ಕೊನೆಗೂ ಬಯಲಾಯ್ತು ಸ್ಟಾರ್ ನಟನ ಹತ್ಯೆಯ ಸಂಚು..!!! ಆ ಸ್ಟಾರ್ ನಟ ಯಾರು ಗೊತ್ತಾ..?

09 Mar 2019 11:55 AM | Entertainment
1440 Report

ಖ್ಯಾತ ನಟನ ಹತ್ಯೆಯ ಸಂಚಿನ ಬಗ್ಗೆ  ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು.. ಇದೀಗ ಹತ್ಯೆಯ ಸುಪಾರಿ ಪಡೆದಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಕನ್ನಡದ ಖ್ಯಾತ ನಟರೊಬ್ಬರ ಹತ್ಯೆಗೆ ಸುಪಾರಿ ಪಡೆದಿದ್ದ ಆರೋಪದ ಮೇರೆಗೆ  ಕುಖ್ಯಾತ  ರೌಡಿಯಾದ  ಭರತ್ ಅಲಿಯಾಸ್ ಸ್ಲಮ್ ಭರತ್ ಹಾಗೂ ಆತನ ಆರು ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.. ಕೆಲವು ದಿನಗಳ ಹಿಂದೆ  ಸ್ಲಂ ಭರತ್ ನನ್ನು ಕುರಿತು ತನಿಖೆ ನಡೆಸಿದಾಗ ಖ್ಯಾತ ನಟರೊಬ್ಬರ ಸುಪಾರಿ ಸಂಚು ಬೆಳಕಿಗೆ ಬಂದಿತ್ತು.. ಈ ವಿಚಾರಣೆಯ ಹಿನ್ನಲೆಯಲ್ಲಿ ಆ ಸ್ಟಾರ್ ನಟನ ಹೆಸರನ್ನು ಬಹಿರಂಗ ಪಡಿಸಲಾಗಿದೆ..

ತುಂಬಾ ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಕೆಂಗೇರಿ ಭರತ್‌ ಸಕ್ರಿಯವಾಗಿ ಭಾಗಿಯಾಗಿದ್ದನು… ಆತನ ಕೃತ್ಯಗಳ ಬಗ್ಗೆ ನಗರದ ಹಲವು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಪಡಿಸಿಕೊಳ್ಳಲಾಗಿತ್ತು.. ಸ್ಟಾರ್ ನಟ ಸ್ಕೆಚ್ ಬಗ್ಗೆ ವಿಚಾರಣೆ ನಡೆಸಿದಾಗ ನಟನ ಕೊಲೆ ಸುಪಾರಿ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಆ ಸ್ಟಾರ್ ನಟ ಬೇರೆ ಯಾರು ಅಲ್ಲ…ಅವರೇ ರಾಕಿಂಗ್ ಸ್ಟಾರ್ ಯಶ್..

ಕೆಜಿಎಫ್ ಯಶಸ್ಸಿನ ಹಾಗೂ ಮಗಳ ಆಗಮನದಿಂದ ಖುಷಿಯಾಗಿರುವ ರಾಕಿಬಾಯ್ ಗೆ ಈ ಮಾಹಿತಿ ದೊಡ್ಡ ಶಾಕ್ ಆದಂಗೆ ಆಗಿದೆ.. ಆದರೆ ಸುಫಾರಿ ಕೋಟ್ಟಿರುವವರು ಯಾರು ಎಂಬುದು ಮಾತ್ರ ತಿಳಿದು ಬಂದಿಲ್ಲ,, ಖಾಸಗಿ ವಾಹಿಯೊಂದು ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದೆ.. ರಾಕಿಬಾಯ್ ಸ್ಕೆಚ್ ಬಗ್ಗೆ ಸ್ಲಂ ಭರತ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Edited By

Manjula M

Reported By

Manjula M

Comments