ದರ್ಶನ್ ಒಬ್ಬನೇ ಸಾಕು, ನಮ್ಮ ಅವಶ್ಯಕತೆ ಅವರಿಗಿಲ್ಲ : ಬುಲಾವ್ ಬಂದ್ರೂ ಸುದೀಪ್ ಸಪೋರ್ಟ್ ಯಾರಿಗೆ..?!!!

09 Mar 2019 12:14 PM | Entertainment
5106 Report

ಅದ್ಯಾಕೋ ಮಂಡ್ಯಕ್ಕೂ, ರಾಜಕೀಯಕ್ಕೂ ಅವಿನಾಭವ ಸಂಬಂಧ.ಈ  ಬಾರಿ ಪಾಲಿಟಿಕ್ಸ್ ನಾಯಕರ ಜೊತೆಗೇ ಸ್ಯಾಂಡಲ್’ವುಡ್ ಸ್ಟಾರ್ ಗಳು ಅಷ್ಟೇ ಜೋರಾಗಿ ಸದ್ದು ಮಾಡುತ್ತಿದ್ದಾರೆ. ಹೋದ ಕಡೆಯೆಲ್ಲಾ ನೀವು ಯಾರ ಪರ ಕ್ಯಾಂಪೇನ್ ಮಾಡ್ತೀರಿ, ಯಾವ ಪಕ್ಷ ಸೇರ್ತೀರಿ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡೋಕಾಗದೇ ಸ್ಟಾರ್ ನಟರು ತಡವರಿಸಿದ್ದೂ ಇದೆ. ಆದರೆ ಈ ಬಾರಿ ಸ್ಯಾಂಡಲ್’ವುಡ್ ಬಾಕ್ಸ್ ಆಫೀಸ್ ಸುಲ್ತಾನರ ನಡುವೆ ಮತ್ತೆ ಫೈಟಿಂಗ್ ಶುರುವಾಗಬಹುದಾ ಎಂಬ ಲೆಕ್ಕಚಾರದಲ್ಲಿದ್ದಾರೆ ಅಭಿಮಾನಿಗಳು.

ಮಂಡ್ಯ ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದ್ ಕಡೆ ಸುಮಲತಾ ಅಂಬರೀಶ್ ಅವರು ಪಕ್ಷ, ಟಿಕೆಟ್ ಇಲ್ಲದೇ ಪ್ರಚಾರ ಭರಾಟೆ ಆರಂಭಿಸಿದ್ದರೇ, ಇತ್ತ ಮುಖ್ಯಮಂತ್ರಿ ಕುಮಾರ’ಸ್ವಾಮಿ  ಮನೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಈ ನಡುವೆ ಸ್ಯಾಂಡಲ್ವುಡ್ ರೇಸ್ ಕುದುರೆಗಳಾದ ಸುದೀಪ್ ಮತ್ತು ದರ್ಶನ್ ನಡುವೆ ಮತ್ತೇನೋ ನಡೆಯಬಹುದು ಎಂಬ ಅನುಮಾನ ಕೂಡ ಶುರುವಾಗಿದೆ. ಸುದೀಪ್ ಇತ್ತೀಚಿಗಷ್ಟೇ ಮಾಧ್ಯಮಗಳಿಗೆ ಹೇಳಿದ ಹೇಳಿಕೆಗೆ ಮತ್ತಷ್ಟು ಬಣ್ಣ ತುಂಬಲಾಗುತ್ತಿದೆ. ಕಿಚ್ಚನ ಮಾತಿನ ಹಿಂದೆ ಯಾವ ಉದ್ದೇಶವಿದೆ,  ಆ ಪ್ರಶ್ನೆಗೆ ನಿರೀಕ್ಷಿಸಿದಷ್ಟು ಕಿಚ್ಚನ ಉತ್ತರವಾಗಿರಲಿಲ್ಲ. ಅಂದಹಾಗೇ  ಸುಮಲತಾ ಅಂಬರೀಶ್ ಅವರ ರಾಜಕೀಯ ಎಂಟ್ರಿ, ಕ್ಯಾಂಪೇನ್ ಬಗ್ಗೆ ಕೇಳಿದ ಮಾಧ್ಯಮದವರ ಪ್ರಶ್ನೆಗೆ, ಸುದೀಪ್, ನನಗೆ ಪ್ರಚಾರಕ್ಕೆ ಬರಲು ಸುಮಲತಾ ಅವರಿಂದ ಯಾವ ಬುಲಾವ್ ಬಂದಿಲ್ಲ. ಈಗಾಗಲೇ ದರ್ಶನ್ ಅವರ ಜೊತೆ ಇರುವಾಗ ನಮ್ಮ ಅವಶ್ಯಕತೆ ಇಲ್ಲ. ಬುಲಾವ್ ಬಂದ್ರೆ ಮೊದಲು ನಾನು ನಿಮಗೆ ಹೇಳುತ್ತೇನೆ ಎಂದು ಉತ್ತರ ಕೊಟ್ಟರು. ಆದರೆ ಕಿಚ್ಚನ ಮಾತಿನ ಮರ್ಮವೇನು..? ಈಗಾಗಲೇ ಕುಮಾರಸ್ವಾಮಿ ಫ್ಯಾಮಿಲಿಗೆ ಹತ್ತಿರವಾಗಿರಿರುವ ಸುದೀಪ್, ಅವರು ಸುಮಲತಾ ಕರೆದರೆ  ಪ್ರಚಾರಕ್ಕೆ ಹೋಗಬಹುದಾ..? ಅಥವಾ ದರ್ಶನ್ ಬಗ್ಗೆ ಹೇಳಿರುವ ಅವರು ಬುಲಾವ್ ಬಂದ್ರೂ ಖಂಡಿತಾ ಹಿಂದೆ ಸರಿಬಹುದಾ..? ಎಂಬ ಅನುಮಾನದ ಅಲೆ ಎದ್ದಿದೆ. ಅದಕ್ಕೇ ಕಾರಣ ಕೂಡ ಇದೆ..?

ಅಷ್ಟೇ ಅಲ್ಲದೇ ಸುಮಲತಾ ಅವರು ಈ ಹಿಂದೆ ಎಲ್ಲಿಯೂ ಸುದೀಪ್ ಕ್ಯಾಂಪೇನ್ ಗೆ ಬರ್ತಾರೆ ಎಂದು ಹೇಳಿಲ್ಲ. ಆದರೆ ಒಮ್ಮೆ ಮಾತ್ರ ಚಿತ್ರರಂಗ ನನ್ನೊಂದಿಗಿದೆ. ದರ್ಶನ್ ಯಶ್ ಸೇರಿದಂತೇ ಸುದೀಪ್ ಕೂಡ ಬರ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಯಶ್ ಮತ್ತು ದರ್ಶನ್ ಹೆಸರನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವ ಸುಮಲತಾ ಸುದೀಪ್ ಹೆಸರನ್ನು ಯಾಕೆ ಹೇಳುತ್ತಿಲ್ಲ  ಎಂಬುದೇ ದೊಡ್ಡ ಅನುಮಾನ..?ಆದರೆ ಒಂದು ವೇಳೆ ಸುಮಲತಾ ಅವರು ಕರೆದ್ರೂ ಸುದೀಪ್ ಕ್ಯಾಂಪೇನ್ ಗೆ ಹೋಗೋದು ಡೌಟು. ಏನಾದ್ರೂ ಸುದೀಪ್ , ದರ್ಶನ್ ಒಟ್ಟಿಗೆ  ಸುಮಲತಾ ಪರ ಕ್ಯಾಂಪೇನ್ ಮಾಡಿದ್ರೆ ಸ್ಯಾಂಡಲ್’ವುಡ್ನಲ್ಲಿ ಬಾಸ್ ವಾರ್ ತಣ್ಣಗಾಗಬಹುದು, ಆದರೆ ಸುಮಲತಾ ಕರೆದರೇ ಕಿಚ್ಚ ಹೋಗಿಲ್ಲವೆಂದರೇ ಮತ್ತೆ ಬಾಸ್ ವಾರ್ ಅಭಿಮಾನಿಗಳಲ್ಲಿ ಭುಗಿಲೇಳಬಹುದು ಎಂಬುದು ಸಮೀಕ್ಷೆ ಮಾಹಿತಿ.  ಜೊತೆಗೆ ಕಿಚ್ಚನ ಮತ್ತೊಂದು ಮಾತು  ಏನಪ್ಪಾ ಅಂದ್ರೆ. ನಾನು ಈಗ ರಾಜಕೀಯದಿಂದ ತುಂಬಾ ದೂರ ಇದ್ದೇನೆ. ಅಲ್ಲದೆ ಸಾಕಷ್ಟು ನಿರ್ಮಾಪಕರು ನನ್ನ ನಂಬಿ ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ. ಸುಮಲತಾ ಅವರಲ್ಲೇ ಅಂಬರೀಶ್ ಎಂಬ ಹೆಸರು ಇದೆ. ಅಂಬರೀಶ್ ಒಂದು ದೊಡ್ಡ ಹೆಸರು. ಸುಮಲತಾ ಅವರಿಗೆ ಆ ಹೆಸರೇ ಸಾಕು. ಅಲ್ಲದೆ ದರ್ಶನ್ ಅವರು ಕೂಡ ಸುಮಲತಾ ಅವರ ಜೊತೆ ಇದ್ದಾರೆ. ರಾಜಕೀಯದಲ್ಲಿ ನನ್ನ ಒಲವು ಕಡಿಮೆ ಇದೆ ಎಂದು ಸುದೀಪ್ ತಿಳಿಸಿದ್ದಾರೆ.

Edited By

Kavya shree

Reported By

Kavya shree

Comments