Mar 2019 12:44 PM | Entertainment
1027 Report

ಅಂದಹಾಗೇ ಚಾಲೆಂಜಿಂಗ್ ಸ್ಟಾರ್, ಪುತ್ರ ವಿನೀಶ್ ಬಗ್ಗೆ ಹೇಳಿದ ಹೇಳಿಕೆಯೊಂದು ಮೊನ್ನೆಯಷ್ಟೇ ವೈರಲ್ ಆಗಿತ್ತು. ದರ್ಶನ್ ಅವರನ್ನು ಮಾಧ್ಯಮದವರು ಪತ್ರನ ಸಿನಿಮಾ ಎಂಟ್ರಿ ಬಗ್ಗೆ ತಿಳಿಸಿ ಎಂದಿದ್ದಕ್ಕೆ, ಅಧಿಕೃತವಾಗಿ ಬರ್ತಿದ್ದಾನೆ. ನಾವು ಹೋದಮೇಲೆ ನಮ್ಮದೊಂದು ಬ್ರ್ಯಾಂಡ್ ಬೇಕಲ್ವಾ ಸರ್ ಸೋ, ಅದಕ್ಕೆ ಎಂದಿದ್ದೂ ಭಾರೀ ಸುದ್ದಿಯಾಯ್ತು. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಜಮಾನ ಸಿನಿಮಾ ರಿಲೀಸ್ ಆಗಿ, ಸಕ್ಸಸ್ ಕಾಣುತ್ತಿದೆ. ಆ ಸಿನಿಮಾದಲ್ಲಿ ಮಗ ವಿನೀಶ್ ಕೂಡ ಅಪ್ಪನ ಜೊತೆ ಪರದೆ ಹಂಚಿಕೊಂಡಿದ್ದಾರೆ. ಮಗನ ಆ್ಯಕ್ಟ್ ನೋಡಲು ದಚ್ಚು ದಂಪತಿ ಕಾತುರರಾಗಿದ್ರಂತೆ. ಕೊನೆಗೂ ಸಿನಿಮಾ ರಿಲೀಸ್ ಗೂ ಮುನ್ನವೇ ಮಗನ  ಆ್ಯಕ್ಟಿಂಗ್ ಔಟ್'ಪುಟ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ದರ್ಶನ್ ದಂಪತಿ. ಆ ವಿಡಿಯೋ ಸದ್ಯ ವೈರಲ್ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಚಿತ್ರೀಕರಣದ ಸೆಟ್ ನಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಆದರೆ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸೆಟ್ ನಲ್ಲಿ ಆಗಾಗ್ಗ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.  ಅಂದಹಾಗೇ ಇದ್ದಕ್ಕಿದ್ದ ಹಾಗೇ ಶೂಟಿಂಗ್ ಸೆಟ್ ನಲ್ಲಿ ವಿಜಯಲಕ್ಷ್ಮಿ ನೋಡಿ ದಚ್ಚು ಅಭಿಮಾನಿಗಳು ದಂಗಾಗಿದ್ರಂತೆ. ಅವರು ಬಂದಿದ್ದು ಮಗ ವಿನೀಶ್ ಅಭಿನಯ ನೋಡಲು. ಅವರನ್ನು ನೋಡಿ ಡಿ ಬಾಸ್ ಅಭಿಮಾನಿಗಳು ಸಹ ಫುಲ್ ಖುಷಿಯಾಗಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹಾಗಾಗಿ ದರ್ಶನ್ ದಂಪತಿ ಒಟ್ಟಿಗೆ ದರ್ಶನ ನೀಡಿದ್ರೆ ಸಾಕು ಅಭಿಮಾನಿಗಳಿಗೆ ಅದೊಂದು ಸಂಭ್ರಮವಿದ್ದಂತೆ. ಅಂದಹಾಗೇ ವಿನೀಶ್ ಅವರ ಚಿತ್ರರಂಗದ ಮೊದಲ ಹೆಜ್ಜೆ ನೋಡಿ ದರ್ಶನ್ ದಂಪತಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ಮಗ ವಿನೀಶ್ ಕ್ಯಾಮೆರಾ ಮುಂದೆ ನಿಂತು ಅಭಿನಯಿಸುತ್ತಿದ್ದರೆ, ಇತ್ತ ವಿಜಯಲಕ್ಷ್ಮಿ ಪತಿಯ ಪಕ್ಕದಲ್ಲಿ ಕುಳಿತು ಮಗನ ನಟನೆಯನ್ನು ವೀಕ್ಷಿಸುತ್ತಿದ್ದರು. ದರ್ಶನ್ ಖುದ್ದು ಮಗನಿಗೆ ಆ್ಯಕ್ಟಿಂಗ್ ಹೇಳಿಕೊಡುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿ ಇದೆ. ಮಗನ ನಟನೆ ನೋಡಿ ಜೋರಾಗಿ ನಗಾಡಿಕೊಂಡು ಖುಷಿ ಪಡುತ್ತಿರುವ ದಚ್ಚು ದಂಪತಿ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಂತೂ ನಿಜ. ಸದ್ಯ ಜಾಲಿಯಾಗಿ ಕುಳಿತು ದರ್ಶನ್ ದಂಪತಿ ಮಗನ ವಿಡಿಯೋ ನೋಡಿದ ಕ್ಷಣದ ದೃಶ್ಯ ವೈರಲ್ ಆಗಿದೆ. ಮಗನ ಆ್ಯಕ್ಟ್ ನೋಡಿ ಮಸ್ತ್ ಮಜಾ ಮಾಡಿರುವ ದಚ್ಚು ದಂಪತಿಗೆ ಯಾವ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಡಿ ಬಾಸ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅಂದಹಾಗೇ ಯುಜಮಾನ ಸಿನಿಮಾದಲ್ಲಿ  ಕಾಣಿಸಿಕೊಂಡಿರುವ ವಿನೀಶ್ ಕಟೌಟ್’ನ್ನು  ಕೆಲ ಚಿತ್ರಮಂದಿರಗಳಲ್ಲಿ ನಿಲ್ಲಿಸುವುದರ ಮುಖೇನ ಅವರನ್ನು ಇಂಡಸ್ಟ್ರಿಗೆ ಸ್ವಾಗತ ಮಾಡಿದ್ದಾರೆ.

Edited By

Kavya shree

Reported By

Kavya shree

Comments