ಈ ಬಾರಿ ಅಮ್ಮನಿಗಷ್ಟೇ ಅಲ್ಲ, ‘ಅವರಿಗೂ’ ಸಪೋರ್ಟ್ ಮಾಡ್ತೀನಿ, ಕ್ಯಾಂಪೇನ್’ಗೂ ಹೋಗ್ತೀನಿ : ಚಾಲೆಂಜಿಂಗ್ ಸ್ಟಾರ್...!!!

08 Mar 2019 10:18 AM | Entertainment
1970 Report

ಈ ಬಾರಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೇ ರಾಜ್ಯದ ಘಟಾನುಘಟಿ ರಾಜಕೀಯ ನಾಯಕರ ಹೆಸರುಗಳ ಜೊತೆ ಸ್ಯಾಂಡಲ್ವುಡ್’ನ ಸ್ಟಾರ್ ನಟರ ಹೆಸರುಗಳು ಕೂಡ ಅಷ್ಟೇ ಪ್ರಬಲವಾಗಿ ಕೇಳಿ ಬರುತ್ತಿವೆ.  ಅದರಲ್ಲಿ ಮಂಡ್ಯ ರಾಜಕೀಯ ಕಣ ಮತ್ತಷ್ಟು ರಂಗೇರುತ್ತಿದೆ. ಜನತೆಯಲ್ಲಿ ರಾಜಕೀಯ ಕೌತುಕ ಹೆಚ್ಚಾಗುತ್ತಿದೆ. ಸಂಬಂಧ –ಸ್ನೇಹ, ಆತ್ಮೀಯತೆಯನ್ನು ಮೀರಿ ರಾಜಕೀಯ ನಡೆಯುತ್ತಿದೆ. ಇನ್ನು ಸ್ಪರ್ಧಿಗಳು ಯಾವ ಯಾವ ಪಕ್ಷ, ಟಿಕೆಟ್ ಯಾರು ಯಾರಿಗೆ ಎಂಬುದೇ ಕನ್ಫರ್ಮ್ ಆಗಿಲ್ಲ. ಅದಾಗಲೇ ನಾನು ಯಾರ ಪರ ಕ್ಯಾಂಪೇನ್ ಮಾಡ್ತೀನಿ ಎಂದು ಸ್ಟಾರ್ ನಟರು ಹೇಳಿಕೆ ಕೊಡುತ್ತಿದ್ದಾರೆ.

ಅಂದಹಾಗೇ ಸುಮಲತಾ ಅಂಬರೀಶ್ ಪರ ಕ್ಯಾಂಪೇನ್ ಮಾಡೋಕೆ ನಾನು ಯಾವಗಲೂ ಸತ ಸಿದ್ಧ. ಅಮ್ಮ ಯಾವಾಗ ಕರೆಯುತ್ತಾರೋ, ಅಂದು ಹೋಗುತ್ತೇನೆ ಎಂದು  ಚಾಲೆಂಜಿಂಗ್ ಸ್ಟಾರ್ ಹೇಳಿರುವ ಮಾತು ಸುಮಲತಾಗೆ ಆನೆಬಲ ಬಂದಂತಿದೆ. ಒಟ್ಟಾರೆ ಕಾಂಗ್ರೆಸ್ ಟಿಕೆಟ್ ಕೊಡಲೀ ಬಿಡಲೀ, ಲೋಕಸಭೆ ಚುನಾವಣೆಗೆ ಅಂಬಿ ಹೆಸರು ಉಳಿಸಲು ಸುಮಲತಾ ಸ್ಪರ್ಧಿಸುವುದು ಗ್ಯಾರಂಟಿ. ಈಗಾಗಲೇ ಪ್ರಚಾರ ಭರಾಟೆ ಕೂಡ ಜೋರಾಗಿ ಸದ್ದು ಮಾಡುತ್ತಿದೆ 'ಅಮ್ಮ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರ ಜತೆಗೆ ನಾವಿದ್ದೇವೆ. ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆಂದರೆ ನಾವು ಪ್ರಚಾರಕ್ಕೆ ಹೋಗುತ್ತೇವೆ. ನಾನೂ ಅವರ ಮನೆಯವನಂತೆ. ಅವರ ಜತೆಗೆ ನಾನು ಯಾವತ್ತೂ ಇರುತ್ತೇನೆ' ಎಂದು ದರ್ಶನ್ ಹೇಳಿದ್ದಾರೆ.ಈ ಬಾರಿ ಸುಮಲತಾ ಅವರಷ್ಟೇ ಅಲ್ಲ. ಈ  ಸಲದ ಚುನಾವಣೆಗೆ ನನ್ನ ಸ್ನೇಹಿತರು, ಹಿತೈಷಿಗಳು ಯಾರೇ ಆಗಿದ್ದರೂ, ಪಕ್ಷ ಯಾವುದೇ ಆಗಿದ್ದರೂ, ಅವರು ಕರೆದಾಗ ನಾನು ಖಂಡಿತಾ ಹೋಗುತ್ತೇನೆ. ನನಗೆ ರಾಜಕೀಯ ಗೊತ್ತಿಲ್ಲ, ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ, ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Edited By

Kavya shree

Reported By

Kavya shree

Comments