‘ನೀನು ನನಗಾಗಿಯೇ ಹುಟ್ಟಿದ್ದೀಯಾ ರಾಧಿಕಾ’: ರಾಕಿಂಗ್ ಸ್ಟಾರ್ ಗ್ರೇಟ್ ವಿಶಸ್ ಹೇಗಿತ್ತು ಗೊತ್ತಾ..?!!!

08 Mar 2019 12:38 PM | Entertainment
441 Report

ನಿನ್ನೆಯಷ್ಟೇ ಸ್ಯಾಂಡಲ್’ವುಡ್ ಸಿಂಡ್ರೆಲಾ ಬರ್ತ್ ಡೇ ಆಗಿದೆ. ತಾನು ಬೆಂಗಳೂರಲ್ಲಿ ಇಲ್ಲ, ದಯವಿಟ್ಟು ಕ್ಷಮಿಸಿ ನೆಕ್ಸ್ಟ್ ಬರ್ತ್’ಡೇ ಗೆ ಖಂಡಿತವಾಗಿಯೂ ನಿಮ್ಮೊಂದಿಗೆ ಇರುತ್ತೇನೆಂದು ಅಭಿಮಾನಿಗಳಿಗಾಗಿ  ಸ್ಸಾರಿ ಕೇಳಿ ವಿಡಿಯೋ ಪೋಸ್ಟ್ ಮಾಡಿದ್ರು. ಆ ವಿಡಿಯೋವನ್ನು ಎಲ್ಲಾ ಫ್ಯಾನ್ಸ್ ಗೂ ಶೇರ್ ಮಾಡಿ ಎಂದು ಕೂಡ ಮನವಿ ಮಾಡಿಕೊಂಡಿದ್ದರು. ರಾಧಿಕಾ ಪಂಡಿತ್  ಅವರು ಅಭಿಮಾನಿಗಳ ಮೇಲಿಟ್ಟಿರುವ ಪ್ರೀತಿಗೆ ಅವರನ್ನು ಎಲ್ಲರು ಪ್ರೀತಿಸ್ತಾರೆ. ರಾಧಿಕಾ, ನಿನ್ನೆ ಎಷ್ಟೇ ಪ್ರಯತ್ನಪಟ್ಟರೂ ಬೆಂಗಳೂರಿಗೆ ಬರೋದಿಕ್ಕೆ ಆಗಲಿಲ್ವಂತೆ.

ಅನಿವಾರ್ಯ ಕಾರಣಗಳಿಗಾಗಿ ನಾನು ಬೆಂಗಳೂರಿನಲ್ಲಿಲ್ಲ ಎಂದಿದ್ದರು. ಆದರೆ ಪ್ರೀತಿಯ ಕ್ವೀನ್, ಮುದ್ದು ಸಿಂಡ್ರೆಲಾಗೆ ಪತಿ ಯಶ್ ಹುಟ್ಟುಹಬ್ಬದ ವಿಶಸ್ ತಿಳಿಸಿದ್ದಾರೆ.ಅಂದಹಾಗೇ ಸ್ಯಾಂಡಲ್’ವುಡ್ ಈ ಕ್ಯೂಟ್ ಕಪಲ್  ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಕುತೂಹಲ. ಯಶ್ ತಮ್ಮ ಮಡದಿಗೆ ಯಾವ ರೀತಿ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ ಗೊತ್ತಾ…?.ನಟ ಯಶ್ ಅವರು  ಟ್ವಿಟ್ಟರ್, ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. “ಈ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕಿಂತ, ಈ ಬದುಕಿನಲ್ಲಿ ನನ್ನ ಜೊತೆ ಯಾರಿದ್ದಾರೆ ಎಂಬುದರಿಂದ ನನ್ನ ಬದುಕು ಸುಂದರವಾಗಿದೆ. ನಿನಗೆ ಧನ್ಯವಾದ. ನೀನು ನನಗಾಗಿಯೇ ಹುಟ್ಟಿದ್ದೀಯಾ ಎಂದು ನನಗೆ ಭಾಸವಾಗುತ್ತದೆ. ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಟ್ವೀಟ್ ಮಡಿದ್ದಾರೆ. ಅಂದಹಾಗೇ ತಮ್ಮ ಟ್ವಿಟ್ಟರ್ ನಲ್ಲಿ ಇಬ್ಬರ ಚಂದದ ಫೋಟೋ ಹಾಕಿದ್ದಾರೆ.

Edited By

Kavya shree

Reported By

Kavya shree

Comments