'ಅಯೋಗ್ಯ' ಸಿನಿಮಾ ನಟಿಯಿಂದ ಬ್ಲಾಕ್'ಮೇಲ್ : ಪ್ರಿಯಕರನಿಂದಲೇ ದೂರು..!!!

09 Mar 2019 10:49 AM | Entertainment
268 Report

ಅಂದಹಾಗೇ ಈಕೆ  ಸಕ್ಸಸ್ ಸಿನಿಮಾ 'ಅಯೋಗ್ಯ' ಚಿತ್ರದ ನಟಿ.  ನಿನಾಸಂ ಸತೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾರಾಂ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಈಕೆ ತನ್ನ ಸ್ನೇಹಿತನ ಜೊತೆ ಕೆಲ ದಿನಗಳಿಂದ ರಿಲೇಶನ್'ಶಿಪ್ ನಲ್ಲಿದ್ದಳು.' ಲಿವಿಂಗ್ ಟುಗೆದರ್'ನಲ್ಲಿದ್ದ ನಮ್ಮಿಬ್ಬರಲ್ಲಿ ಸಲುಗೆ ಕೂಡ ಬೆಳೆಯಿತು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದೆವು ಆದರೆ ಈಕೆ ಹೀಗ್ಯಾಕೆ ಮಾಡುತ್ತಿದ್ದಾಳೆ ಗೊತ್ತಿಲ್ಲವೆಂದು ಪ್ರಶಾಂತ್ ಎಂಬುವವರು ನಟಿಯ ವಿರುದ್ಧ ದೂರು ನೀಡಿದ್ದಾರೆ'. ತನ್ನ ಸ್ನೇಹಿತನಿಗೆ  ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂಬ ಆರೋಪ ಅಯೋಗ್ಯ ಸಿನಿಮಾದ ಸಹನಟಿಯಾಗಿರುವ ದೃಶ್ಯ ಮೇಲಿದೆ. 

ತಮ್ಮ ಸ್ನೇಹಿತ ಪ್ರಶಾಂತ್ ಜೊತೆ ಕಳೆದೆರಡು ವರ್ಷಗಳಿಂದ  ಸಂಬಂಧದಲ್ಲಿದ್ದಳು. ಆದರೆ ಕೆಲವರ ಜೊತೆ ಸೇರಿಕೊಂಡು ಇದೀಗ ನನ್ನನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ, ತನ್ನ ಖಾಸಗಿ ಫೋಟೋಗಳನ್ನು ಲೀಕ್ ಮಾಡುತ್ತೇನೆಂದು ಹೆದರಿಸುತ್ತಾಳೆ ಎಂದು ಪ್ರಶಾಂತ್ ಎಂಬುವವರು ಸೈಬರ್ ಕ್ರೈಂ ಪೊಲೀಸ್ ಠಾಣೆ ಗೆ ದೃಶ್ಯ ವಿರುದ್ಧ ದೂರು ನೀಡಿದ್ದಾರೆ. ದೃಶ್ಯ, ಪ್ರಶಾಂತ್ ಜೊತೆ ಎರಡು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದಳು. ಸಲುಗೆ ಬೆಳೆಸಿಕೊಂಡಿದ್ದ ಈಕೆ ಪ್ರಶಾಂತ್ ಇನ್ ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್ ಪಾಸ್ವರ್ಡ್ ತಿಳಿದುಕೊಂಡು ಚೆಕ್ ಮಾಡುತ್ತಿದ್ದಳು. ನಾನು ಸಾಕಷ್ಟು ಬಾರಿ ಕೇಳಿಕೊಂಡರು ಅವಳು, ಹಾಗೆ ಸುಮ್ಮನೇ ನೋಡುತ್ತಿದ್ದೇನೆ ಎನ್ನುತ್ತಿದ್ದಳು. ನಾನು ಅನೇಕ ಬಾರಿ ಈ ವಿಚಾರವಾಗಿ ಅವಳಿಗೆ ಬೈಯ್ದಿದ್ದೆ, ಆದರೆ ಆಕೆ ಇನ್ ಸ್ಟಾಗ್ರಾಂ ಬಳಸಿ ಅದರಲ್ಲಿ ಬೇರೆ ಹುಡುಗ-ಹುಡುಗಿಗೆ ಮೆಸೇಜ್ ಮಾಡುತ್ತಿದ್ದಳು. ಬೇರೆಯವರಿಗೆ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಪ್ರಶಾಂತ್ ಆರೋಪಿಸಿದ್ದಾರೆ.

ಅಲ್ಲದೇ ತನ್ನ ಖಾಸಗೀ ಫೋಟೋಗಳನ್ನು ಕೂಡ ದೃಶ್ಯ ಸಂಗ್ರಹಿಸಿದ್ದಳು. ನನ್ನ ಅಕೌಂಟ್’ನಿಂದ ಬೇರೆ ಹುಡುಗಿಯರಿಗೆ ಮೆಸೇಜ್ ಮಾಡುವುದು, ಆ ಮೂಲಕ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅವರ ಖಾಸಗಿ ಪೋಟೋಗಳನ್ನು ಹೇಗೋ ಕಲೆಕ್ಟ್ ಮಾಡಿರುವ ದೃಶ್ಯ, ತನ್ನ ಇನ್ಸ್ಟ್ರಾಗ್ರಾಂ ಬಳಸಿ ಬೇರೆ ಹುಡುಗಿಯರನ್ನು ದುಡ್ಡಿಗಾಗಿ ಪೀಡಿಸುತ್ತಿದ್ದಳು. ಅಷ್ಟೇ ಅಲ್ದೇ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಿ ಪ್ರಶಾಂತ್ ಸೈಬರ್ ಕ್ರೈಂ ಮೊರೆ ಹೋಗಿದ್ದಾರೆ. ದೃಶ್ಯ ಜೊತೆ ಕೆಲವೊಬ್ಬರು ಅವಳ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಅವರ್ಯಾರು ಅಂತಾ  ನನಗೆ ಗೊತ್ತಿಲ್ಲ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದು, ಈಕೆ ಹಿಂದೆ ಇರುವ ಕೆಲ ಮಂದಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸೈಬರ್ ಕ್ರೈಂ ಪೊಲೀಸರು ದೃಶ್ಯ ಮೊಬೈಲ್ ನ ಸೀಜ್ ಮಾಡಿದ್ದು, ಮೊಬೈಲ್‍ನನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

 

Edited By

Kavya shree

Reported By

Kavya shree

Comments