ಮಹಿಳಾ ದಿನಾಚರಣೆಗೆ ಪವರ್ ಸ್ಟಾರ್’ನಿಂದ ಸಿಕ್ತು ಪ್ರೀತಿಯ ಮಡದಿಗೆ ಐಷರಾಮಿ ಗಿಫ್ಟ್..?!! ಏನ್ ಗೊತ್ತಾ..?!!!

09 Mar 2019 10:11 AM | Entertainment
319 Report

ನಿನ್ನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಇದರ ಪ್ರಯುಕ್ತ ಸ್ಯಾಂಡಲ್ವು’ಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪ್ರೀತಿಯ ಮಡದಿ ಅಶ್ವಿನಿಗೆ ಭರ್ಜರಿ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ಅಂದಹಾಗೇ ತಮ್ಮ ಸಿನಿಮ ಾಕೆರಿಯರ್ ಮತ್ತು ವೈಯಕ್ತಿಕ ಬದುಕನ್ನು ಬ್ಯಾಲೆನ್ಸ್ ಮಾಡುವ ಕೌಶಲ್ಯ ಅಶ್ವಿನಿಗಿದೆ ಎನ್ನುತ್ತಾರೆ ಪವರ್’ಸ್ಟಾರ್. ನನಗೆ ಸದಾ ಒಂದು ಆಲೋಚನೆ ಇತ್ತು, ಈಕೆಗೆ ಏನಾದರೂ ಗಿಫ್ಟ್ ಕೊಡಬೇಕಲ್ಲಾ, ಅದಕ್ಕೆ ಯಾವ ಟೈಮ್ ಸರಿಯಿರುತ್ತೆ, ಮತ್ತು ಏನು ಗಿಫ್ಟ್ ಮಾಡೋದು ಅಂತೆಲ್ಲಾ ಯೋಚಿಸ್ತಾ ಇದ್ದೆ. ಕೊನೆಗೂ ಆಕೆ ಬಹುದಿನಗಳಿಂದ ೊಂದು ಆಸೆ ಇಟ್ಟುಕೊಂಡಿದ್ದರು. ಅದನ್ನೇ ಅವರಿಗೆ ಉಡುಗೊರೆಯಾಗಿ ನೀಡಿದೆ ಎನ್ನುತ್ತಾರೆ ಅಪ್ಪು.

ಆದರೆ ಪವರ್’ಸ್ಟಾರ್ ಈ ಬಾರಿ ತಮ್ಮ ಪತ್ನಿಗೆ ಅಂತದ್ದು ಇಂತದ್ದು ಅಲ್ಲಾ ರೀ, ಭರ್ಜರಿ ಗಿಫ್ಟ್’ ನ್ನೇ ಕೊಟ್ಟಿದ್ದಾರೆ. ಅದು ಐಷರಾಮಿ ಕಾರ್’ವೊದನ್ನು ಪ್ರೆಸೆಂಟ್ ಮಾಡಿದ್ದಾರೆ. ಮಡದಿಯ ಬಹುದಿನಗಳ ಇಷ್ಟದ ಲಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ. ಐದು ಕೋಟಿಗೂ ಮೀರಿದ ಐಶಾರಾಮಿ ಕಾರ್ ಇದಾಗಿದ್ದು ಈಗಾಗಲೇ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಲ್ಯಾಂಬೋರ್ಗಿನಿ ಕಾರಿನ ಒಡೆಯರಾಗಿದ್ದಾರೆ. ಈಗಾಗಲೇ ಪುನೀತ್ ರಾಜ್ ಕುಮಾರ್ ಗೂ ಕಾರ್ ಕ್ರೇಜ್ ಇದೆ. ಈಗಾಗಲೇ ಅವರ ಬಳಿ ರೋಲ್ಸ್ ರಾಯ್ ಸೇರಿದಂತೆ ಅನೇಕ ಕಾರ್‍ಗಳ ಕಲೆಕ್ಷನ್ ಇದೆ.

ಇದೀಗ ಬಾಳಿಗೆ ಬೆಳಕಾಗಿ ಬಂದ ಧರ್ಮಪತ್ನಿಗೆ ಮಹಿಳಾ ದಿನಾಚರಣೆಯ ದಿನವೇ ಇಷ್ಟದ ಉಡುಗೊರೆ ಕೊಡುವ ಮೂಲಕ ಮೂಲಕ ಮಹಿಳೆಯರಿಗೆ ಗೌರವ ಸೂಚಿಸಿದ್ದಾರೆ. ನಟಸಾರ್ವಭೌಮ ಸಿನಿಮಾ ಸಕ್ಸಸ್ ನಲ್ಲಿರುವ  ಪುನೀತ್ ಗೆ ಈ  ಹೊಸ ಕಾರ್’ನಿಂದ ಮತ್ತಷ್ಟು ಖುಷಿಯಾಗಿದೆಯಂತೆ. ಪುನೀತ್ ರಾಜ್ ಕುಮಾರ್ ಅವರ ಮನೆಗೆ ಹೊಸ ಅತಿಥಿ ಸೇರ್ಪಡೆಯಾಗಿದ್ದಾರೆ.  ಅಪ್ಪು ತಮ್ಮ ಮಡದಿಯೊಂದಿಗೆ ಹೋಗಿ ಕಾರ್ ತೆಗೆದುಕೊಂಡು ಬಂದಿದ್ದಾರೆ. ಇಬ್ಬರು ಕಾರ್’ನೊಂದಿಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿದೆ.

Edited By

Kavya shree

Reported By

Kavya shree

Comments